ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಕಾಂಗ್ರೆಸ್‌ ಸಂಸದ ಪಪ್ಪು ಯಾದವ್‌ ವಿರುದ್ಧ ಸುಲಿಗೆ ಪ್ರಕರಣ

Published 11 ಜೂನ್ 2024, 4:19 IST
Last Updated 11 ಜೂನ್ 2024, 4:19 IST
ಅಕ್ಷರ ಗಾತ್ರ

ಪಟ್ನಾ: ಕಾಂಗ್ರೆಸ್‌ ಸಂಸದ ಪಪ್ಪು ಯಾದವ್‌ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ ಪೂರ್ಣಿಯಾ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಇಲ್ಲಿನ ಉದ್ಯಮಿ ಒಬ್ಬರಿಂದ ₹ 1 ಕೋಟಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಪಪ್ಪು ಯಾದವ್‌ ವಿರುದ್ಧ ಪ್ರಕರಣ ದಾಖಲಾಗಿದೆ. 

ಪಪ್ಪು ಯಾದವ್‌ ಸೇರಿದಂತೆ ಆತನ ಆಪ್ತ ಅಮಿತ್ ಯಾದವ್ ವಿರುದ್ಧ ಸಹ ಪ್ರಕರಣ ದಾಖಲು ಮಾಡಲಾಗಿದ್ದು ತನಿಖೆ ಮಾಡಲಾಗುತ್ತಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಈ ಮೊದಲು 2021 ಹಾಗೂ 2023ರಲ್ಲಿ ಕೂಡ ಇದೇ ರೀತಿಯ ಬೇಡಿಕೆ ಇಟ್ಟಿದ್ದರು, ತಮಗೆ ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದರು ಎಂಬ ದೂರು ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT