ನವದೆಹಲಿ: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾ ಸಮೀಪ ಪುರುಷರು, ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯವನ್ನು ನಿರ್ಮಿಸಲು ಕೇಂದ್ರ ತೀರ್ಮಾನಿಸಿದೆ.

‘ಅಲ್ಲದೆ, ಹೆದ್ದಾರಿಗಳ ಬದಿಯಲ್ಲಿ ಪ್ರತಿ 40–60 ಕಿ.ಮೀ ಅಂತರದಲ್ಲಿ ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸಲು ನಿರ್ಧರಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಭೂ ಸಾರಿಗೆ ಸಚಿವಾಲಯದ ಮಾಹಿತಿಯನ್ನು ಆಧರಿಸಿ ಮಂಗಳವಾರ ಲೋಕಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿರುವ ಸಚಿವರು, ‘2015ರಿಂದ ಎನ್ಎಚ್ಎಐ ವ್ಯಾಪ್ತಿಯಲ್ಲಿರುವ ಹೆದ್ದಾರಿಗಳಿಗೆ ಅನ್ವಯಿಸಿ, ಸ್ವಚ್ಛ ಭಾರತ್ ಮಿಷನ್ ಅಡಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.

ಅಲ್ಲದೆ ಶೌಚಾಲಯ ಹಾಗೂ ಇತರೆ ಮೂಲಸೌಲಭ್ಯ ಕುರಿತ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳಿದ್ದರೆ ದಾಖಲಿಸಲು ‘ರಾಜಮಾರ್ಗ ಯಾತ್ರಾ’ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವುದನ್ನು ಖಾತರಿಪಡಿಸಿಕೊಳ್ಳಲು ಹಾಗೂ ಶೌಚಾಲಯದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಎ.ಐ ತಂತ್ರಜ್ಞಾನವನ್ನೂ ಬಳಕೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಇದುವರೆವಿಗೂ ಶುಚಿತ್ವ ನಿರ್ವಹಣೆ, ಮೇಲ್ವಿಚಾರಣೆಗೆ 1,300 ಶೌಚಾಲಯಗಳನ್ನು ‘ಎನ್ಎಚ್ಎಐ ಒನ್’ ಆ್ಯಪ್ನಲ್ಲಿ ನೋಂದಾಯಿಸಲಾಗಿದೆ. ಸ್ವಚ್ಛತೆ ಹೊಣೆ ಟೋಲ್ ಸಂಗ್ರಹ ಏಜೆನ್ಸಿಯದ್ದಾಗಿದೆ. ಇದರಲ್ಲಿ ವಿಫಲವಾದಲ್ಲಿ ಮಾಸಿಕ ₹ 1 ಲಕ್ಷ ದಂಡ ವಿಧಿಸಲೂ ಅವಕಾಶವಿದೆ. ಇದುವರೆಗೂ ಒಟ್ಟು ₹46 ಲಕ್ಷ ದಂಡವನ್ನು ಟೋಲ್ ಏಜೆನ್ಸಿಗಳಿಗೆ ವಿಧಿಸಲಾಗಿದೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.