ಕ್ರೀಡಾ ಪ್ರತಿಭೆ ಶ್ರೇಯಸಿ ಸಿಂಗ್
2018ರ ಕಾಮನ್‌ವೆಲ್ತ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಕ್ರೀಡಾ ಪ್ರತಿಭೆ ಜಮುಯಿ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿಯ ಶ್ರೇಯಸಿ ಸಿಂಗ್ ಕೂಡ ನಿತೀಶ್ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ದಿವಂಗತ ದಿಗ್ವಿಜಯ ಸಿಂಗ್ ಅವರ ಪುತ್ರಿ. ಮೊದಲ ಗೆಲುವಿನಲ್ಲೇ ಶ್ರೇಯಸಿಗೆ ಸಚಿವರಾಗುವ ಭಾಗ್ಯವೂ ಒಲಿದಿದೆ. ಮುಜಾಫರ್‌ಪುರದ ಮಾಜಿ ಸಂಸದ ಅಜಯ್ ನಿಶಾದ್ ಅವರ ಪತ್ನಿ ಔರಾಯಿ ಕ್ಷೇತ್ರದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ರಮಾ ನಿಶಾದ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೆಡಿ(ಯು)ನ ಬಿಜೇಂದ್ರ ಪ್ರಸಾದ್ ಯಾದವ್ 9ನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ನಿತೀಶ್ ಸಂಪುಟಕ್ಕೆ ಮರಳಿದ್ದಾರೆ.