ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಚಿಕ್ಕಮಗಳೂರು ಕೂಡ ಒಂದು. ಅದರಲ್ಲೂ ವಾರಂತ್ಯ ಬಂದರೆ ಸಾಕು ಬೆಂಗಳೂರಿಗರು ಮಲೆನಾಡಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗುವುದನ್ನು ಕಾಣಬಹುದು. ನೀವೇನಾದರು ಕೊಟ್ಟಿಗೆಹಾರದ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಪ್ಲಾನ್ ಇದ್ದರೆ ಇಲ್ಲಿದೆ ಮಾಹಿತಿ.

ಕಳಸ– ಕಳಸೇಶ್ವರ ದೇವಸ್ಥಾನ:

'ದಕ್ಷಿಣ ಕಾಶಿ' ಎಂದೇ ಪ್ರಸಿದ್ಧವಾಗಿರುವ ಕಳಸೇಶ್ವರ ದೇವಾಲಯವು ಕರ್ನಾಟಕದ ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಕಳಸದಲ್ಲಿದೆ. ಸುತ್ತಲು ದಟ್ಟ ಅರಣ್ಯವಿದ್ದು, ಮಧ್ಯದಲ್ಲಿ ಕಳಸೇಶ್ವರ ದೇವಸ್ಥಾನವಿದೆ. ಕಳಸೇಶ್ವರ ದೇವಾಲಯವು ಭದ್ರ ನದಿಯ ದಡದಲ್ಲಿದೆ.

ತಲುಪುದು ಹೇಗೆ?

ಬೆಂಗಳೂರಿನಿಂದ ಕಳಸ 319.3 ಕಿಮೀ ಇದೆ. ಮೂಡಿಗೆರೆಯಿಂದ 57.2 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಬೆಂಗಳೂರಿನಿಂದ – ಹಾಸನ– ಮೂಡಿಗೆರೆ– ಕೊಟ್ಟಿಗೆಹಾರ ಮಾರ್ಗವಾಗಿ ಅಥವಾ ಬೆಂಗಳೂರಿನಿಂದ– ಚಿಕ್ಕಮಗಳೂರು–ಬಾಳೆಹೊನ್ನೂರು ಮಾರ್ಗವಾಗಿ ಕಳಸ ತಲುಪಬಹುದು. ಬೆಂಗಳೂರಿನಿಂದ ಕಳಸ ದೇವಸ್ಥಾನಕ್ಕೆ ಕೆಎಸ್ಆರ್ಟಿಸಿ ಬಸ್, ಬೈಕ್ ಹಾಗೂ ಟ್ಯಾಕ್ಸಿ ಮೂಲಕ ಹೋಗಬಹುದು.

ಹೊರನಾಡು ಅನ್ನಪೂರ್ಣೇಶ್ವರಿ:

ಕಳಸಕ್ಕೆ ಹೋದವರು ಅಲ್ಲೇ ಸಮೀಪ ಇರುವ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೂ ಹೋಗಬಹುದು. ಅನ್ನಪೂರ್ಣೇಶ್ವರಿಯನ್ನು ಅನ್ನಮಾತೆ ಎಂತಲೂ ಕರೆಯಲಾಗುತ್ತದೆ. ಹಿಂದೂ ಪುರಾಣಗಳ ನಂಬಿಕೆಯ ಪ್ರಕಾರ, ದೇವಿಗೆ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದರೆ ಅವರ ಜೀವನದಲ್ಲಿ ಅನ್ನದ ಕೊರತೆ ಇರುವುದಿಲ್ಲ ಎಂಬುವುದು ಭಕ್ತರ ನಂಬಿಕೆಯಾಗಿದೆ. ಹೊರನಾಡು ಕಳಸದಿಂದ 8 ಕಿ.ಮೀ ದೂರಲ್ಲಿದೆ. ಅನ್ನಪೂರ್ಣೇಶ್ವರಿ ದೇವಾಸ್ಥಾನದಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಬಸ್, ಸ್ವಂತ ವಾಹನ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು.

ಅಲ್ಲೇ ಸಮೀಪದಲ್ಲಿರುವ ರಾಣಿಝರಿ, ವಶಿಷ್ಠ ತೂಗು ಸೇತುವೆಗೆ ಭೇಟಿ ನೀಡಬಹುದು.

ರಾಣಿಝರಿ: ರಾಣಿಝರಿ ಸುಂದರ ಪ್ರಕೃತಿ ತಾಣಗಳಲ್ಲಿ ಒಂದಾಗಿದೆ. ಸ್ವಂತ ವಾಹನ ಅಥವಾ ಟ್ಯಾಕ್ಸಿ ಮೂಲಕ ರಾಣಿಝರಿಯನ್ನು ತಲುಪಬಹುದು. ಕೊಟ್ಟಿಗೆಹಾರದಿಂದ 23 ಕಿ.ಮೀ ಹಾಗೂ ಕಳಸದಿಂದ 29 ಕೀ.ಮಿ ದೂರದಲ್ಲಿದೆ.

ವಶಿಷ್ಠಾ ತೂಗು ಸೇತುವೆ : ಇದೊಂದು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ವಶಿಷ್ಠಾ ತೂಗು ಸೇತುವೆ ಕಂಜಿಕೆರೆ ಗ್ರಾಮದಲ್ಲಿದೆ. ಕಳಸದಿಂದ 1 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸ್ವಂತ ವಾಹನ ಅಥವಾ ಟ್ಯಾಕ್ಸಿಯಲ್ಲಿ ಹೋಗಬಹುದು. ಈ ಸ್ಥಳದಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.