ಬೆಂಗಳೂರು: ರದ್ದುಗೊಂಡ ವಿಮಾನಗಳ ಟಿಕೆಟ್ ದರವನ್ನು ಸಂಪೂರ್ಣವಾಗಿ ಮರುಪಾವತಿ ಮಾಡುವುದಾಗಿ ಇಂಡಿಗೊ ವಿಮಾನಯಾನ ಸಂಸ್ಥೆ ಹೇಳಿದೆ.
.ಭಾನುವಾರ ರಾತ್ರಿ 8 ಗಂಟೆಯೊಳಗೆ ಪೂರ್ತಿ ಹಣ ವಾಪಸ್ ಮಾಡಿ: ಇಂಡಿಗೊಗೆ ಕೇಂದ್ರ ಆದೇಶ.
ಈ ಬಗ್ಗೆ ಎಕ್ಸ್ನಲ್ಲಿ ಪ್ರಕಟಣೆ ನೀಡಿದೆ.

ರದ್ದುಗೊಂಡ ವಿಮಾನಗಳ ಟಿಕೆಟ್ ಮೊತ್ತವನ್ನು ಪ್ರಯಾಣಿಕರಿಗೆ ಹಿಂದಿರುಗಿಸಬೇಕು ಎಂದು ಕೇಂದ್ರ ವಿಮಾನಯಾನ ಸಚಿವಾಲಯ ನಿರ್ದೇಶಿಸಿದ ಬೆನ್ನಲ್ಲೇ ಇಂಡಿಗೊ ಪ್ರಕಟಣೆ ನೀಡಿದೆ.

‘ಇತ್ತೀಚಿನ ಬೆಳವಣಿಗೆ ಸಂಬಂಧ, ರದ್ದುಗೊಂಡ ಟಿಕೆಟ್ಗಳ ಮೊತ್ತ ನಿಮ್ಮ ಮೂಲ ಪಾವತಿ ಖಾತೆಗೆ ಸ್ವಯಂಚಾಲಿತವಾಗಿ ವರ್ಗಾವಣೆ ಆಗಲಿದೆ’ ಎಂದು ಅದು ಹೇಳಿದೆ.
.ವಿಮಾನ ಸಂಚಾರದಲ್ಲಿ ವ್ಯತ್ಯಯ: ಇಂಡಿಗೊ ಮಾಲೀಕರು ಯಾರು?.
ಡಿಸೆಂಬರ್ 5 ರಿಂದ 15ರ ನಡುವೆ ರದ್ದು ಮಾಡಿದ ಅಥವಾ ಮರುನಿಗದಿ ಮಾಡಿದ ಪ್ರಯಾಣದ ಶುಲ್ಕವನ್ನು ಮನ್ನಾ ಮಾಡುವುದಾಗಿಯೂ ತಿಳಿಸಿದೆ.

ಉಂಟಾದ ತೊಂದರೆಗೆ ತೀವ್ರ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.
.ಸಾವಿರ ಮಾರ್ಗಗಳಲ್ಲಿ 'ಇಂಡಿಗೊ' ಸಂಚಾರ ರದ್ದು: ಹಾರದ ವಿಮಾನ, ಜನ ಹೈರಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.