ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್ ಬೆದರಿಕೆ: ದೆಹಲಿ ಹೈಕೋರ್ಟ್ ಆವರಣದಲ್ಲಿ ಹೆಚ್ಚಿನ ಭದ್ರತೆ

Published 15 ಫೆಬ್ರುವರಿ 2024, 13:05 IST
Last Updated 15 ಫೆಬ್ರುವರಿ 2024, 13:05 IST
ಅಕ್ಷರ ಗಾತ್ರ

ನವದೆಹಲಿ: ಬಾಂಬ್ ಬೆದರಿಕೆಯೊಡ್ಡಿದ ಇ–ಮೇಲ್ ಬಂದ ಕಾರಣ ದೆಹಲಿ ಹೈಕೋರ್ಟ್ ಆವರಣದಲ್ಲಿ ಗುರುವಾರ ಭದ್ರತೆಯನ್ನು ಹೆಚ್ಚಿಸಲಾಯಿತು. 

ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್ ಅವರ ಅಧಿಕೃತ ಇ–ಮೇಲ್ ಖಾತೆಗೆ ಬುಧವಾರ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿತ್ತು. ಬಲವಂತ್ ದೇಸಾಯಿ ಎಂಬ ಹೆಸರಿನಿಂದ ಇ–ಮೇಲ್ ಬಂದಿದ್ದು, ಗುರುವಾರ ಬಾಂಬ್ ಸ್ಫೋಟಿಸಲಿದೆ ಎಂದು ಅದರಲ್ಲಿ ಬರೆಯಲಾಗಿತ್ತು. 

‘ದೆಹಲಿಯಲ್ಲಿ ಸಂಭವಿಸಲಿರುವ ಅತಿ ದೊಡ್ಡ ಸ್ಫೋಟ ಇದು. ಸಚಿವರನ್ನೂ ಕರೆಯಿರಿ. ಎಲ್ಲರನ್ನೂ ಸ್ಫೋಟ ಚಿಂದಿ ಮಾಡಲಿದೆ’ ಎಂಬರ್ಥದ ಸಾಲುಗಳನ್ನು ಇ–ಮೇಲ್ ಒಳಗೊಂಡಿತ್ತು. 

ಇ–ಮೇಲ್ ವಿವರನ್ನು ನೀಡಿ ದೆಹಲಿ ಹೈಕೋರ್ಟ್‌ ಸಿಬ್ಬಂದಿ ಪೊಲೀಸ್ ಕಮಿಷನರ್ ಸಂಜತ್ ಅರೋರಾ ಅವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT