ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ವಹಿವಾಟು: ಪರಿಸ್ಥಿತಿ ಆಧರಿಸಿ ಸೂಕ್ತ ಕ್ರಮ –ಸರ್ಕಾರ

Published 15 ಏಪ್ರಿಲ್ 2024, 15:26 IST
Last Updated 15 ಏಪ್ರಿಲ್ 2024, 15:26 IST
ಅಕ್ಷರ ಗಾತ್ರ

ನವದೆಹಲಿ: ‘ಇಸ್ರೇಲ್‌ ಮೇಲಿನ ದಾಳಿ ನಂತರದ ಬೆಳವಣಿಗೆಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ರಫ್ತುದಾರರಿಗೆ ಪರ್ಯಾಯವಾಗಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ರಫ್ತು ಉತ್ತೇಜನ ಮಂಡಳಿ, ಕಂಟೇನರ್ ಕಂಪನಿಗಳು, ಸಾಗಣೆ ಸಂಸ್ಥೆಗಳ ಜೊತೆಗೆ ಸಂಪರ್ಕದಲ್ಲಿದೆ ಎಂದು ಸಚಿವಾಲಯದ  ಕಾರ್ಯದರ್ಶಿ ಸುನಿಲ್‌ ಬಾರ್ತ್‌ವಾಲ್ ತಿಳಿಸಿದರು. 

ಪರಿಹಾರ ಕ್ರಮಗಳು ಅಗತ್ಯವಿದ್ದರೆ ಸಚಿವಾಲಯ ಮುಕ್ತವಾಗಿದೆ. ಒಟ್ಟು ಸ್ಥಿತಿ ಆಧರಿಸಿ ಭಾಗಿದಾರರ ಸಲಹೆ, ಅಭಿಪ್ರಾಯಗಳ ಆಧರಿಸಿ ಸಚಿವಾಲಯವು ತೀರ್ಮಾನಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT