ಅಂಡಮಾನ್ ಎನ್ನುವ ಮಾಂತ್ರಿಕ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಅನುಭವವೇ ಅನನ್ಯ. ಅಗಾಧ ಜಲರಾಶಿಯನ್ನು ಕಂಡು ಭೀತಿಗೊಂಡವರು, ಸಮುದ್ರದ ಆಳಕ್ಕೆ ಇಳಿಯುತ್ತಾ, ಇಳಿಯುತ್ತಾ ಹೊಸಲೋಕವನ್ನೇ ಕಂಡು ವಿಸ್ಮಯಗೊಂಡ ಪರಿ ಇಲ್ಲಿ ಆಪ್ತವಾಗಿ ಅನಾವರಣಗೊಂಡಿದೆ.

ನನಗೂ ನೀರಿಗೂ ಅಷ್ಟಕಷ್ಟೆ. ಸ್ಕೂಬಾ ಡೈವಿಂಗ್ ಮಾತಂತೂ ದೂರವೆ. ಅಂಡಮಾನ್ಗೆ ಹೋಗಿ ಬಂದಿದ್ದ ಗೆಳತಿಯರು ಸ್ಕೂಬಾ ಡೈವಿಂಗ್ ಅನ್ನು ವರ್ಣಿಸಿ, ಆಸೆ ಹುಟ್ಟಿಸುತ್ತಿದ್ದರು. ಅಂಡಮಾನ್ನ ವಿಶೇಷತೆಗಳಲ್ಲಿ ಪ್ರಮುಖವಾದದ್ದು ಈ ಸ್ಕೂಬಾ ಡೈವಿಂಗ್. ನಾವು ಹ್ಯಾವ್ಲಾಕ್ ಐಲ್ಯಾಂಡ್ಗೆ ತಲುಪಿದ ಕೂಡಲೇ ಸ್ಕೂಬಾ ಡೈವಿಂಗ್ಗೆ ಹೊರಟೆವು. ಏನೋ ಭಯ. ಆದರೂ ಎಲ್ಲರು ಸ್ಕೂಬಾದ ಸೂಟ್ ಹಾಕಿಕೊಂಡೆವು. ಧೈರ್ಯ ತಂದುಕೊಂಡು ಸೊಂಟದೆತ್ತರದ ನೀರಿನಲ್ಲಿ ಹೋದೆವು. ಅಲ್ಲಿ ತರಬೇತುದಾರರ ತಂಡವಿತ್ತು. ಅದರ ಲೀಡರ್ ಹರ್ಷಾಲಿ. ಅಲ್ಲಿ ನಮ್ಮ ತರಬೇತಿ ಶುರುವಾಯಿತು. ಆಕ್ಸಿಜನ್ ಮಾಸ್ಕ್ ಹಾಕಿಕೊಳ್ಳುವುದು, ಬಾಯಿಯಲ್ಲಿ ಉಸಿರಾಡುವುದು, ನೀರಿನಲ್ಲಿ ಕಿವಿ ಮುಚ್ಚಿದಂತೆ ಅನಿಸಿದರೆ ಗಾಳಿಯ ಒತ್ತಡವನ್ನು ಕಿವಿಯಿಂದ ರಿಲೀಸ್ ಮಾಡುವುದು, ನೀರಿನೊಳಗೆ ಕಣ್ಣು ಬಿಡುವುದು, ನೀರಿನೊಳಗೆ ಮಾತನಾಡಲು ಆಗದಿರುವುದರಿಂದ ಕೈ ಸನ್ನೆಗಳನ್ನು ಕಲಿಯಬೇಕಾಯಿತು.

ಬಳಿಕ ಬೋಟ್ ಮಧ್ಯ ಸಮುದ್ರಕ್ಕೆ ಬಂದು ನಿಂತಿತು. ತೀರದಲ್ಲಿ ಹಸಿರು, ತಿಳಿನೀಲಿ ಬಣ್ಣವಿದ್ದ ನೀರು, ಈಗ ಕಡುನೀಲಿ ಬಣ್ಣಕ್ಕೆ ತಿರುಗಿತ್ತು. ಹೊಟ್ಟೆ ತೊಳಸಿದಂತಾಯ್ತು. ಎಲ್ಲರಿಗೂ ಹಾಗೆ ಆಗುತ್ತಿತ್ತು. ಆದರೂ ಎಲ್ಲರು ಮುಖದಲ್ಲಿ ನಗು ತಂದುಕೊಂಡು ಅಲೆಗಳ ಹೊಡೆತಕ್ಕೆ ಅಲುಗಾಡುತ್ತಿದ್ದ ಬೋಟ್ನಲ್ಲಿ ಗಟ್ಟಿಯಾಗಿ ಕೂತೆವು. ನಮ್ಮ ಜೊತೆ ಟ್ರೈನರ್ಸ್ ಹುಡುಗರು ಮತ್ತು ಹರ್ಷಾಲಿ ಇದ್ದ ಬೋಟ್ ಪಕ್ಕಕ್ಕೆ ಬಂದು ನಿಂತಿತು. ನನಗೆ ನೀರಿಗೆ ಹಾರಲೋ, ಬೇಡವೋ ಎನ್ನುವ ಗೊಂದಲ ಶುರುವಾಯಿತು. ಜೊತೆಗಿದ್ದವರು ಹುರಿದುಂಬಿಸಿದರು. ಒಬ್ಬೊಬ್ಬರಾಗಿ ನೀರಿಗೆ ಹಾರಲು ತಯಾರಾದರು. ಪ್ರತಿಯೊಬ್ಬರ ಬೆನ್ನಿನಲ್ಲೂ 10-15 ಕೆ.ಜಿ.ಯ ಆಕ್ಸಿಜನ್ ಸಿಲಿಂಡರ್ ಇತ್ತು. ಕಾಲಿಗೆ ಆಕ್ವಾ ಶೂಗಳನ್ನೂ ಧರಿಸಿ, ಕಣ್ಣಿಗೆ ಉಪ್ಪುನೀರು ಒಳಹೋಗದ ಕನ್ನಡಕ ಹಾಕಿ, ಬೋಟ್ನ ಅಂಚಿಗೆ ಕೂರಿಸಿ ಇನ್ನೇನು ತಲೆ ಕೆಳಗಾಗಿ ಕಡುನೀಲಿ ಸಮುದ್ರಕ್ಕೆ ಹಾರಬೇಕು ಎನ್ನುವಾಗ ಭಯವಾಗಿ ‘ವ್ಯೇಟ್.. ವ್ಯೇಟ್..’ ಅಂತ ಜೋರಾಗಿ ಉಸಿರಾಡಲು ಶುರು ಮಾಡಿದೆ. ನಂತರದಲ್ಲಿ ನಾನೇ ಗಟ್ಟಿ ಮನಸ್ಸು ಮಾಡಿ, ಈಗ ಹೋಗದಿದ್ದರೆ ಜೀವಮಾನದಲ್ಲಿ ಇಂಥ ಸಂದರ್ಭ ಬರುವುದೇ ಇಲ್ಲ ಎಂದುಕೊಂಡು ‘ಓಕೆ’ ಎನ್ನುವಂತೆ ತಲೆಯಾಡಿಸಿದೆ. ನನ್ನನ್ನು ಹಿಡಿದಿದ್ದ ಟ್ರೈನರ್ ನೀರಿಗೆ ತಲೆ ಕೆಳಗಾಗಿ ದೂಡಿಯೇಬಿಟ್ಟರು!.

ಅಲ್ಲೇ ನೀರಿನಲ್ಲಿದ್ದ ಹರ್ಷಾಲಿ ತಲೆ ಕೆಳಗಾಗಿದ್ದ ನನ್ನನ್ನು ಸರಿಮಾಡಿ ನನ್ನ ಮುಂದಿದ್ದ ಫೋಟೊ ತೆಗೆಯುವ ಹುಡುಗನ ಕಡೆ ಮುಖ ಮಾಡಿ ಎಲ್ಲಾ ಓಕೆ ಎಂದು ತೋರಿಸಿ ಎಂದರು. ಸತ್ತೇ ಹೋದೆನೇನೋ ಅನಿಸಿ ಬಾಯಲ್ಲೂ ಉಸಿರಾಡಲು ಆಗದೆ ಗಾಬರಿಯಲ್ಲಿ ಏನು ತೋರಿಸಿದೆನೋ. ಹರ್ಷಾಲಿ ನಿಧಾನವಾಗಿ ನನ್ನನ್ನು ನೀರಿನ ಒಳಗೆ ಕರೆದುಕೊಂಡು ಹೋಗಲು ಶುರು ಮಾಡಿದರು. ನೀರಿನೊಳಗೆ ಹೋದ ಒಂದೇ ನಿಮಿಷದಲ್ಲಿ ಮೇಲೆ ಹೋಗೋಣ ಎಂದು ಸಿಗ್ನಲ್ ಕೊಟ್ಟೆ. ಉಪ್ಪುನೀರು ಕಣ್ಣೊಳಗೆ ಹೋಗಿ ಉರಿ ಶುರುವಾಯಿತು. ಮೇಲೆ ಬಂದು ಕನ್ನಡಕ ಸರಿ ಮಾಡಿಕೊಂಡು ಒಳಗೆ ಕರೆದುಕೊಂಡು ಹೋದರು. ಒಂದೇ ನಿಮಿಷ. ಉಸಿರಾಡಲು ಆಗುತ್ತಿಲ್ಲ ಎಂದು ಮತ್ತೆ ಮೇಲೆ ಬಂದೆ. ಈ ಬಾರಿ ಹರ್ಷಾಲಿಗೆ ‘ಸಾಕು, ನಾನು ಒಳಗೆ ಹೋಗೋಲ್ಲ. ಬೋಟ್ ಮೇಲೆ ಹತ್ತಿಸು’ ಎಂದೆ. ಹರ್ಷಾಲಿ, ‘ಒಂದೇ ಒಂದು ಫೋಟೊ ತೆಗೆದುಕೊಂಡು ಬರೋಣ’ ಎಂದರು. ಫೋಟೊ ಆಸೆಗೆ ಮತ್ತೆ ಹೋದೆ. ಭಯದಲ್ಲಿ ಹರ್ಷಾಲಿಯ ಎರಡೂ ಕೈಗಳನ್ನು ನನ್ನ ಸೊಂಟದ ಸುತ್ತ ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ‘ಇಬ್ಬರೂ ಮುಳುಗಿ ಹೋಗುವೆವು, ಒಂದು ಕೈಯನ್ನಾದರೂ ಬಿಡಿ’ ಎಂದರು ಹರ್ಷಾಲಿ. ಕಡೆಗೆ ಅವರ ಒಂದು ಕೈಯನ್ನು ಬಿಟ್ಟೆ. ನಿಧಾನವಾಗಿ ಕೆಳಗೆ ಹೋಗಲು ಶುರು ಮಾಡಿದರು. ಐದು ನಿಮಿಷ ಮಾತ್ರ ಸಾಕು ಎಂದು ಹೋದವಳು, ಅದು ಹೇಗೆ 45 ನಿಮಿಷ ಆಯಿತು. ಗೊತ್ತೇ ಆಗಲಿಲ್ಲ. ಕೆಳಗೆ ಹೋಗುತ್ತಾ ಹೋಗುತ್ತಾ, ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ನಲ್ಲಿ ನೋಡಿದಂತಹ ಸಮುದ್ರ ತಳದ ಪ್ರಪಂಚ ತೆರೆಯಲಿಕ್ಕೆ ಶುರುವಾಯಿತು.

ಸುಂದರವಾದ ಬಣ್ಣ ಬಣ್ಣದ ಮೀನುಗಳು, ಹವಳದ ದಿಬ್ಬಗಳು(ಕೋರಲ್)... ನೋಡುತ್ತಾ ನೋಡುತ್ತಾ ಒಂದೊಂದೇ ಮೀಟರ್ ಆಳಕ್ಕೆ ಹೋದಂಥೆಲ್ಲ ಹರ್ಷಾಲಿ ನನ್ನ ಮೂಗನ್ನು ಹಿಂಡಿ, ಕಿವಿಯಿಂದ ಏರ್ಪ್ರೆಶರ್ ಆಚೆ ಹಾಕುವಂತೆ ಮಾಡುತ್ತಿದ್ದರು. ಅವರು ಮೂಗು ಹಿಂಡಿದಾಗಲೆಲ್ಲ ಒಂದೊಂದೇ ಮೀಟರ್ ಆಳಕ್ಕೆ ಹೋಗುತ್ತಿದ್ದೆವು. ಸಮುದ್ರದ ಒಳಗಿನ ಫೋಟೊಗ್ರಾಫರ್ ನನ್ನ ಎದುರು ಬಂದು ಹ್ಯಾಂಡ್ ಸಿಗ್ನಲ್ ಮಾಡಿ ಫೋಟೊ ತೆಗೆಯುವಾಗ ಹರ್ಷಾಲಿ ನನ್ನ ಕೈಬಿಟ್ಟರು. ಫೋಟೊ ತೆಗೆದಾದ ಮೇಲೆ ಹುಡುಕಿದರೆ ಹರ್ಷಾಲಿಯ ಕೈ ಸಿಗುತ್ತಿಲ್ಲ. ಗಾಬರಿಯಾದೆ. ನನ್ನ ಹಿಂದೆಯೇ ಇದ್ದ ಅವರು, ದೂರದಲ್ಲಿದ್ದ ಕೋರಲ್ಗಳತ್ತ ಕೈ ಮಾಡಿ ಅಲ್ಲಿ ಹೋಗೋಣ ಎಂದರು.

ಸ್ಕೂಬಾ ಸೂಟಿನ ಕುತ್ತಿಗೆಯ ಹಿಂಭಾಗದ ಜಿಪ್ನ ತುದಿಯಲ್ಲಿ ಒಂದು ಬಾಲ ಇತ್ತು. ನಾನು ನೀರಿನಲ್ಲಿ ತಪ್ಪಿಸಿಕೊಳ್ಳದಂತೆ ಅದನ್ನು ಹಿಡಿದಿದ್ದರು. ಮುಂದೆ ಮುಂದೆ ಹೋದಂತೆ ಬಣ್ಣದ ಕೋರಲ್ಗಳು, ಬಣ್ಣ ಬಣ್ಣದ ಗುಂಪು ಗುಂಪು ಮೀನುಗಳು.. ಕೆಲವು ಕಡೆ ಆಳವಾದ ಬಾವಿಯಂತಹ ಜಾಗಗಳು, ಬಾವಿಯೊಳಗೆ ಹೋದರೆ ಅಲ್ಲಿರುವ ಕೋರಲ್ಗಳೇ ಬೇರೆ ತರಹದವು. ಅಲ್ಲಿರುವ ಮೀನುಗಳೂ ಬೇರೆ ತರಹದವು. ಬಾವಿಯೊಳಗೆ ಹೋದರೆ ಅದರೊಳಗಿನ್ನೊಂದು ಬಾವಿ.. ಅಂತಹ ಬಾವಿಯೊಳಗೆ ಇಳಿಯುವಾಗ ನಿಜಕ್ಕೂ ಭಯವಾಗುತ್ತಿತ್ತು. ಆದರೆ ಇನ್ನೊಮ್ಮೆ ಈ ರೀತಿಯ ಸಾಹಸ ಮಾಡುತ್ತೇನೋ, ಇಲ್ಲವೋ ಎಂದು ಸಮುದ್ರದ ಒಳಗಿನ ಲೋಕವನ್ನು ಕಣ್ತುಂಬಿಸಿಕೊಂಡು ಹರ್ಷಾಲಿಯೇ ಮೇಲೆ ಹೋಗೋಣ ಎಂದು ಕರೆಯುವತನಕ ಸುಮಾರು 15 ರಿಂದ 20 ಮೀಟರ್ ಆಳದಲ್ಲಿ ಕಂಡ ಹವಳದ ದಿಬ್ಬಗಳನ್ನು, ಮೀನುಗಳನ್ನು ಕಣ್ತುಬಿಕೊಂಡೆ.

ಅತ್ಯಂತ ವರ್ಣರಂಜಿತವಾಗಿ ಕಣ್ಣಿಗೆ ಹಬ್ಬದಂತೆ ಇದ್ದ ಹವಳಗಳು, ಮೀನುಗಳನ್ನು ನೋಡುವಾಗ ಹರ್ಷಾಲಿ ನನ್ನ ಕೈಬಿಟ್ಟದ್ದು ಮರೆತುಹೋಗಿತ್ತು. ಭಯವೂ ಮಾಯವಾಗಿ ಮತ್ತೆ ಈ ಸೊಬಗು ಸಿಗುವುದೋ ಇಲ್ಲವೋ ಎಂಬಂತೆ ಮನ ತುಂಬಿಕೊಂಡೆ. ಅಷ್ಟರಲ್ಲಿ ಹರ್ಷಾಲಿ ಮೇಲೆ ಹೋಗೋಣ ಎಂದು ಸಿಗ್ನಲ್ ಕೊಟ್ಟರು. ಒಂದೇ ನಿಮಿಷಕ್ಕೆ ರಾಕೆಟ್ನಂತೆ ಮೇಲೆ ಕರೆದುಕೊಂಡು ಬಂದರು. ಬೆನ್ನಿಗಿದ್ದ ಆಕ್ಸಿಜನ್ ಸಿಲಿಂಡರ್ ಸಿಕ್ಕಾಪಟ್ಟೆ ಭಾರವಿದ್ದುದ್ದರಿಂದ ಬೋಟ್ನ ಏಣಿಯನ್ನು ಅರ್ಧ ಹತ್ತಿ, ಇನ್ನೂ ನೀರಿನಲ್ಲೆ ಇದ್ದಾಗಲೇ ಸಿಲಿಂಡರ್ ಮತ್ತು ಕನ್ನಡಕವನ್ನು ಅಲ್ಲೇ ಬಿಚ್ಚಿ ಮೇಲೆ ಹತ್ತಿ ಬಂದೆ.

ಸ್ಕೂಬಾ ಡೈವಿಂಗ್ ನೆನಪು ಆಗಾಗ ಕನಸಿನಲ್ಲಿ ಬಂದು ಖುಷಿ ಕೊಡುತ್ತದೆ.

ಬಿಳಿ ಮರಳಿನ ರಹಸ್ಯ...

ಅಂಡಮಾನ್ ಸಮುದ್ರತೀರಗಳೆಲ್ಲ ಬಿಳಿಯಾದ ಸಣ್ಣ ಸಣ್ಣ ಕಲ್ಲಿನಂತಹ ಮರಳಿನಿಂದ ಕೂಡಿವೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಮರಳಿನಲ್ಲಿ ಹವಳದ ಸಣ್ಣ ಸಣ್ಣ ಚೂರುಗಳು ಇವೆ. ಅಲೆಗಳ ಹೊಡೆತಕ್ಕೆ ಹವಳ ಇಷ್ಟು ಸಣ್ಣ ಚೂರುಗಳಾಗಿ ದಡಕ್ಕೆ ಬಂದು ಬಿದ್ದಿವೆ ಎಂದು ನಾನಂದುಕೊಂಡಿದ್ದೆ. ಆದರೆ ಈ ಮರಳಿನ ತರಹದ ಹವಳದ ಚೂರುಗಳಿಗೆ ಕಾರಣ ಪಾರೆಟ್ ಮೀನುಗಳು. ಇದು ಸಮುದ್ರದೊಳಗಿನ ಹವಳದ ಅಸ್ಥಿಪಂಜರವನ್ನು ತಿಂದು ಅದರ ಪುಡಿಯನ್ನು ಹೊರಹಾಕುತ್ತವೆ. ಈ ಪುಡಿಯೇ ಮರಳಿನ ರೂಪದಲ್ಲಿ ಅಲೆಗಳ ಮೂಲಕ ದಡಕ್ಕೆ ಬಂದು ಶೇಖರಣೆಯಾಗಿ ಅಂಡಮಾನಿನ ಸುಂದರವಾದ ಬಿಳಿ ಮರಳಿನ ಬೀಚ್ಗಳಾಗಿವೆ. ಇದೆಲ್ಲಾ ಅದ್ಭುತಗಳನ್ನು ನೋಡಿದರೆ ಪ್ರಕೃತಿ ಎಲ್ಲಿಂದ ಎಲ್ಲಿಗೆ ತನ್ನ ಸರಪಳಿಯನ್ನು ಹೆಣೆದಿದೆ ಎಂದು ಗೊತ್ತಾಗುತ್ತದೆ. ನಾವು ಮನುಷ್ಯರು ಮಾತ್ರ ಈ ಸರಪಳಿಯ ಸೂಕ್ಷ್ಮತೆಗಳನ್ನು ಅರಿಯದೆ ಎಲ್ಲವನ್ನು ಹಾಳು ಮಾಡಲು ನಿಂತಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.