ನವದೆಹಲಿ: ‘ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೈತಿಕ ನೆಲೆಗಟ್ಟಿನಲ್ಲಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಒತ್ತಾಯಿಸಿದ್ದಾರೆ.

‘ಮತ ಕಳ್ಳತನ’ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಇದುವರೆಗೆ ಚುನಾವಣಾ ಆಯೋಗಕ್ಕೆ ಲಿಖಿತ ಘೋಷಣೆ ಸಲ್ಲಿಸದಿರುವ ಬಗ್ಗೆಯೂ ಅವರು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಚುನಾವಣಾ ಆಯೋಗ ಮತ್ತು ಚುನಾವಣೆಯಲ್ಲಿ ನಂಬಿಕೆ ಇಲ್ಲದಿದ್ದರೆ ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವಂತೆ ಸೋನಿಯಾ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನೂ ಭಾಟಿಯಾ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲಯ ಪ್ರದೇಶದ ಮುಖ್ಯಮಂತ್ರಿಗಳೂ ರಾಜೀನಾಮೆ ನೀಡಲಿ. ಯಾಕೆಂದರೆ ಅವರಿಗೂ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ಮತ ಕಳ್ಳತನಕ್ಕೆ ಸಂಬಂಧಿಸಿದಂತೆ ಮಾಧ್ಯಮ ಮುಂದೆ ಆಧಾರ ರಹಿತ ಆರೋಪ ಮಾಡಿರುವ ರಾಹುಲ್, ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ದಾಖಲೆ ಕೇಳಿದಾಗ ಲಿಖಿತ ಘೋಷಣೆ ಸಲ್ಲಿಸಲು ನಿರಾಕರಿಸುತ್ತಿರುವುದೇ’ ಎಂದು ಭಾಟಿಯಾ ಪ್ರಶ್ನಿಸಿದರು.

‘ಆಯೋಗದ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ ಮೊದಲು ನೀವು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿ. ನಂತರ ಸುಪ್ರೀಂಕೋರ್ಟ್, ಹೈಕೋರ್ಟ್, ಜನರ ಬಳಿಗೆ ಹೋಗಿ’ ಎಂದು ಭಾಟಿಯಾ ಹೇಳಿದರು.

‘ಯಾವುದು ನಿಮಗೆ ಹೊಂದುತ್ತದೆಯೋ ಅದನ್ನು ನೀವು ಒಪ್ಪುತ್ತೀರಾ, ಯಾವುದು ನಿಮಗೆ ಹೊಂದುವುದಿಲ್ಲವೋ ಅದನ್ನು ತಿರಸ್ಕರಿಸಿ ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸಿದ್ದೀರಾ, ಇದು ನಡೆಯುವುದಿಲ್ಲ’ ಎಂದರು.
.2024ರ ಲೋಕಸಭಾ ಚುನಾವಣೆಯಲ್ಲಿ 70-100 ಸ್ಥಾನಗಳಲ್ಲಿ ಮತ ಕಳವು: ರಾಹುಲ್ ಗಾಂಧಿ.ಮತ ಕಳ್ಳತನ: ದನ ಕಾಯುವ ಮಕ್ಕಳಂತೆ ರಾಹುಲ್ ಗಾಂಧಿ ಆರೋಪ– ವಿ.ಸೋಮಣ್ಣ ವ್ಯಂಗ್ಯ.ಇದು ಮಾಡು ಇಲ್ಲವೇ ಮಡಿ ಹೋರಾಟ | ಮತ ಕಳವು ತನಿಖೆ ಮಾಡಿ: ರಾಹುಲ್ ಗಾಂಧಿ.ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ: ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ.ಮತ ಕಳವು ಆರೋಪ | ಘೋಷಣೆಗೆ ರಾಹುಲ್ ಗಾಂಧಿ ಸಹಿ ಹಾಕಲಿ ಅಥವಾ ಕ್ಷಮೆ ಕೇಳಲಿ: ಆಯೋಗ.ಮತಗಳ್ಳತನ ಆರೋಪ: ರಾಹುಲ್ ಗಾಂಧಿ ಮೆದುಳಿನಲ್ಲಿ ಚಿಪ್ ಕಾಣೆಯಾಗಿದೆ ಎಂದ ಫಡಣವೀಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.