ಶನಿವಾರ, ಜನವರಿ 18, 2020
18 °C

ರಾಹಿಯಲ್ಲಿ ಕ್ರಿಸ್‌ಮಸ್‌ ಮೆನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಹಿ ನಿಯೋ ಕಿಚನ್‌ ಆ್ಯಂಡ್‌ ಬಾರ್‌ನಲ್ಲಿ ಕ್ರಿಸ್‌ಮಸ್‌ಗೆಂದೇ ವಿಶೇಷವಾಗಿ ಮೆನು ಸಿದ್ಧಪಡಿಸಲಾಗಿದೆ. ಗ್ರಾಹಕರಿಗೆ ಹೊಸ ಖಾದ್ಯಗಳನ್ನು ಸಾಂಪ್ರದಾಯಿಕ ರುಚಿಯಲ್ಲಿ ನೀಡಬೇಕೆಂಬುದು ನಿಯೋ ಉದ್ದೇಶ. ಡಿ.24 ಹಾಗೂ 25ರಂದು ಮಧ್ಯಾಹ್ನ ಹಾಗೂ ರಾತ್ರಿ ಭೋಜನಕ್ಕೆ ನಿಯೋ ಶೆಫ್‌ಗಳು ಹೊಸ ರುಚಿಯ ಅಡುಗೆಗಳನ್ನು ತಯಾರಿಸಲಿದ್ದಾರೆ.

ನಾನ್‌ ವೆಜ್‌ ಸೆಟ್‌ ಮೆನು ದರ ಒಬ್ಬರಿಗೆ ₹1,299. ಇದರಲ್ಲಿ ಚಿಕನ್‌ ಚೆಟ್ಟಿನಾಡ್‌ ಸೂಪ್‌, ಲೈಟ್‌ ಕಾಕೊನೆಟ್‌ ಆ್ಯಂಡ್‌ ಚಿಕನ್‌ ಕರಿ, ಚೆಟ್ಟಿನಾಡ್‌ ಸ್ಪೈಸ್‌ ಮಿಕ್ಸ್‌ ಮೊದಲಾದವುಗಳ ರುಚಿಯನ್ನು ಸವಿಯಬಹುದು. ವೆಜ್‌ ಸೆಟ್‌ ಮೆನು ದರ ₹999. ಇದರಲ್ಲೂ ಸ್ಪೈಸ್ಡ್‌ ಪೀ ಸೂಪ್‌, ಚಾಕಲೇಟ್‌ ಮುಸ್ಸೆ, ಮಿಸ್ಸಿ ರೋಟಿ, ಕುಂಬಳಕಾಯಿ ಕುಲ್ಚಾದಂತಹ ತರಹೇವಾರಿ ಖಾದ್ಯಗಳನ್ನು ಉಣ್ಣಬಹುದು.

ಸ್ಥಳ: ರಾಹಿ, 15, ಮದ್ರಾಸ್‌ ಬ್ಯಾಂಕ್‌ ರಸ್ತೆ, ನೆಕ್ಸಾ ಷೋರೂಂ ಮೇಲ್ಗಡೆ, ಅಶೋಕ ನಗರ, ಮಧ್ಯಾಹ್ನ 12ರಿಂದ ರಾತ್ರಿ 12

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು