ದರ್ಬಾಂಗ್: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ತಮ್ಮ ಮಗ ತೇಜಸ್ವಿಯವರನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ರನ್ನು ದೇಶದ ಪ್ರಧಾನಿ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ, ಎರಡೂ ಹುದ್ದೆಗಳು ಖಾಲಿಯಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಇಂಡಿಯಾ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
.Bihar Elections 2025 | ಘಟಬಂಧನ್ ಅಲ್ಲ, ಲಟಬಂಧನ್: ನರೇಂದ್ರ ಮೋದಿ.
ಬಿಹಾರದ ದರ್ಬಾಂಗ್ ಜಿಲ್ಲೆಯಲ್ಲಿ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಮಹಾಘಟಬಂಧನ್ ಎನ್ನುವುದು ‘ಥಗ್ ಬಂಧನ್’. ಲಾಲು ಪ್ರಸಾದ್ ಮೇವು, ಬಿಟುಮೆನ್ ಮತ್ತು ಭೂಮಿ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಇತ್ತ ಕಾಂಗ್ರೆಸ್ ₹12 ಲಕ್ಷ ಕೋಟಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದರು.

ಬಿಹಾರದ 8.52 ಕೋಟಿ ಜನರಿಗೆ ಎನ್ಡಿಎ ಸರ್ಕಾರ ಉಚಿತ ಪಡಿತರ ನೀಡುತ್ತಿದೆ. ಮಖಾನಾ ಮಂಡಳಿಯನ್ನು ಸ್ಥಾಪಿಸಿ, ಗೃಹಬಳಕೆದಾರರಿಗೆ 125 ಯೂನಿಟ್ ಉಚಿತ ವಿದ್ಯುತ್ ಒದಗಿಸುತ್ತಿದೆ. ದರ್ಬಾಂಗ್ ಶೀಘ್ರದಲ್ಲಿ ಮೆಟ್ರೊ ರೈಲನ್ನು ಹೊಂದಲಿದೆ. ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಏಮ್ಸ್ ನಿರ್ಮಾಣದ ಹಂತದಲ್ಲಿದೆ ಎಂದರು.
.ಬಿಹಾರ, ಪಶ್ಚಿಮಬಂಗಾಳದಲ್ಲಿ ಮತದಾರರಾಗಿ ನೋಂದಣಿ: ಪ್ರಶಾಂತ್ ಕಿಶೋರ್ಗೆ ನೋಟಿಸ್.Bihar Election 2025 | ಬಿಹಾರದಲ್ಲಿ ಯಾವ ಪಕ್ಷದತ್ತ ಯಾರ ಒಲವು.ಬಿಹಾರ ಚುನಾವಣೆ 2025: ಜನಸಂಖ್ಯೆಯಲ್ಲಿ ಪ್ರಮುಖ ಪಾಲು–ಪ್ರಾತಿನಿಧ್ಯ ನಗಣ್ಯ.ವಿಶ್ಲೇಷಣೆ | ಬಿಹಾರ: ಅಗ್ನಿಪರೀಕ್ಷೆಯ ಕುದಿನೆಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.