ಮಂಜಿನ ವಾತಾವರಣವು ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತದೆ. ಮಂಜಿನಿಂದ ಆವೃತವಾಗಿರುವ ಬೆಟ್ಟ ಗುಡ್ಡಗಳಿಗೆ ಭೇಟಿ ನೀಡುವುದು ವಿಭಿನ್ನ ಅನುಭವ ನೀಡುತ್ತದೆ. ಡೆಕ್ಕನ್ ಹೆರಾಲ್ಟ್ ವರದಿ ಮಾಡಿರುವಂತೆ ವಿಶ್ವದ 10 ಪ್ರಮುಖ ಮಂಜಿನಿಂದ ಆವೃತವಾಗಿರುವ ಸ್ಥಳಗಳ ಪಟ್ಟಿ ಇಲ್ಲಿದೆ.

ಸ್ಯಾನ್ ಫ್ರಾನ್ಸಿಸ್ಕೋ :

ಪೆಸಿಫಿಕ್ ಸಾಗರದ ದಟ್ಟವಾದ ಮಂಜು ಸ್ಯಾನ್ ಫ್ರಾನ್ಸಿಸ್ಕೋವನ್ನು ಸುತ್ತುವರೆದಿರುತ್ತದೆ. ಇಲ್ಲಿನ ಪ್ರಸಿದ್ಧ ಸೇತುವೆ ಗೋಲ್ಡನ್ ಗೇಟ್ ಸೇತುವೆ ಆಗಾಗ ಮಂಜಿನಿಂದ ಆವೃತವಾಗಿರುತ್ತದೆ. ಇಲ್ಲಿನ ಶಿಖರ ಮಂಜಿನ ಹೊದಿಕೆಯಂತಾಗಿ ಈ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಮೌಂಟ್ ಫ್ಯೂಜಿ

ಜಪಾನ್ನ ಅತಿ ಎತ್ತರದ ಪರ್ವತವಾಗಿರುವ ಮೌಂಟ್ ಫ್ಯೂಜಿ ಮುಂಜಾನೆಯ ಮಂಜಿನಿಂದ ಆವೃತವಾಗಿ, ಶಾಂತ ಸ್ವರೂಪದಿಂದ ಕಾಣುತ್ತದೆ. ಕವಾಗುಚಿಕೊ ಸರೋವರದಿಂದ ಮೌಂಟ್ ಫ್ಯೂಜಿಯನ್ನು ನೋಡುವಾಗ ತೇಲುತ್ತಿರುವ ಮೋಡಗಳ ಜೊತೆಗೆ ಇದರ ಪ್ರತಿಬಿಂಬ ನೀರಿನಲ್ಲಿ ಕಾಣುತ್ತದೆ.

ಮುನ್ನಾರ್

ಮುನ್ನಾರ್ನ ಚಹಾ ತೋಟಗಳು ಬೆಳಗಿನ ಮಂಜಿನ ಮುಸುಕಿನಿಂದ ಹೊರಬರುತ್ತವೆ– ಮುನ್ನಾರ್ನ ಚಹಾ ತೋಟಗಳು ಬೆಳಗಿನ ಮಂಜು ಮುಸುಕಿದ ವಾತಾವರಣದಿಂದ ಕೂಡಿದ್ದು, ವಿಶೇಷ ಅನುಭವ ನೀಡುತ್ತವೆ.

ಕೊಡಗು:

‘ಭಾರತದ ಸ್ಕಾಟ್ಲೆಂಡ್’ ಎಂದು ಕರೆಯಲ್ಪಡುವ ಕೊಡಗಿಗೆ ಮಂಜು ಸದಾ ಅಪ್ಪಿಕೊಂಡಂತೆ ಬಾಸವಾಗುತ್ತದೆ. ಇಲ್ಲಿನ ಪರಿಸರ ಹಚ್ಚ ಹಸಿರಿನಿಂದ ಕೂಡಿದ್ದು, ಬೆಳಗಿನ ವೇಳೆ ಮಂಜು ಮುಸುಕಿದ ಮಸಾಲೆ ತೋಟ ಹಾಗೂ ಕಾಫಿ ಎಸ್ಟೇಟ್ಗಳನ್ನು ನೋಡಬಹುದು. ಮಾನ್ಸೂನ್ ಮೋಡಗಳು ಬೆಟ್ಟಗಳನ್ನು ಆವರಿಸಿದಾಗ ಇಲ್ಲಿನ ವಾತವಾರಣ ಸಮುದ್ರದಂತೆ ಭಾಸವಾಗುತ್ತದೆ.

ಸ್ವಿಸ್ ಪ್ರಸ್ಥಭೂಮಿ

ಜುರಾ ಮತ್ತು ಆಲ್ಪ್ಸ್ ಪರ್ವತ ನಡುವಿನ ಪ್ರದೇಶವಾಗಿದೆ. ಇಲ್ಲಿನ ಹವಾಮಾನವು ಸಾಮಾನ್ಯವಾಗಿ ಸಮಶೀತೋಷ್ಣವಾಗಿರುತ್ತದೆ. ಚಳಿಗಾಲವು ಹೆಚ್ಚು ಶೀತ ಮತ್ತು ಮಂಜಿನಿಂದ ಕೂಡಿರುತ್ತದೆ.

ನಂದಿ ಬೆಟ್ಟ:

ಬೆಂಗಳೂರಿನ ಸಮೀಪದಲ್ಲಿರುವ ನಂದಿ ಬೆಟ್ಟವು ಮಂಜು ಮುಸುಕಿದ ಬೆಳಗಿನ ದೃಶ್ಯಗಳು ಮತ್ತು ಸೂರ್ಯೋದಯಕ್ಕೆ ಹೆಸರುವಾಸಿಯಾಗಿದೆ. ಚಳಿಗಾಲದಲ್ಲಿ ಬೆಟ್ಟವನ್ನು ಆವರಿಸಿರುವ ಮಂಜು ಮೋಡಿ ಮಾಡುತ್ತದೆ. ನಂದಿ ಬೆಟ್ಟವು ಪ್ರಕೃತಿ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿದೆ.

ಮಿಸ್ಟೇಕ್ ದ್ವೀಪ :

ಬಾರ್ ಹಾರ್ಬರ್ ಸಮೀಪದ ಮೈನೆಯಲ್ಲಿರುವ ಮಿಸ್ಟೇಕ್ ದ್ವೀಪವು ಅಟ್ಲಾಂಟಿಕ್ ಕರಾವಳಿಯಲ್ಲಿ ಅತ್ಯಂತ ಮಂಜಿನ ಸ್ಥಳ ಎಂಬ ದಾಖಲೆಯನ್ನು ಹೊಂದಿದೆ. ಅಟ್ಲಾಂಟಿಕ್ ಮಹಾಸಾಗರದ ಶೀತದ ಪ್ರಭಾವದಿಂದ ಈ ಸ್ಥಳ ಅತ್ಯಧಿಕ ಸಮಯದ ವರೆಗೆ ಮಂಜಿನಿಂದ ಆವೃತವಾಗಿರುತ್ತದೆ. ಪ್ರತಿ ವರ್ಷ 1,600 ಗಂಟೆಗಳಿಗೂ ಹೆಚ್ಚು ಕಾಲ ಇಲ್ಲಿ ಮಂಜು ಆವರಿಸುತ್ತದೆ.

ಗ್ಲೆನ್ಕೋ:

ಮಂಜಿನಿಂದ ಆವೃತವಾದ ಗ್ಲೆನ್ಕೋ ಇತ್ತಿಚೇಗೆ ತನ್ನ ವಾತಾವರಣದಲ್ಲಿ ಬದಲಾವಣೆ ಕಾಣುತ್ತಿದೆ. ಕಡಿದಾದ ಬಂಡೆಗಳ ಮೇಲೆ ಮಂಜು ಪದರವಾಗಿ ಹೊದಿಕೆಯಾಗುತ್ತದೆ. ಚಾರಣ ಪ್ರಿಯಾರಿಗೆ ಈ ಸ್ಥಳವು ರಮಣೀಯವಾಗಿ ಗೋಚರಿಸುತ್ತದೆ.

ಅರಾಶಿಯಾಮಾ:

ಇಲ್ಲಿನ ಮಂಜು ಕತ್ಸುರಾ ನದಿಯ ಅಂಚಿನಲ್ಲಿರುವ ಎತ್ತರವಾದ ಬಿದಿರಿಗೆ ತಾಗಿಕೊಂಡಂತೆ ಕಂಗೊಳಿಸುತ್ತದೆ. ಭೂಮಿ ಮತ್ತು ಆಕಾಶದ ಎರಡೂ ಸಂಧಿಸಿವೆ ಎಂಬ ಕಲ್ಪನೆ ಈ ಸ್ಥಳ ಕಟ್ಟಿಕೊಡುತ್ತದೆ. ಇಲ್ಲಿನ ದೋಣಿ ಯಾನವು ಸುಂದರ ಅನುಭವ ನೀಡುತ್ತದೆ.

ಹ್ಯಾಮಿಲ್ಟನ್:

ನ್ಯೂಜಿಲ್ಯಾಂಡ್ನ ಉತ್ತರ ದ್ವೀಪದಲ್ಲಿರುವ ನಾಲ್ಕನೇ ಅತೀ ದೊಡ್ಡ ನಗರವಾದ ಹ್ಯಾಮಿಲ್ಟನ್, ಸಮಶೀತೋಷ್ಣ ಹವಾಮಾನ ಹೊಂದಿದೆ. ವರ್ಷದಲ್ಲಿ ಸುಮಾರು 125 ಮಳೆಯ ದಿನಗಳೊಂದಿಗೆ, ಚಳಿಗಾಲವು ಹೆಚ್ಚು ತಂಪಾಗಿರುತ್ತದೆ. ಆಗಾಗ್ಗೆ ಅಂಕುಡೊಂಕಾದ ವೈಕಾಟೊ ನದಿಯುದ್ದಕ್ಕೂ ದಟ್ಟವಾದ ಮಂಜು ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.