ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿರುವ ಸದ್ಗುರು ಜಗ್ಗಿ ವಾಸುದೇವ್. ‘ಹಿಂದೂಗಳ ಮೇಲಿನ ದೌರ್ಜನ್ಯಗಳು ಕೇವಲ ಬಾಂಗ್ಲಾದೇಶದ ಆಂತರಿಕ ವಿಷಯವಲ್ಲ’ ಎಂದಿದ್ದಾರೆ.
‘ಬಾಂಗ್ಲಾದಲ್ಲಿ ವಾಸಿಸುವ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲವಾದರೆ ಇಂಡಿಯಾ ಅಥವಾ ಭಾರತವು ಬಲಿಷ್ಠ ರಾಷ್ಟ್ರವಾಗಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಬಾಂಗ್ಲಾದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡುವಂತೆ ಮಾಡಿತು. ಹಿಂದೂಗಳು ಹಿಂಸಾಚಾರಕ್ಕೆ ಒಳಗಾದರು. ಬಾಂಗ್ಲಾದೇಶದ 27 ಜಿಲ್ಲೆಗಳಲ್ಲಿ ಹಿಂದೂ ಮನೆಗಳು ಮತ್ತು ವ್ಯಾಪಾರ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ರೀತಿಯ ದುಷ್ಕೃತ್ಯಗಳಿಂದ ನಿಜವಾಗಿ ಭಾರತೀಯ ನಾಗರಿಕತೆಗೆ ಸೇರಿದವರನ್ನು ರಕ್ಷಿಸುವುದು ಭಾರತದ ಜವಾಬ್ದಾರಿಯಾಗಿದೆ’ ಎಂದು ಸದ್ಗುರು ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ‘ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಕೇವಲ ಬಾಂಗ್ಲಾದೇಶದ ಆಂತರಿಕ ವಿಷಯವಲ್ಲ. ನಮ್ಮ ನೆರೆಹೊರೆಯಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಾತ್ರಿಪಡಿಸಲು ನಾವು ಆದಷ್ಟು ಬೇಗ ಎದ್ದುನಿಂತು ಕಾರ್ಯನಿರ್ವಹಿಸದಿದ್ದರೆ ಭಾರತವು ಮಹಾ–ಭಾರತವಾಗುವುದಿಲ್ಲ. ದುರದೃಷ್ಟವಶಾತ್ ಬಾಂಗ್ಲಾ ನಮ್ಮ ನೆರೆಯ ರಾಷ್ಟ್ರವಾಗಿದೆ. ನಮ್ಮ ನೆಲದ ನಾಗರಿಕರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
The atrocities being perpetrated against Hindus is not just an internal matter of #Bangladesh. Bharat cannot be Maha-Bharat if we do not stand up and act at the earliest to ensure the safety of minorities in our neighborhood. What was part of this Nation unfortunately became… pic.twitter.com/3pen0ucDay
— Sadhguru (@SadhguruJV) August 7, 2024
ಬಾಂಗ್ಲಾದಲ್ಲಿ ಹಿಂದೂಗಳ ಮೇಳಿನ ದೌರ್ಜನ್ಯವನ್ನು ಖಂಡಿಸಿರುವ ಯೋಗ ಗುರು ಬಾಬಾ ರಾಮ್‌ದೇವ್, ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಯಾವುದೇ ಕ್ರೌರ್ಯ ಅಥವಾ ದೌರ್ಜನ್ಯ ನಡೆಯಬಾರದು. ಅದು ಅಲ್ಲಿ ವ್ಯಾಪಾರದಲ್ಲಿ ತೊಡಗಿರುವ ಹಿಂದೂಗಳು, ಅಥವಾ ಅಲ್ಲಿ ಹಿಂದೂ ದೇವಾಲಯಗಳು ಅಥವಾ ಅಲ್ಲಿ ವಾಸಿಸುವ ಭಾರತೀಯರು ಯಾರ ಮೇಲೇ ಆಗಲಿ. ಇದಕ್ಕಾಗಿ ಇಡೀ ದೇಶವನ್ನು ಒಗ್ಗೂಡಿಸಬೇಕು’ ಎಂದು ಒತ್ತಾಯಿಸಿ, ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
#WATCH | Yog Guru Baba Ramdev says, "There should be no cruelty or atrocity on Hindus in Bangladesh - be it the Hindus who are involved in trade there, or Hindu temples there, or Indians living there. For this, the entire country has to be united. I am happy to see that for the… pic.twitter.com/hoxvJfMz8W
— ANI (@ANI) August 6, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.