ನವದೆಹಲಿ: ಆಮ್ ಆದ್ಮಿ ಪಕ್ಷವು (ಎಎಪಿ) 2013ರಲ್ಲಿ ಮೊದಲ ಬಾರಿಗೆ ದೆಹಲಿಯ ಗೆದ್ದುಗೆ ಏರುವ ಮುನ್ನ ಸತತ ಮೂರು ಅವಧಿಗೆ ಸರ್ಕಾರ ರಚಿಸಿದ್ದ ಕಾಂಗ್ರೆಸ್, ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಗೆದ್ದೇ ತೀರುವ ಹಂಬಲದಲ್ಲಿ ಪ್ರಚಾರ ನಡೆಸಿತ್ತು. ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದಲ್ಲಿ ತನ್ನ ಮಿತ್ರ ಪಕ್ಷವಾಗಿರುವ ಎಎಪಿ ಹಾಗೂ ಅದರ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿರುದ್ಧವೇ ವಾಗ್ದಾಳಿ ನಡೆಸಿತ್ತು. ಆದರೆ, ದಕ್ಕಿದ್ದು (ಕಳೆದ ಚುನಾವಣೆಗಿಂತ) 2.05 ಲಕ್ಷ ಹೆಚ್ಚುವರಿ ಹೆಚ್ಚುವರಿ ಮತಗಳಷ್ಟೇ!

ಖಾತೆ ತೆರೆಯಲು ವಿಫಲವಾಗಿರುವ ಈ ಪಕ್ಷಕ್ಕೆ, ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಡೆ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗಿಲ್ಲ.

70 ಸದಸ್ಯ ಬಲದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಿದೆ. ಎಎಪಿ, 22 ಕ್ಷೇತ್ರಗಳನ್ನು ಉಳಿಸಿಕೊಂಡಿದೆ. ಕಾಂಗ್ರೆಸ್ ಸತತ ಮೂರನೇ ಬಾರಿಗೂ ಸೊನ್ನೆ ಸುತ್ತಿದೆ.

ಈ ಫಲಿತಾಂಶವು ಪಕ್ಷಕ್ಕೆ ಹಿತಕರವಾಗಿಯೇನೂ ಇಲ್ಲ. ಆದರೆ, 2013ರಲ್ಲಿ ಬದ್ಧ ಎದುರಾಳಿ ಎಂದು ಭಾವಿಸಿದ್ದ ಎಎಪಿ ಹಾಗೂ ಕೇಜ್ರಿವಾಲ್ ಅಧಿಕಾರದಿಂದ ಕೆಳಗಿಳಿದಿರುವುದು ಕಾಂಗ್ರೆಸ್ ನಾಯಕರಿಗೆ ಸಮಾಧಾನ ತಂದಿದೆ. ಎಎಪಿಯನ್ನು ಇನ್ನಷ್ಟು ಕುಗ್ಗಿಸಲು ಇದೊಂದು ಅವಕಾಶವೆಂದು ಭಾವಿಸಿರುವ ಕಾಂಗ್ರೆಸ್ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ದೆಹಲಿ ಸಮಸ್ಯೆಗಳನ್ನು ಇನ್ನಷ್ಟು ಗಟ್ಟಿಯಾಗಿ ಪ್ರಸ್ತಾಪಿಸಲಿದ್ದಾರೆ.

2015 ಹಾಗೂ 2020ರಲ್ಲಿ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಿದ್ದ ಎಎಪಿ ಈ ಸಲ ಮುಖಭಂಗ ಅನುಭವಿಸಿರುವುದರಲ್ಲಿ ಕಾಂಗ್ರೆಸ್ನ ಪಾತ್ರ ಸಣ್ಣದೇ ಆದರೂ, 'ಇಂಡಿಯಾ' ಮೈತ್ರಿಕೂಟವನ್ನು ದುರ್ಬಲಗೊಳಿಸಲಿದೆ. ಕೇಜ್ರಿವಾಲ್ ವಿರುದ್ಧ ರಾಹುಲ್ ನಡೆಸಿರುವ ವಾಗ್ದಾಳಿಯು, ಮಿತ್ರ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸಲಿದೆ. ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ತೋರಿರುವುದೂ ಅದಕ್ಕೆ ಪ್ರಮುಖ ಕಾರಣವಾಗಲಿದೆ.

'ಕಾಂಗ್ರೆಸ್ ಪಕ್ಷವು ವಿಧಾನಸಭೆಯಲ್ಲಿ ಇಲ್ಲದಿರಬಹುದು. ಆದರೆ, ಖಂಡಿತವಾಗಿಯೂ ದೆಹಲಿಯಲ್ಲಿ ಇದ್ದೇ ಇರುತ್ತದೆ. 2030ರಲ್ಲಿ ದೆಹಲಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಫಲಿತಾಂಶದ ಬಳಿಕ ಹೇಳಿದ್ದಾರೆ.

'ದೇಶದಾದ್ಯಂತ ಪ್ರಗತಿಪರರ ಉದ್ದೇಶಕ್ಕೆ ಹಾನಿ ಮಾಡಲು ಯತ್ನಿಸಿದ್ದ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ. ಪ್ರಗತಿಪರ ಚಿಂತನೆಯ ನಿಜವಾದ ಪ್ರತಿಪಾದಕ ಪಕ್ಷವಾಗಿರುವ ಕಾಂಗ್ರೆಸ್, ಬಿಜೆಪಿಯನ್ನು ಎದುರಿಸಲು ಬಲಿಷ್ಠವಾಗಿ ಹೊರಹೊಮ್ಮಲಿದೆ' ಎಂದು ಮತ್ತೊಬ್ಬ ನಾಯಕ ಪವನ್ ಖೇರಾ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಕಾಂಗ್ರೆಸ್ ಮುಂದಿರುವ ಹಾದಿ ಅಷ್ಟೇನೂ ಸುಲಭದಲ್ಲ.

2013ರಲ್ಲಿ ಶೇ 11.4 ರಷ್ಟು (19.32ಲಕ್ಷ) ಮತಗಳನ್ನು ಪಡೆದಿದ್ದ ಈ ಪಕ್ಷ, 2015ರಲ್ಲಿ ಗಳಿಸಿದ್ದು ಶೇ 9.7 (8.6 ಲಕ್ಷ) ಮತಗಳನ್ನಷ್ಟೇ. 2020ರಲ್ಲಿ ಮತಗಳಿಕೆ ಮತ್ತಷ್ಟು ಕುಸಿದಿತ್ತು. ಶೇ.4.26 ರಷ್ಟು (3.95 ಲಕ್ಷ) ಮತಗಳಷ್ಟೇ ಅ ಪಕ್ಷಕ್ಕೆ ಸಿಕ್ಕಿದ್ದವು. ಈ ಭಾರಿ ಅಲ್ಪ ಏರಿಕೆಯಾಗಿದ್ದರೂ, ಗಳಿಸಿರುವುದು ಶೇ 6.34 (6.01) ಮತಗಳನ್ನಷ್ಟೇ!
.Delhi Election Result | ಬಿಜೆಪಿಗೆ ಗದ್ದುಗೆ: ಎಎಪಿ ಮನೆಗೆ.Delhi Elections: ದೆಹಲಿಯಲ್ಲಿ ಬಿಜೆಪಿಗೆ ಭರ್ಜರಿ ಜಯ; RSS ನೆರವಾದದ್ದು ಹೇಗೆ?.
ಕಸ್ತೂರಬಾ ನಗರದಲ್ಲಿ ಎರಡನೇ ಸ್ಥಾನ ಪಡೆದಿರುವುದನ್ನು ಬಿಟ್ಟರೆ, ಉಳಿದ ಕ್ಷೇತ್ರಗಳಲ್ಲಿ ಪೈಪೋಟಿಯನ್ನೇ ನೀಡಲಾಗಿಲ್ಲ. ದಲಿತರು ಹಾಗೂ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಹೆಚ್ಚಿನ ಮತಗಳು ಬಂದಿಲ್ಲ. ಪಕ್ಷದ ಎಸ್ಸಿ ವಿಭಾಗದ ಮುಖ್ಯಸ್ಥರಾಗಿರುವ ರಾಜೇಶ್ ಲಿಲೋಥಿಯಾ ಸೀಮಾಪುರಿಯಲ್ಲಿ ಪಡೆದದ್ದು ಕೇವಲ 11,823 ಮತಗಳನ್ನು.

ಹೀಗಾಗಿ, ಸತತ ಸೋಲಿನಿಂದ ಕಂಗೆಟ್ಟಿರುವ ಕೈ ಪಡೆ, ಚೇತರಿಸಿಕೊಂಡು ಮೇಲೇಳಲು ಸಾಕಷ್ಟು ಶ್ರಮ ಪಡಬೇಕಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, 'ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಎಎಪಿ ವಿರೋಧ ಅಲೆ ಸೃಷ್ಟಿಸಿದೆವು. ಆದರೆ, ನಮ್ಮ ಪಕ್ಷಕ್ಕೆ ನಿರೀಕ್ಷಿತ ಜನಾದೇಶ ಸಿಕ್ಕಿಲ್ಲ' ಎಂದು ಹೇಳಿದ್ದಾರೆ.

'ಕಾಂಗ್ರೆಸ್ನ ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತರು ಸವಾಲಿನ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಆದರೆ, ಇನ್ನಷ್ಟು ಕಠಿಣ ಪರಿಶ್ರಮದಿಂದ ಹೋರಾಡಬೇಕಿದೆ' ಎಂದಿರುವ ರಾಹುಲ್ ಗಾಂಧಿ, 'ಜನಾದೇಶವನ್ನು ವಿನಮ್ರವಾಗಿ ಒಪ್ಪಿಕೊಳ್ಳುವುದಾಗಿ' ಹೇಳಿದ್ದಾರೆ. ಹಾಗೆಯೇ, ಜನರ ಹಕ್ಕುಗಳಿಗಾಗಿ, ವಾಯು ಮಾಲಿನ್ಯ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.