ಬೆಂಗಳೂರು: ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಸತತ ಏಳನೇ ದಿನವೂ ಮುಂದುವರಿದಿದೆ. ದೇಶದ ಹಲವು ಏರ್ಪೋರ್ಟ್ಗಲ್ಲಿ ವಿಮಾನ ಹಾರಾಟ ರದ್ದುಗೊಂಡಿದೆ.
.IndiGo Crisis: ಇಂಡಿಗೊ ಸಿಇಒ, ವ್ಯವಸ್ಥಾಪಕರಿಗೆ ಶೋಕಾಸ್ ನೋಟಿಸ್.
ಬೆಂಗಳೂರು ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 62 ಹಾಗೂ ಆಗಮಿಸಬೇಕಿದ್ದ 65 ಸೇರಿ 127 ವಿಮಾನಗಳು ರದ್ದುಗೊಂಡಿವೆ. ಸಂಜೆ 6ಕ್ಕೆ ಮುಂದಿನ ಮಾಹಿತಿ ನೀಡುವುದಾಗಿ ವಿಮಾನ ನಿಲ್ದಾಣ ತಿಳಿಸಿದೆ.

ದೆಹಲಿ ಇಂದಿರಾ ಗಾಂಧಿ ವಿಮಾಣ ನಿಲ್ದಾಣದಿಂದ ಹೊರಡಬೇಕಿದ್ದ 75, ಆಗಮಿಸಬೇಕಿದ್ದ 59 ಸೇರಿ ಒಟ್ಟು 134 ವಿಮಾನಗಳು ರದ್ದುಗೊಂಡಿವೆ.

ಇಂಡಿಗೊ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ದೆಹಲಿ ವಿಮಾನ ನಿಲ್ದಾಣ ಹೇಳಿದೆ.
.6ನೇ ದಿನವೂ ಮುಂದುವರಿದ ಇಂಡಿಗೊ ಅಡಚಣೆ: ದೇಶದಾದ್ಯಂತ 400 ವಿಮಾನಗಳ ಹಾರಾಟ ರದ್ದು.
ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ನೀಡಿರುವ ದೆಹಲಿ ಏರ್ಪೋರ್ಟ್, ‘ಇಂಡಿಗೊ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಮುಂದುವರಿಯಬಹುದು. ಅನಾನುಕೂಲವನ್ನು ತಪ್ಪಿಸಲು ಏರ್ಪೋರ್ಟ್ಗೆ ಬರುವುದಕ್ಕೂ ಮುನ್ನ ವಿಮಾನಗಳ ಸಂಸ್ಥೆಯೊಂದಿಗೆ ಇತ್ತೀಚಿನ ವಿಮಾನ ಸ್ಥಿತಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ’ ಎಂದು ಹೇಳಿದೆ.

‘1,650ಕ್ಕೂ ವಿಮಾನಳನ್ನು ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಸೆಂಬರ್ 10ಕ್ಕೆ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ’ ಎಂದು ಇಂಡಿಗೊ ಭಾನುವಾರ ಹೇಳಿತ್ತು.
.IndiGo Crisis | ಪ್ರಯಾಣಿಕರ ಹಣ ಮರಳಿಸಲು ಬದ್ಧ: ಇಂಡಿಗೊ ಕ್ಷಮೆಯಾಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.