ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 21 ಆಗಸ್ಟ್‌ 2023

Published 21 ಆಗಸ್ಟ್ 2023, 13:47 IST
Last Updated 21 ಆಗಸ್ಟ್ 2023, 13:47 IST
ಅಕ್ಷರ ಗಾತ್ರ
Introduction

ಕಾವೇರಿ ನೀರು ವಿವಾದ, ತೆಲಂಗಾಣ ವಿಧಾನಸಭಾ ಚುನಾವಣೆ, ಏಷ್ಯಾ ಕಪ್‌ ಟೂರ್ನಿ, ಲಲಿತಾ ನಿವಾಸ್‌ ಭೂಕಬಳಿಕೆ ಹಗರಣ, ಹರಾಜು ನೋಟಿಸ್ ವಾಪಾಸ್‌ ಪಡೆದ ಬ್ಯಾಂಕ್‌ ಬರೋಡಾ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.......

1

ಕಾವೇರಿ ವಿಷಯದಲ್ಲಿ ಸರ್ಕಾರ ಜನರ ಹಿತ ಕಾಯಲಿ, ಸಹಕಾರ ಕೊಡುತ್ತೇವೆ: ಬೊಮ್ಮಾಯಿ

ಕಾವೇರಿ ನೀರಿನ ವಿಷಯದಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನರು ಹಾಗೂ ರೈತರ ಹಿತ ಕಾಪಾಡಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಕಾವೇರಿ ವಿಷಯದಲ್ಲಿ ಸರ್ಕಾರ ಜನರ ಹಿತ ಕಾಯಲಿ, ಸಹಕಾರ ಕೊಡುತ್ತೇವೆ: ಬೊಮ್ಮಾಯಿ

2

Telangana Elections 2023: BRS ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಸಿಎಂ ಕೆಸಿಆರ್

ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಪ್ರಕಟಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: Telangana Elections 2023: BRS ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಸಿಎಂ ಕೆಸಿಆರ್

3

ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರ ರಕ್ಷಣೆ

ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗಿದೆ. ಮಾನವ ಕಳ್ಳಸಾಗಾಣಿಕೆಗೆ ಸಿಲುಕಿ ಲಿಬಿಯಾದಲ್ಲಿ ಸಿಲುಕಿದ್ದ ಪಂಜಾಬ್‌ ಮತ್ತು ಹರಿಯಾಣ ಮೂಲದವರಾದ 17 ಜನರು ಭಾನುವಾರ ಸಂಜೆ ದೆಹಲಿಗೆ ಮರಳಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರ ರಕ್ಷಣೆ

4

ಏಷ್ಯಾ ಕಪ್ ಟೂರ್ನಿಗೆ ಟೀಮ್ ಇಂಡಿಯಾ ಆಯ್ಕೆ: ಕನ್ನಡಿಗ ರಾಹುಲ್‌, ಕೃಷ್ಣಗೆ ಸ್ಥಾನ

k l rahuವಿಕೆಟ್‌ ಕೀಪರ್– ಬ್ಯಾಟರ್‌ ಕೆ.ಎಲ್‌.ರಾಹುಲ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್‌ ಅಯ್ಯರ್‌ ಅವರು ಸೋಮವಾರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರತಿಭಾನ್ವಿತ ಬ್ಯಾಟರ್‌ ತಿಲಕ್‌ ವರ್ಮಾ ಮೊದಲ ಬಾರಿ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಏಷ್ಯಾ ಕಪ್ ಟೂರ್ನಿಗೆ ಟೀಮ್ ಇಂಡಿಯಾ ಆಯ್ಕೆ: ಕನ್ನಡಿಗ ರಾಹುಲ್‌, ಕೃಷ್ಣಗೆ ಸ್ಥಾನ

5

ಸನ್ನಿ ದೇವಲ್ ಮನೆ ಹರಾಜು ನೋಟಿಸ್ ಹಿಂಪಡೆದಿದ್ದೇಕೆ? ಜೈರಾಮ್ ರಮೇಶ್ ಪ್ರಶ್ನೆ

ಸಾಲದ ಮೊತ್ತವನ್ನು ಅವಧಿಯೊಳಗೆ ತೀರಿಸದ ಬಿಜೆಪಿ ಸಂಸದ ಹಾಗೂ ನಟ ಅಜಯ್ ಸಿಂಗ್ ದೇವಲ್ ಅಲಿಯಾಸ್ ಸನ್ನಿ ದೇವಲ್ ಮನೆ ಹರಾಜಿಗಿಟ್ಟಿದ್ದ ಬ್ಯಾಂಕ್ ಆಫ್ ಬರೋಡಾ, 24 ಗಂಟೆಗಳ ಅವಧಿಯೊಳಗಾಗಿ ತನ್ನ ನಿರ್ಧಾರವನ್ನು ಹಿಂಪಡೆದಿರುವುದನ್ನು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಅವರು ಪ್ರಶ್ನಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಸನ್ನಿ ದೇವಲ್ ಮನೆ ಹರಾಜು ನೋಟಿಸ್ ಹಿಂಪಡೆದಿದ್ದೇಕೆ? ಜೈರಾಮ್ ರಮೇಶ್ ಪ್ರಶ್ನೆ

6

ನಾಗಮೋಹನದಾಸ್‌ ಕಾಂಗ್ರೆಸ್‌ ಟೂಲ್‌ ಕಿಟ್‌: ಸಿ.ಟಿ.ರವಿ

ಶೇ. 40 ಲಂಚ ಆರೋಪದ ತನಿಖೆಗೆ ನಾಗಮೋಹನದಾಸ್‌ ಸಮಿತಿ ರಚನೆ ಕಾಂಗ್ರೆಸ್‌ ಟೂಲ್‌ ಕಿಟ್‌ ಭಾಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಗತ್ಯಕ್ಕೆ ತಕ್ಕಂತೆ ವರದಿ ಕೊಡುತ್ತಾರೆ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ನಾಗಮೋಹನದಾಸ್‌ ಕಾಂಗ್ರೆಸ್‌ ಟೂಲ್‌ ಕಿಟ್‌: ಸಿ.ಟಿ.ರವಿ

7

ಸ್ನೇಹಿತನ ಮಗಳ ಮೇಲೆ ಅತ್ಯಾಚಾರವೆಸಗಿದ ಅಧಿಕಾರಿ: ಅಮಾನತುಗೊಳಿಸಿ ದೆಹಲಿ ಸಿಎಂ ಆದೇಶ

ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ ಆರೋಪದ ಮೇಲೆ ದೆಹಲಿ ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆದೇಶಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ನರೇಶ್‌ ಕುಮಾರ್‌ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಸ್ನೇಹಿತನ ಮಗಳ ಮೇಲೆ ಅತ್ಯಾಚಾರವೆಸಗಿದ ಅಧಿಕಾರಿ: ಅಮಾನತುಗೊಳಿಸಿ ದೆಹಲಿ ಸಿಎಂ ಆದೇಶ

8

ಚಂದ್ರಯಾನ–3 ಅಣಕಿಸಿ ಪೋಸ್ಟ್‌; ನಟ ಪ್ರಕಾಶ್ ರಾಜ್‌ ವಿರುದ್ಧ ನೆಟ್ಟಿಗರು ಕಿಡಿ

ಚಂದ್ರಯಾನ–3 ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಂಬನಾತ್ಮಕ ಪೋಸ್ಟ್‌ಅನ್ನು ಹಂಚಿಕೊಂಡಿರುವ ಕಾರಣಕ್ಕೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಸುದ್ದಿ ಓದಲು: ಚಂದ್ರಯಾನ–3 ಅಣಕಿಸಿ ಪೋಸ್ಟ್‌; ನಟ ಪ್ರಕಾಶ್ ರಾಜ್‌ ವಿರುದ್ಧ ನೆಟ್ಟಿಗರು ಕಿಡಿ

9

ವಿವಾಹೇತರ ಗರ್ಭಧಾರಣೆ ಹಾನಿಕಾರಕ: ಸುಪ್ರೀಂ ಕೋರ್ಟ್

ಅತ್ಯಾಚಾರ ಸಂತ್ರಸ್ತೆಯ 27 ವಾರಗಳ ಗರ್ಭದ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟ್, ಈ ಕುರಿತಂತೆ ಗುಜರಾತ್ ಹೈಕೋರ್ಟ್‌ನ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಸಂಪೂರ್ಣ ಸುದ್ದಿ ಓದಲು: ವಿವಾಹೇತರ ಗರ್ಭಧಾರಣೆ ಹಾನಿಕಾರಕ: ಸುಪ್ರೀಂ ಕೋರ್ಟ್

10

ಭೂಕಬಳಿಕೆ ಹಗರಣ: ನೇಪಾಳದ ಇಬ್ಬರು ಮಾಜಿ ಪ್ರಧಾನಿಗಳ ವಿಚಾರಣೆ

ಲಲಿತಾ ನಿವಾಸ್‌ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ಮಾಜಿ ಪ್ರಧಾನಿಗಳಾದ ಮಾಧವ್‌ ಕುಮಾರ್‌ ನೇಪಾಳ್‌ ಮತ್ತು ಬಾಬುರಾಮ್ ಭಟ್ಟರೈ ಅವರನ್ನು ಇದೇ ಮೊದಲ ಬಾರಿಗೆ ಕೇಂದ್ರೀಯ ತನಿಖಾ ದಳ (ಸಿಐಬಿ) ವಿಚಾರಣೆಗೆ ಒಳಪಡಿಸಿದೆ.

ಸಂಪೂರ್ಣ ಸುದ್ದಿ ಓದಲು: ಭೂಕಬಳಿಕೆ ಹಗರಣ: ನೇಪಾಳದ ಇಬ್ಬರು ಮಾಜಿ ಪ್ರಧಾನಿಗಳ ವಿಚಾರಣೆ