ಬೆಂಗಳೂರು: ‘ಬಿ.ಸಿ.ಪಾಟೀಲ ಅವರೇ ರೈತರಿಗೆ ಬೇಕಾದ ಗೊಬ್ಬರ ಕೊರತೆ ನೀಗಿಸಲಾಗದ ನೀವು ನಿಜವಾದ ಹೇಡಿಯಲ್ಲವೇ?’ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಜ್ಯ ಸರ್ಕಾರವನ್ನು ಟೀಕಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಇಷ್ಟು ದಿನ ಡಿಎಪಿ ಗೊಬ್ಬರದ ಕೊರತೆ, ಈಗ ಯೂರಿಯಾ ಗೊಬ್ಬರದ ಕೊರತೆ. ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡುವ ಎಲ್ಲಾ ಕೆಲಸಗಳನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದೆ.
‘ರೈತರನ್ನು ಹೇಡಿಗಳು ಎಂದಿದ್ದ ಬಿ.ಸಿ.ಪಾಟೀಲ ಅವರೇ, ಗೊಬ್ಬರ ಕೊರತೆ ನೀಗಿಸಲಾಗದ ನೀವು ನಿಜವಾದ ಹೇಡಿಯಲ್ಲವೇ? ಕೃಷಿ ಸಚಿವರಾಗಿ ಲೂಟಿಯೊಂದನ್ನು ಬಿಟ್ಟು ಬೇರೇನು ಮಾಡಿದ್ದೀರಿ?’ ಎಂದು ಕಾಂಗ್ರೆಸ್ ಕಿಡಿಕಾರಿದೆ.
‘ಸಿಎಂ ಬೊಮ್ಮಾಯಿ ಅವರು ಪದೇ ಪದೇ ದೆಹಲಿಗೆ ಪ್ರವಾಸ ಕೈಗೊಳ್ಳುತ್ತಿರುವುದರಲ್ಲಿಯೇ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಇವರ ಪ್ರವಾಸ ರಾಜ್ಯದ ಹಿತಕ್ಕಲ್ಲ, ಕುರ್ಚಿ ಕಿತ್ತಾಟ ಶಮನಕ್ಕಾಗಿ. ದೆಹಲಿಯಲ್ಲೇ ಹೆಚ್ಚು ಕಾಲ ಕಳೆಯುವ ಅವರು, ರಾಜ್ಯಕ್ಕೆ 'ಅತಿಥಿ ಸಿಎಂ'ನಂತಾಗಿದ್ದಾರೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.