ಶ್ರೀನಗರ: ಪಹಲ್ಗಾಮ್ನಲ್ಲಿ ದಾಳಿ ನಡೆಸಿದ ಉಗ್ರರ ಕುರಿತು ಯಾವುದೇ ಮಾಹಿತಿ ನೀಡಿದರೆ ₹20 ಲಕ್ಷ ಬಹುಮಾನ ನೀಡುವುದಾಗಿ ಹೇಳಿರುವ ಪೋಸ್ಟರ್ಗಳನ್ನು ಜಮ್ಮು ಮತ್ತು ಕಾಶ್ಮೀರದ ಶೋಪಿಯಾ ಜಿಲ್ಲೆಗಳಲ್ಲಿ ವಿವಿಧೆಡೆ ಅಂಟಿಸಿರುವುದು ಕಂಡುಬಂದಿದೆ.

ದಾಳಿ ನಡೆಸಿದ್ದಾರೆ ಎನ್ನಲಾದ ಮೂವರು ಶಂಕಿತ ಉಗ್ರರ ಛಾಯಾಚಿತ್ರಗಳನ್ನು ಭದ್ರತಾ ಪಡೆಗಳು ಈ ಹಿಂದೆ ಬಿಡುಗಡೆ ಮಾಡಿದ್ದರು. ಇದೇ ಚಿತ್ರಗಳು ಈ ಪೋಸ್ಟರ್ಗಳಲ್ಲಿವೆ. ‘ಮುಗ್ಧರನ್ನು ಕೊಂದವರಿಗೆ ಈ ದೇಶದಲ್ಲಿ ಇರಲು ಜಾಗವಿಲ್ಲ’ ಎಂಬ ವಾಕ್ಯವನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ‘ಶಂಕಿತರ ಕುರಿತು ಮಾಹಿತಿ ನೀಡಿದಲ್ಲಿ ₹20 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಏ.23ರಂದೇ ಪೊಲೀಸರು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.