ಚೆನ್ನೈ: ತಮಿಳುನಾಡು ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವಾಗ ರಾಜ್ಯಪಾಲ ಆರ್.ಎನ್. ರವಿ ಅವರು ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಪೂರ್ತಿಯಾಗಿ ಓದಲು ನಿರಾಕರಿಸಿದರು.

ಆ ಭಾಷಣದಲ್ಲಿ ತಪ್ಪುದಾರಿಗೆ ಎಳೆಯುವ ಅಂಶಗಳು ಇವೆ ಎಂದು ಹೇಳಿರುವ ರವಿ ಅವರು, ರಾಷ್ಟ್ರಗೀತೆ ವಿಚಾರದಲ್ಲಿ ಡಿಎಂಕೆ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ಆಕ್ರೋಶದ ಮಾತುಗಳನ್ನು ವಿಧಾನಸಭೆಯ ಸ್ಪೀಕರ್ ಅವರು ಕಡತದಿಂದ ತೆಗೆಸಿದ್ದಾರೆ.

ರಾಷ್ಟ್ರಗೀತೆ ನುಡಿಸುವ ಮೊದಲೇ ರಾಜ್ಯಪಾಲರು ಸದನದಿಂದ ಹೊರನಡೆದರು. ಕಡತದಿಂದ ತೆಗೆದಿರುವ ಮಾತುಗಳು ರವಿ ಅವರ ವೈಯಕ್ತಿಕ ಹೇಳಿಕೆಗಳಾಗಿದ್ದವು, ಸರ್ಕಾರ ನೀಡಿದ್ದ ಭಾಷಣದ ಪಠ್ಯದಲ್ಲಿ ಇರುವ ಮಾತುಗಳು ಮಾತ್ರ ಸದನದ ಕಡತಗಳಲ್ಲಿ ಉಳಿಯುತ್ತವೆ ಎಂದು ಸ್ಪೀಕರ್ ಹೇಳಿದ್ದಾರೆ.

ರಾಜ್ಯಪಾಲ ರವಿ ಅವರು ರಾಷ್ಟ್ರಗೀತೆಯನ್ನು ತಮ್ಮ ಭಾಷಣದ ಆರಂಭಕ್ಕೂ ಮೊದಲು ಹಾಗೂ ಭಾಷಣದ ಕೊನೆಯಲ್ಲಿ ನುಡಿಸಬೇಕು ಎಂದು ಹೇಳಿದ್ದರು. ಆದರೆ, ತಮಿಳುನಾಡಿನಲ್ಲಿ ರಾಜ್ಯಪಾಲರ ಭಾಷಣಕ್ಕೂ ಮೊದಲು ತಮಿಳುನಾಡು ರಾಜ್ಯದ ಗೀತೆಯನ್ನು ನುಡಿಸಲಾಗುತ್ತದೆ, ಭಾಷಣದ ನಂತರದಲ್ಲಿ ರಾಷ್ಟ್ರಗೀತೆ ನುಡಿಸಲಾಗುತ್ತದೆ ಎಂದು ಸ್ಪೀಕರ್ ಕೆ. ಅಪ್ಪಾವು ಹೇಳಿದರು.

ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ತಮಿಳುನಾಡು ವಿಧಾನಸಭೆಯು ಸತತ ಎರಡನೆಯ ವರ್ಷವೂ ವಿವಾದಕ್ಕೆ ಸಾಕ್ಷಿಯಾಗಿದೆ. ರವಿ ಅವರು ಹಿಂದಿನ ವರ್ಷ ಕೂಡ ತಮಗೆ ನೀಡಿದ್ದ ಭಾಷಣದ ಪ್ರತಿಯಲ್ಲಿನ ಕೆಲವು ಸಾಲುಗಳನ್ನು ಓದಿರಲಿಲ್ಲ. ಅಲ್ಲದೆ, ತಾವಾಗಿಯೇ ಒಂದಿಷ್ಟು ಮಾತುಗಳನ್ನು ಹೇಳಿದ್ದರು. ನಂತರ ತಮಿಳುನಾಡು ವಿಧಾನಸಭೆಯು ನಿರ್ಣಯವೊಂದನ್ನು ಕೈಗೊಂಡು, ಭಾಷಣದ ಮೂಲ ಪ್ರತಿಯಲ್ಲಿ ಇರುವ ಮಾತುಗಳನ್ನು ಮಾತ್ರ ಕಡತಕ್ಕೆ ಸೇರಿಸಿತ್ತು.

ಸೋಮವಾರ ರವಿ ಅವರು, 46 ಪುಟಗಳ ಭಾಷಣದ ಪ್ರತಿಯಲ್ಲಿನ ಮೊದಲ ಪುಟವನ್ನು ಮಾತ್ರ ಓದಿದರು. ಸದನದಲ್ಲಿ ಅಪ್ಪಾವು ಅವರು ಕೆಲವು ಮಾತುಗಳನ್ನು ಆಡಿದ ನಂತರದಲ್ಲಿ ರವಿ ಅವರು ಸದನದಿಂದ ಹೊರನಡೆದರು. ಸಂಪ್ರದಾಯದಂತೆ ಭಾಷಣವನ್ನು ಕಡತಕ್ಕೆ ಸೇರಿಸುವ ಕುರಿತು ನಿರ್ಣಯ ಅಂಗೀಕರಿಸಿದ ನಂತರದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ ಎಂದು ಅಪ್ಪಾವು ಅವರು ಹೇಳುತ್ತಿದ್ದರೂ ರವಿ ಅವರು ನಿಲ್ಲಲಿಲ್ಲ.

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕೂಡ ಈಚೆಗೆ ಸದನವನ್ನು ಉದ್ದೇಶಿಸಿ ಮಾಡುವ ಭಾಷಣದ ಪ್ರತಿಯ ಕೊನೆಯ ಪ್ಯಾರಾವನ್ನು ಮಾತ್ರ ಓದಿದ್ದರು.

ತಮಿಳುನಾಡಿನ ರಾಜ್ಯಪಾಲ ರವಿ ಅವರು ಓದಲು ನಿರಾಕರಿಸಿದ ಭಾಗದಲ್ಲಿ, ಜಿಎಸ್ಟಿಗೆ ಸಂಬಂಧಿಸಿದ ಕೆಲವು ಮಾತುಗಳು ಇದ್ದವು. ಜಿಎಸ್ಟಿ ಪರಿಹಾರ ವ್ಯವಸ್ಥೆಯನ್ನು 2022ರಲ್ಲಿ ಕೊನೆಗೊಳಿಸುವ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ವಾರ್ಷಿಕ ₹20 ಸಾವಿರ ಕೋಟಿ ನಷ್ಟ ಉಂಟುಮಾಡಿದೆ ಎಂಬ ಮಾತು ಅದರಲ್ಲಿ ಇತ್ತು. ಅಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡಿನಲ್ಲಿ ಜಾರಿಗೆ ತರುವುದಿಲ್ಲ ಎಂಬ ಮಾತು ಕೂಡ ಭಾಷಣದ ಪ್ರತಿಯಲ್ಲಿ ಇತ್ತು.

ಸದನದಲ್ಲಿ ಸೋಮವಾರ ನಡೆದಿದ್ದು ಸರ್ಕಾರ ಹಾಗೂ ರಾಜ್ಯಪಾಲರಿಗೆ ಸಂಬಂಧಿಸಿದ ವಿಚಾರ ಎಂದು ವಿರೋಧ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಹೇಳಿದ್ದಾರೆ. ಎಐಎಡಿಎಂಕೆ ಪಕ್ಷವು ಅಧಿಕಾರದಲ್ಲಿ ಇದ್ದಾಗ ಯಾವ ಸಮಸ್ಯೆಯೂ ಇರಲಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.