ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಐಎಎಸ್ ಅಧಿಕಾರಿ ಮನೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆದಿತ್ತೇ?

Last Updated 1 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

‘ಜಾರ್ಖಂಡ್‌ನಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರ ಮನೆಯಲ್ಲಿ ಮನೆಗೆಲಸದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಶೌಚಾಲಯವನ್ನು ನಾಲಿಗೆಯಿಂದ ಸ್ವಚ್ಛಗೊಳಿಸುವಂತೆ ಮಾಡಲಾಗಿತ್ತು. ರಾಜ್ಯದಲ್ಲಿ ಯುಪಿಎ ಸರ್ಕಾರದ ಆಡಳಿತ ವಿಫಲವಾಗಿದೆ. ಅದರ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂಬ ವಿವರ ಇರುವ ಟ್ವೀಟ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಳು ವೈರಲ್ ಆಗಿವೆ. ಇದೇ ಸ್ವರೂಪದ ಸುದ್ದಿಯನ್ನು ಹಲವು ಸುದ್ದಿ ಸಂಸ್ಥೆಗಳು ಟ್ವೀಟ್‌ ಮಾಡಿವೆ.

‘ಇದು ತಿರುಚಲಾದ ಮಾಹಿತಿ’ ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಈ ಪ್ರಕರಣದ ಪ್ರಮುಖ ಆರೋಪಿ ಸೀಮಾ ಪಾತ್ರಾ, ಜಾರ್ಖಂಡ್‌ ಬಿಜೆಪಿಯ ನಾಯಕಿ ಮತ್ತು ಬೇಟಿ ಬಚಾವೋ–ಬೇಟಿ ಪಢಾವೋ ಕಾರ್ಯಕ್ರಮದ ರಾಜ್ಯ ಸಂಚಾಲಕಿ. ಆದರೆ ಈ ಸುದ್ದಿಸಂಸ್ಥೆಗಳು, ಆರೋಪಿಯು ಬಿಜೆಪಿ ನಾಯಕಿ ಎಂಬುದನ್ನು ಮರೆಮಾಚಿ ಸುದ್ದಿ ಪ್ರಕಟಿಸಿವೆ. ಸೀಮಾ ಪಾತ್ರಾ ಅವರು ನಿವೃತ್ತ ಐಎಎಸ್‌ ಅಧಿಕಾರಿಯ ಪತ್ನಿ ಎಂದಷ್ಟೇ ಹೇಳಿವೆ. ಈ ಮೂಲಕ ಜನರ ಹಾದಿ ತಪ್ಪಿಸಿವೆ’ ಎಂದು ಆಲ್ಟ್‌ನ್ಯೂಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT