ಶುಕ್ರವಾರ, 30 ಜನವರಿ 2026
×
ADVERTISEMENT
ADVERTISEMENT

ಲೋಕಸಭೆಯಲ್ಲಿ ‘ವಂದೇ ಮಾತರಂ‘ ಗೀತೆಯ ಜಾಡು: ಜಗಳ ಜೋರು

Published : 8 ಡಿಸೆಂಬರ್ 2025, 12:26 IST
Last Updated : 8 ಡಿಸೆಂಬರ್ 2025, 17:10 IST
ಫಾಲೋ ಮಾಡಿ
Comments
ನರೇಂದ್ರ ಮೋದಿ ಅವರು ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಕಾಂಗ್ರೆಸ್‌ ಹಾಗೂ ನೆಹರೂ ಅವರನ್ನು ಉಲ್ಲೇಖಿಸುತ್ತಾರೆ. ಆಪರೇಷನ್ ಸಿಂಧೂರ ಕುರಿತ ಚರ್ಚೆ ಸಂದರ್ಭದಲ್ಲಿ ನೆಹರೂ ಅವರ ಹೆಸರನ್ನು 14 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 50 ಬಾರಿ, ಸಂವಿಧಾನದ 75ನೇ ವಾರ್ಷಿಕೋತ್ಸವದ ಚರ್ಚೆ ವೇಳೆ ನೆಹರೂ ಹೆಸರು 10 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 26 ಬಾರಿ ಉಲ್ಲೇಖಿಸಿದ್ದರು. ಇಂತಹ ಹತ್ತಾರು ಉದಾಹರಣೆಗಳನ್ನು ಹೇಳಬಹುದು. ನೀವು ಎಷ್ಟೇ ಪ್ರಯತ್ನಿಸಿದರೂ ಪಂಡಿತ್ ನೆಹರೂ ಅವರ ಕೊಡುಗೆಗಳ ಕುರಿತು ಒಂದೂ ಕಪ್ಪು ಚುಕ್ಕೆ ಇಡಲು ನಿಮಗೆ ಸಾಧ್ಯವಾಗುವುದಿಲ್ಲ
ಗೌರವ್‌ ಗೊಗೊಯ್‌, ವಿರೋಧ ಪಕ್ಷದ ಉಪನಾಯಕ
‘ವಂದೇ ಮಾತರಂ’ ಮತ್ತು ಅದರ ಇತಿಹಾಸದ ಬಗ್ಗೆ ಪಕ್ಷಪಾತವಿಲ್ಲದೇ ಮೌಲ್ಯಮಾಪನ ಮಾಡುವ ಸಮಯ ಬಂದಿದೆ. ಎಲ್ಲರೂ ಹಾಡಿನ ಮೊದಲ ಎರಡು ಚರಣಗಳನ್ನು ಕೇಳಿದ್ದಾರೆ. ಆದರೆ ಹಲವರಿಗೆ ಉಳಿದವುಗಳ ಪರಿಚಯವಿಲ್ಲ. ಇಡೀ ಹಾಡು ಮತ್ತು ಆನಂದ್ ಮಠ ಪುಸ್ತಕವು ಎಂದಿಗೂ ಇಸ್ಲಾಂ ವಿರೋಧಿ ಯಾಗಿರಲಿಲ್ಲ. ಆದರೆ, ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯವು ಭಾರತದ ವಿಭಜನೆಗೆ ಕಾರಣವಾಯಿತು. ದೇಶದ ಸಂಸ್ಥೆಗಳನ್ನು ದುರ್ಬಲ ಗೊಳಿಸುವ ಪಿತೂರಿಯ ಭಾಗವಾಗಿ ಚುನಾವಣಾ ಆಯೋಗದಂತಹ ಸಂಸ್ಥೆಗಳ ಮೇಲೆ ವಿರೋಧ ಪಕ್ಷಗಳು ದಾಳಿ ನಡೆಸುತ್ತಿವೆ
ರಾಜನಾಥ್ ಸಿಂಗ್‌, ರಕ್ಷಣಾ ಸಚಿವ
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಈಗ ವಂದೇ ಮಾತರಂನ ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇಂದು ವಿಭಜಕ ಶಕ್ತಿಗಳು ಈ ಹಾಡನ್ನು ಬಳಸಿಕೊಂಡು ವಿಭಜನೆಗೆ ಪ್ರಯತ್ನಿಸುತ್ತಿವೆ. ಈ ವ್ಯಕ್ತಿಗಳು ಬ್ರಿಟಿಷರ ಒಡೆದು ಆಳುವ ನೀತಿಯನ್ನೇ ಅನುಸರಿಸುತ್ತಿದ್ದಾರೆ.
ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ
ಬಿಜೆಪಿಯ ಏಕೈಕ ಉದ್ದೇಶ ಜನರನ್ನು ಮತ್ತಷ್ಟು ವಿಭಜಿಸುವುದು. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅದನ್ನು ಮಾಡಲು ಬಯಸುತ್ತಿದ್ದಾರೆ. ಅವರಿಗೆ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ನಂಬಿಕೆ ಇದೆಯೇ ಮತ್ತು ಅವರು ಅದರಲ್ಲಿ ಭಾಗವಹಿಸಿದ್ದಾರೆಯೇ? 
ಪಿ.ಸಂತೋಷ್‌, ಸಿಪಿಐ ಸಂಸದ
ಸಾವರ್ಕರ್ ಜೈಲಿನಲ್ಲಿದ್ದಾಗ ಕ್ಷಮಾದಾನ ಅರ್ಜಿಗಳನ್ನು ಬರೆದರು. ತಾವು ಸ್ವಾತಂತ್ರ್ಯ ಪಡೆದುಕೊಂಡರು. ಆ ಸಮಯದಲ್ಲಿ, ಸೆಲ್ಯುಲಾರ್ ಜೈಲಿನಲ್ಲಿದ್ದ 585 ಕೈದಿಗಳಲ್ಲಿ 398 ಬಂಗಾಳಿಗಳು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರು. ಖುದಿರಾಮ್ ಬೋಸ್ ತಮ್ಮ ಪ್ರಾಣ ತ್ಯಾಗ ಮಾಡಿದಾಗ, ಇಂದಿನ ಆಡಳಿತ ಪಕ್ಷದ ಪೂರ್ವಜರು ಕ್ಷಮಾದಾನ ಅರ್ಜಿಗಳನ್ನು ಬರೆಯುವಲ್ಲಿ ನಿರತರಾಗಿದ್ದರು.
ಕಾಕೋಲಿ ಘೋಷ್‌ ದಸ್ತಿದಾರ್‌, ಟಿಎಂಸಿ ಸಂಸದೆ
ಪ್ರಧಾನಿ ಮೋದಿ ಮಾತುಗಳು ಕಳಪೆ ದರ್ಜೆಯದ್ದು. ವಾಸ್ತವವಾಗಿ, ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಮಾತ್ರವಲ್ಲ, ಬಿಜೆಪಿಯ ನಾಯಕರು ಬಂಗಾಳದ ದ್ವೇಷಿಗಳು
ಕಲ್ಯಾಣ್ ಬ್ಯಾನರ್ಜಿ, ಟಿಎಂಸಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT