ಜೈಪುರ: ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವನ್ನು ಐತಿಹಾಸಿಕ ಸುಧಾರಣೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷೆಗಿಂತ ನ್ಯಾಯದ ಮೂಲಕ ಸ್ಥಾಪಿತವಾದ ಭಾರತದ ನ್ಯಾಯಾಂಗ ವ್ಯವಸ್ಥೆ ಎಂದಿದ್ದಾರೆ.

ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಳೆಯ ವ್ಯವಸ್ಥೆಯಡಿಯಲ್ಲಿ ನ್ಯಾಯ ದೊರೆಯಲು ವಿಳಂಬವಾಗುತ್ತಿತ್ತು. ಸುರ್ದೀಘ ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದ ನ್ಯಾಯದಿಂದ ವಂಚಿತರಾದವರು ವ್ಯವಸ್ಥೆಯ ಮೇಲೆ ಅಸಮಾಧಾನಗೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.
.50 ವರ್ಷಗಳ ನಂತರ ಚಂದ್ರನ ಬಳಿ NASA ಗಗನಯಾನಿಗಳ ಸುತ್ತಾಟ: ಹೇಗಿದೆ ಸಿದ್ಧತೆ?.BBK12: ಕೊನೆಗೂ ಜಂಟಿ-ಒಂಟಿಗಳ ಆಟಕ್ಕೆ ಪೂರ್ಣ ವಿರಾಮ ಹೇಳಿದ ಬಿಗ್ಬಾಸ್.
ಹೊಸ ಕ್ರಿಮಿನಲ್ ಕಾನೂನುಗಳ ಜಾರಿಯಿಂದಾಗಿ ಜನರಿಗೆ ಸಕಾಲದಲ್ಲಿ ನ್ಯಾಯ ದೊರೆಯುತ್ತದೆ. ಈಗಿನ ನ್ಯಾಯ ವ್ಯವಸ್ಥೆಯು ಕೇವಲ ಶಿಕ್ಷೆಯನ್ನು ಆಧರಿಸದೇ ನ್ಯಾಯ ಮತ್ತು ಪಾರದರ್ಶಕತೆಯನ್ನು ಒಳಗೊಂಡಿದೆ. ಈ ಹೊಸ ಕಾನೂನುಗಳಿಂದ ನ್ಯಾಯವು ಸರಳ ಮತ್ತು ವೇಗವಾಗಿ ದೊರೆಯುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕಾನೂನುಗಳ ಸಂಪೂರ್ಣ ಅನುಷ್ಠಾನದ ನಂತರ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಆಧುನಿಕ ವ್ಯವಸ್ಥೆಯಾಗಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೊಸ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಸಲುವಾಗಿ ಸರ್ಕಾರವು ಲಕ್ಷಾಂತರ ಪೊಲೀಸ್ ಸಿಬ್ಬಂದಿ, ನ್ಯಾಯಾಲಯದ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯಗಳು ಮತ್ತು ಕಾರಾಗೃಹಗಳ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದಿದ್ದಾರೆ.
.ನಾನು ನಿಜವಾದ ಬಿಹಾರಿ..ಹೊರಗಿನವರಿಗೆ ಹೆದರುವುದಿಲ್ಲ:ಅಮಿತ್ ಶಾ ವಿರುದ್ಧ ತೇಜಸ್ವಿ.ಸಿಎಂ ಆಗಲು ಹೈಕಮಾಂಡ್ ಆಶೀರ್ವಾದದ ಜೊತೆಗೆ ಶಾಸಕರ ಬೆಂಬಲವೂ ಮುಖ್ಯ: ಸಿದ್ದರಾಮಯ್ಯ.
ಈ ಕಾನೂನುಗಳ ಅಡಿಯಲ್ಲಿ ಆರೋಪಿಗಳನ್ನು ಜೈಲಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗುವುದು. ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಉದ್ಯೋಗಿಗಳು, ವೈದ್ಯರು ಮತ್ತು ವಿಧಿವಿಜ್ಞಾನ ತಜ್ಞರು ಸಹ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುವು ಮಾಡಿಕೊಡುತ್ತದೆ. ಇದರಿಂದ ಸಮಯ ಮತ್ತು ಹಣವನ್ನು ಉಳಿತಾಯ ಮಾಡುವ ಉದ್ದೇಶವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಂಡಿರುವ ಕಾಯ್ದೆಗಳಾಗಿವೆ.
.ಸಚಿವರಿಗೆ ಮುಖ್ಯಮಂತ್ರಿ ಔತಣಕೂಟ | ಕುರ್ಚಿ ಉಳಿಸಿಕೊಳ್ಳಲು ನಾಟಕವಾಡುವ ಸಿಎಂ: BJP.IRCTC Scam: ಲಾಲು ಪ್ರಸಾದ್, ರಾಬ್ಡಿ, ತೇಜಸ್ವಿ ವಿರುದ್ಧ ದೋಷಾರೋಪ ನಿಗದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.