ತೇಜಸ್ವಿ ಸೂರ್ಯ ಹೇಳಿಕೆ ಕೇಳಿ ಹೂಡಿಕೆದಾರರು ಬೆಂಗಳೂರಿಗೆ ಬರುತ್ತಾರೆಯೇ: ಡಿಕೆಶಿ

ಬೆಂಗಳೂರು: ‘ಬೆಂಗಳೂರನ್ನು ಭಯೋತ್ಪಾದನೆಯ ಕೇಂದ್ರಬಿಂದು ಎಂದು ಕರೆದ ಮೇಲೆ ಯಾವ ಹೂಡಿಕೆದಾರರು ಬೆಂಗಳೂರು ಮತ್ತು ಕರ್ನಾಟಕಕ್ಕೆ ಬರುತ್ತಾರೆ,’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸೋಮವಾರ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್, ‘ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಖ್ಯಾತಿ ಪಡೆದಿರುವ ಬೆಂಗಳೂರನ್ನು ಭಯೋತ್ಪಾದನೆಯ ಕೇಂದ್ರಬಿಂದು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕರೆದಿರುವುದು ಖಂಡನೀಯ. ಜಿಡಿಪಿ ಬೆಳವಣಿಗೆ ಕುಸಿದಿರುವ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರ ಹೇಳಿಕೆಯಿಂದಾಗಿ ಯಾವ ಹೂಡಿಕೆದಾರರು ಬೆಂಗಳೂರು ಮತ್ತು ಕರ್ನಾಟಕಕ್ಕೆ ಬರುತ್ತಾರೆ? ಪ್ರಧಾನಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಉತ್ತರಿಸುತ್ತಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
BJP MP @Tejasvi_Surya calling Bengaluru, a global city known for Technology and Innovation, as an epicenter of terror is highly condemnable.
GDP growth has crashed and with such statements, which investor will come to Bengaluru & Karnataka?
Will PM and FM @nsitharaman answer?
— DK Shivakumar (@DKShivakumar) September 28, 2020
ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ, ನಗರದಲ್ಲಿ ಎನ್ಐಎ ಮಾಡಿರುವ ಹಲವು ಬಂಧನಗಳು ಅದನ್ನು ಸಾಬೀತು ಮಾಡಿವೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಶಾಶ್ವತ ವಿಭಾಗವನ್ನು ಸ್ಥಾಪಿಸುವಂತೆ ನಾನು ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದೆ. ಶೀಘ್ರದಲ್ಲೇ ಎನ್‌ಐಎಯನ್ನು ಸ್ಥಾಪಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಹೇಳಿದ್ದರು.
Bengaluru has become epicenter of terror activities, proven through many NIA arrests & busted sleeper cells in the city. I urged HM Amit Shah Ji to set up a permanent division of National Investigation Agency (NIA) there. He assured it will be set up soon: Tejasvi Surya, BJP MP. pic.twitter.com/iHWt6r2MyA
— ANI (@ANI) September 27, 2020
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.