ನವದೆಹಲಿ: ಬಿಹಾರದ ಮತದಾರರ ಪರಿಷ್ಕೃತ ಪಟ್ಟಿಯನ್ನು ಚುನಾವಣಾ ಆಯೋಗವು ಬಿಡುಗಡೆಗೊಳಿಸಿ ಶನಿವಾರಕ್ಕೆ ಒಂಬತ್ತು ದಿನ ಪೂರ್ಣಗೊಂಡಿದೆ. ಆದರೆ, ಇದುವರೆಗೂ ಯಾವುದೇ ರಾಜಕೀಯ ಪಕ್ಷವು ಹೆಸರು ಸೇರ್ಪಡೆ ಅಥವಾ ತೆಗೆದು ಹಾಕುವ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ.

ಈಗಾಗಲೇ ಪಟ್ಟಿಯಲ್ಲಿ ಹೊರಗುಳಿದಿದ್ದ ಮತದಾರರ ಹೆಸರು ಸೇರ್ಪಡೆ, ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 1ರವರೆಗೆ ರಾಜಕೀಯ ಪಕ್ಷಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಮತಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಕುರಿತು ಆಗಸ್ಟ್ 1ರಿಂದ 9ರವರೆಗೆ ಯಾವುದೇ ರಾಜಕೀಯ ಪಕ್ಷಗಳು ಕೂಡ ಬೂತ್ ಮಟ್ಟದ ಏಜೆಂಟ್ಗಳನ್ನು ನೇಮಿಸಿರಲಿಲ್ಲ. ಇದೇ ವೇಳೆ 7,252 ಮಂದಿ ತಮ್ಮ ಹೆಸರು ಸೇರ್ಪಡೆ ಹಾಗೂ ತೆಗೆದುಹಾಕುವ ಸಂಬಂಧ ಆಯೋಗವನ್ನು ಸಂಪರ್ಕಿಸಿದ್ದಾರೆ ಎಂದು ತಿಳಿಸಿದೆ.

‘ಅರ್ಹ ಮತದಾರರು ಯಾವುದೇ ಕಾರಣಕ್ಕೂ ಬಿಟ್ಟು ಹೋಗಬಾರದು ಹಾಗೂ ಅನರ್ಹ ಮತದಾರರನ್ನು ಅಂತಿಮ ಪಟ್ಟಿಯಲ್ಲಿ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಹೀಗಾಗಿ, ಯಾವುದೇ ಆಕ್ಷೇಪಣೆ, ತಪ್ಪುಗಳು ಇದ್ದರೆ ದೂರು ಸಲ್ಲಿಸಿ, ಸರಿಪಡಿಸಿಕೊಳ್ಳಬಹುದು’ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು.

ಸೆಪ್ಟೆಂಬರ್ 30ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗವು ಈಗಾಗಲೇ ತಿಳಿಸಿದೆ.
.ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣೆ ಬಹಿಷ್ಕರಿಸುವ ಆಯ್ಕೆ ಮುಕ್ತ; ತೇಜಸ್ವಿ ಯಾದವ್.ಮತದಾರರ ಕರಡು ಪಟ್ಟಿ ಪ್ರಕಟಣೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ.SIR ವಿರೋಧಿಸಿ ಸೋನಿಯಾ ನೇತೃತ್ವದಲ್ಲಿ ‘ಇಂಡಿಯಾ’ ಪಕ್ಷಗಳ ಸಂಸದರ ಪ್ರತಿಭಟನೆ.ಚುನಾವಣಾ ಆಯೋಗ ಸದಾ ಮೋದಿ ಸರ್ಕಾರದ ಕೈಗೊಂಬೆಯಾಗಿದೆ: ಕಪಿಲ್ ಸಿಬಲ್.ಚುನಾವಣಾ ಆಯೋಗ ‘ಪಕ್ಷಪಾತಿ’: ರಾಹುಲ್ ಗಾಂಧಿ ವಾಗ್ದಾಳಿ .‘ಎಸ್ಐಆರ್’ ಬಹಳ ದೊಡ್ಡ ವಿಷಯ, ಚರ್ಚೆಗೆ ಸರ್ಕಾರ ಒಪ್ಪಿಕೊಳ್ಳಲೇಬೇಕು: ಪ್ರಿಯಾಂಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.