ನವದೆಹಲಿ: ಬಿಹಾರದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಇಂದು ಘೋಷಿಸುವುದಾಗಿ ಭಾರತೀಯ ಚುನಾವಣಾ ಆಯೋಗ ಹೇಳಿದೆ.

ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಮತ್ತು ಇತರ ಮಾಹಿತಿಗಳನ್ನು ಬಹಿರಂಗಗೊಳಿಸುವುದಾಗಿ ಆಯೋಗದ ಪ್ರಕಟಣೆ ತಿಳಿಸಿದೆ.

ಬಿಹಾರದಲ್ಲಿ ಸೆ.30ರಂದು ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್ಐಆರ್) ಪೂರ್ಣಗೊಳಿಸಿದೆ.

ಎಸ್ಐಆರ್ನ ಕೊನೆಯ ಪಟ್ಟಿಯ ಪ್ರಕಾರ, 47 ಲಕ್ಷ ಮತದಾರರು ಕಡಿಮೆಯಾಗಿ ಒಟ್ಟು 7.42 ಕೋಟಿ ಮತದಾರರು ಇದ್ದಾರೆ.

ಆಗಸ್ಟ್ನಲ್ಲಿ ಪ್ರಕಟಿಸಿದ್ದ ಕರಡುಪಟ್ಟಿಯಲ್ಲಿ ಗೈರು ಹಾಜರಿ, ಸ್ಥಳಾಂತರ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣಗಳನ್ನು ನೀಡಿ 65 ಲಕ್ಷ ಮತದಾರರ ಹೆಸರುಗಳನ್ನು ಹೊರಗಿಡಲಾಗಿತ್ತು. ಕರಡು ಪಟ್ಟಿಯಲ್ಲಿ ಬಿಟ್ಟುಹೋಗಿದ್ದ 21.53 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

243 ಸದಸ್ಯ ಬಲದ ಬಿಹಾರ ರಾಜ್ಯ ವಿಧಾನಸಭೆಯ ಅವಧಿ ನವೆಂಬರ್ 22 ರಂದು ಕೊನೆಗೊಳ್ಳಲಿದೆ.
.ಬಿಹಾರದಲ್ಲಿ 7.42 ಕೋಟಿ ಮತದಾರರು.ಬಿಹಾರ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ–ಕಲ್ಲೋಲ: ಬಿ.ವೈ. ವಿಜಯೇಂದ್ರ .ಬಿಹಾರ ಚುನಾವಣೆ: ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ಹೊಸ ಪಕ್ಷ ಘೋಷಣೆ.ಬಿಹಾರ ವಿಧಾನಸಭಾ ಚುನಾವಣೆ 2025: ಕಣಕ್ಕೂ ಮುನ್ನ ಲಾಲೂ ‘ಪರಿವಾರ’ದೊಳಗೆ ಕದನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.