ನವದೆಹಲಿ: ದೀಪಾವಳಿ ಹಬ್ಬದ ಬಳಿಕ ದೆಹಲಿ–ಎನ್ಸಿಆರ್ನಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದ್ದು, ಏರ್ ಪ್ಯೂರಿಫೈರ್ ಖರೀದಿಸುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ.

ದೆಹಲಿಯಲ್ಲಿ ಬುಧವಾರ ಗಾಳಿಯ ಗುಣಮಟ್ಟ ತುಸು ಸುಧಾರಿಸಿದರೂ ಕಳಪೆ ಮಟ್ಟದಲ್ಲೇ ಮುಂದುವರಿದಿದ್ದು ಎಕ್ಯೂಐ ಸೂಚ್ಯಂಕ 273ಕ್ಕೆ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಸೋಮವಾರ ನಗರದಲ್ಲಿ ಎಕ್ಯೂಐ ಸೂಚ್ಯಂಕ 301ಕ್ಕೆ ಹಾಗೂ ಮಂಗಳವಾರ 294 ಕ್ಕೆ ತಲುಪುವ ಮೂಲಕ ಗಾಳಿಯ ಗುಣಮಟ್ಟ ಅತಿ ಕಳಪೆ ಮಟ್ಟಕ್ಕೆ ಕುಸಿದಿತ್ತು.
.ದೀಪಾವಳಿ ಬಳಿಕ ದೆಹಲಿ ಗಾಳಿ ಗುಣಮಟ್ಟ ಕುಸಿತ: ಗರ್ಭಿಣಿಯರು, ಮಕ್ಕಳು ಬಾಧಿತರು...
ಯುರೇಕಾ ಫೋರ್ಬ್ಸ್ನ ಅಧಿಕಾರಿಯೊಬ್ಬರು ಪಿಟಿಐ ಜತೆ ಮಾತನಾಡಿ, ‘ದೀಪಾವಳಿ ಇರುವ ಕಾರಣಕ್ಕೆ ಅಕ್ಟೋಬರ್ನಲ್ಲಿ ಏರ್ ಪ್ಯೂರಿಫೈರ್ಗೆ ಬೇಡಿಕೆ ಹೆಚ್ಚಳವಾಗಿದೆ. ನಗರದಲ್ಲಿನ ವಾಯುಮಾಲಿನ್ಯ ಹೆಚ್ಚಳ ಮತ್ತು ಜನರಲ್ಲಿ ಜಾಗೃತಿ ಮೂಡಿರುವುದರಿಂದ ಏರ್ ಪ್ಯೂರಿಫೈರ್ ಬಳಕೆಯತ್ತ ಜನ ಒಲವು ತೋರುತ್ತಿದ್ದಾರೆ’ ಎಂದರು.

ಕೆನ್ಟ್ ಆರ್ಒನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಗುಪ್ತಾ ಮಾತನಾಡಿ, ‘ದೆಹಲಿ ಉತ್ತರ ಭಾಗದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಜನರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಏರ್ ಪ್ಯೂರಿಫೈರ್ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಮಾರಾಟ ಶೇ 30–40ರಷ್ಟು ಏರಿಕೆಯಾಗಿದೆ’ ಎಂದರು.
.ದೆಹಲಿ | ವಿಷಕಾರಿ ಗಾಳಿ: ಕಣ್ಣುಗಳಲ್ಲಿ ಉರಿ, ತಲೆ ಸುತ್ತು – ಸಮೀಕ್ಷೆಯಿಂದ ಬಹಿರಂಗ.ಸಂಪಾದಕೀಯ | ದೆಹಲಿ: ಪಟಾಕಿಗೆ ‘ಹಸಿರು’ನಿಶಾನೆ; ಪರಿಸರ–ಆರೋಗ್ಯ ಕಾಳಜಿ ನಿರ್ಲಕ್ಷ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.