ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಜುಲೈ 17, 18ರಂದು ವಿರೋಧ ಪಕ್ಷಗಳ ಮುಂದಿನ ಸಭೆ: ಕಾಂಗ್ರೆಸ್

ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಸೋಲಿಸುವ ಸಂಕಲ್ಪದಲ್ಲಿ ಅಚಲರಾಗಿದ್ದೇವೆ ಎಂದ ಕೆ.ಸಿ. ವೇಣುಗೋಪಾಲ್
Published 3 ಜುಲೈ 2023, 10:33 IST
Last Updated 3 ಜುಲೈ 2023, 10:33 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳ ಮುಂದಿನ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ ಇದೇ 17 ಹಾಗೂ 18ರಂದು ನಡೆಯಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ತಿಳಿಸಿದ್ದಾರೆ.

'ಪಟ್ನಾದಲ್ಲಿ ನಡೆದ ಎಲ್ಲ ವಿರೋಧ ಪಕ್ಷಗಳ ಸಭೆಯು ಭಾರಿ ಯಶಸ್ಸು ಗಳಿಸಿದ ಬಳಿಕ, ನಾವು ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ ಜುಲೈ 17, 18ರಂದು ನಡೆಸಲಿದ್ದೇವೆ. ಫ್ಯಾಸಿಸ್ಟ್‌ ಹಾಗೂ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಸೋಲಿಸುವ ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ದಿಟ್ಟ ದೂರದೃಷ್ಟಿಯನ್ನು ಪ್ರಸ್ತುತಪಡಿಸುವ ಸಂಕಲ್ಪದಲ್ಲಿ ಅಚಲರಾಗಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ.

ವಿರೋಧ ಪಕ್ಷಗಳ ಮೊದಲ ಸಭೆ ಬಿಹಾರದ ರಾಜಧಾನಿ ಪಟ್ನಾದಲ್ಲಿ ಜೂನ್‌ 23ರಂದು ನಡೆದಿತ್ತು.

ಇದನ್ನೂ ಓದಿ: ವಿಶ್ಲೇಷಣೆ| ವಿರೋಧ ಪಕ್ಷಗಳ ಒಕ್ಕೂಟ: ಸಾಧ್ಯತೆಯ ದಿಕ್ಸೂಚಿ

ಮುಂದಿನ ಸಭೆ ಜುಲೈ 12 ಹಾಗೂ 13ರಂದು ನಡೆಯಲಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಕಳೆದ ವಾರ ತಿಳಿಸಿದ್ದರು. ಆದರೆ, ಈ ಸಮಯದಲ್ಲಿ ಕೆಲವು ರಾಜ್ಯಗಳ ವಿಧಾನಸಭಾ ಅಧಿವೇಶನ ನಡೆಯಲಿರುವುದರಿಂದ, ದಿನಾಂಕವನ್ನು ಬದಲಿಸಲಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT