ನವದೆಹಲಿ: ಸಾಮೂಹಿಕ ವಿನಾಶಕ್ಕೆ ಬಳಸುವ ಅಣ್ವಸ್ತ್ರದ ಆಧುನೀಕರಣಕ್ಕೆ ಕೈಹಾಕಿರುವ ಪಾಕಿಸ್ತಾನ, ತಂತ್ರಜ್ಞಾನ ಮತ್ತು ಕಚ್ಚಾ ಪದಾರ್ಥಗಳಿಗಾಗಿ ಚೀನಾವನ್ನು ಅವಲಂಬಿಸಿದೆ ಎಂದು ಅಮೆರಿಕದ ಸೇನಾ ಬೇಹುಗಾರಿಕೆ ಸಂಸ್ಥೆಯ (ಡಿಐಎ) ವರದಿ ಹೇಳಿದೆ.

‘ಭಾರತದ ಸೇನಾ ಸಾಮರ್ಥ್ಯದ ವಿರುದ್ಧ ತನ್ನ ಶಕ್ತಿಯನ್ನು ಒಟ್ಟುಗೂಡಿಸಲು ಕೈಹಾಕಿರುವ ಪಾಕಿಸ್ತಾನ, ತನ್ನಲ್ಲಿರುವ ಅಣ್ವಸ್ತ್ರವನ್ನು ಮೇಲ್ದರ್ಜೆಗೆ ಏರಿಸಲು ಮುಂದಡಿ ಇಟ್ಟಿದೆ. ಇದಕ್ಕೆ ಅಗತ್ಯವಿರುವ ವಸ್ತುಗಳನ್ನು ಚೀನಾದ ಪೂರೈಕೆದಾರರಿಂದ ಖರೀದಿಸಲು ಅದು ಯೋಜನೆ ಹೊಂದಿದೆ. ಇವುಗಳನ್ನು ಹಾಂಗ್ಕಾಂಗ್, ಸಿಂಗಪುರ, ಟರ್ಕಿ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ಮಾರ್ಗದಿಂದ ತರಿಸುವ ಯೋಜನೆ ಹೊಂದಿದೆ’ ಎಂದು ಅಮೆರಿಕದ ಸೇನಾ ಬೇಹುಗಾರಿಕೆ ಸಂಸ್ಥೆಯ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಜೆಫ್ರಿ ಕ್ರೂಸ್ ಹೇಳಿದ್ದಾರೆ.

ಆಪರೇಷನ್ ಸಿಂಧೂರ ನಂತರದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಸೇನಾ ಸಂಘರ್ಷದಿಂದ ಹಿಂದೆ ಸರಿದ ಕೆಲವೇ ದಿನಗಳಲ್ಲಿ ಈ ಸುದ್ದಿ ಹೊರಬಿದ್ದಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ತಾನೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಯುದ್ಧದಲ್ಲಿ ಮುಗ್ದ ಜನರು ಸಾಯುವಂತಾಗಬಾರದು ಎಂದು ಎರಡೂ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸಿರುವುದಾಗಿ ಅವರು ಹೇಳಿದ್ದರು.

ಆದರೆ ಟ್ರಂಪ್ ಅವರ ಈ ಹೇಳಿಕೆಯನ್ನು ಭಾರತ ಸಾರಸಗಟಾಗಿ ತಿರಸ್ಕರಿಸಿದೆ. ಕೆಲ ವಾಯುನೆಲೆಗಳು ನಾಶದೊಂದಿಗೆ ರಕ್ಷಣಾ ಸಾಮಗ್ರಿಗಳ ಭಾರಿ ನಷ್ಟ ಅನುಭವಿಸಿದ ಪಾಕಿಸ್ತಾನ ಮೇ 10ರಂದು ಕದನ ವಿರಾಮಕ್ಕೆ ಕೋರಿಕೆ ಸಲ್ಲಿಸಿತು ಎಂದು ಭಾರತ ಹೇಳಿದೆ.

ಗಡಿಯಾಚಿಗಿನ ಭಯೋತ್ಪಾದನೆಯನ್ನು ಉತ್ತೇಜಿಸುವ ಕಾರ್ಯವನ್ನು ಪಾಕಿಸ್ತಾನ ಕೈಬಿಡಬೇಕು. ಆದರೆ ಅದಕ್ಕಾಗಿ ಅಣ್ವಸ್ತ್ರದ ಬೆದರಿಕೆ ನಡೆಯದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯು 2024ರ ಜೂನ್ನಲ್ಲಿ ಹೊರಡಿಸಿದ ವರದಿಯಲ್ಲಿ, ‘ಭಾರತವು 2023ರಲ್ಲಿ ತನ್ನ 164ರಷ್ಟಿದ್ದ ತನ್ನ ಅಣ್ವಸ್ತ್ರವನ್ನು 172ಕ್ಕೆ ಹೆಚ್ಚಿಸಿದೆ. ಮತ್ತೊಂದೆಡೆ ಪಾಕಿಸ್ತಾನವು 170 ಅಣ್ವಸ್ತ್ರ ಹೊಂದಿದೆ’ ಎಂದು ಹೇಳಿತ್ತು.

‘ಮೊದಲನೆಯದಾಗಿ ಪಾಕಿಸ್ತಾನವು ಚೀನಾದಿಂದ ಆರ್ಥಿಕ ಮತ್ತು ಸೇನಾ ನೆರವು ಪಡೆದಿದೆ. ಇದರೊಂದಿಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯೊಂದಿಗೆ ಪಾಕಿಸ್ತಾನ ಸೇನೆಯು ಸಮರಾಭ್ಯಾಸ ನಡೆಸುತ್ತದೆ. ಇದರಲ್ಲಿ ವೈಮಾನಿಕ ಅಭ್ಯಾಸವನ್ನು 2024ರ ನವೆಂಬರ್ನಲ್ಲಿ ನಡೆಸಿದೆ’ ಎಂದು ಅಮೆರಿಕದ ಡಿಐಎ ವರದಿ ಹೇಳಿದೆ.

ಭಾರತವನ್ನು ತನ್ನ ಬೆದರಿಕೆಯ ರಾಷ್ಟ್ರ ಎಂದು ಪಾಕಿಸ್ತಾನ ಇಂದಿಗೂ ನಂಬಿದೆ. ಅದಕ್ಕೆ ಪೂರಕವಾಗಿ ತನ್ನ ಸೇನಾ ಸಾಮರ್ಥ್ಯವನ್ನು ಆಗಾಗ್ಗ ಆಧುನೀಕರಣಗೊಳಿಸುವತ್ತ ತನ್ನ ಪ್ರಯತ್ನ ಮುಂದುವರಿಸಿದೆ. ಅದರಲ್ಲಿ ಇತ್ತೀಚಿನ ಬೆಳವಣಿಗೆಯಲ್ಲಿ ಅಣ್ವಸ್ತ್ರ ಸೇರಿದೆ ಎಂದು ವರದಿಯಾಗಿದೆ.

ಭಾರತದಂತೆ ಪಾಕಿಸ್ತಾನವೂ ಪರಮಾಣು ಪೂರೈಕೆದಾರರ ಸಮೂಹದ ಸದಸ್ಯ ರಾಷ್ಟ್ರವಲ್ಲ. ಜತೆಗೆ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೂ ಸಹಿ ಹಾಕಿಲ್ಲ.

1960ರಿಂದ ಪಾಕಿಸ್ತಾನದ ಪರಮಾಣು ಕಾರ್ಯಕ್ರಮಗಳಿಗೆ ಚೀನಾ ಬೆಂಬಲ ನೀಡುತ್ತಲೇ ಬಂದಿದೆ. ಇದರಲ್ಲಿ ಪ್ರಮುಖವಾಗಿ ಪರಮಾಣು ಇಂಧನದ ಗಣಿಗಾರಿಕೆ ಮತ್ತು ಅನ್ವೇಷಣೆಯೂ ಒಳಗೊಂಡಿದೆ. ಇದರ ಜತೆಯಲ್ಲಿ ಅಣ್ವಸ್ತ್ರದ ವಿನ್ಯಾಸ, ಅದಕ್ಕೆ ಅಗತ್ಯವಿರುವ ಇಂಧನ, ತನ್ನ ತಂತ್ರಜ್ಞಾನದ ವರ್ಗಾವಣೆ ಮತ್ತು ಅಣ್ವಸ್ತ್ರಕ್ಕೆ ಅಗತ್ಯವಿರುವ ಸಾಮಗ್ರಿಗಳ ಅಭಿವೃದ್ಧಿ ಮತ್ತು ಪೂರೈಕೆ, ವಿಜ್ಞಾನಿಗಳಿಗೆ ತರಬೇತಿಯೂ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಈ ಬೆಳವಣಿಗೆಯನ್ನು ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಇದರಲ್ಲಿ ಪ್ರಮುಖವಾಗಿ ಗಡಿಯಲ್ಲಿ ಯುದ್ಧದಲ್ಲಿ ತೊಡಗುವ ಸೈನಿಕರನ್ನೇ ಗುರಿಯಾಗಿಸಿ ಪ್ರಯೋಗಿಸಬಹುದಾದ ಕಡಿಮೆ ಅಂತರದ ಅಣ್ವಸ್ತ್ರಗಳ ಅಭಿವೃದ್ಧಿಯೂ ಒಳಗೊಂಡಿದೆ ಎಂದೆನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.