ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

‘ಅಮೆರಿಕದ ಪಾಲಿಗೆ ಭಾರತಕ್ಕಿಂತ ಮುಖ್ಯವಾದ ದೇಶ ಇನ್ನೊಂದಿಲ್ಲ. ಉಭಯ ರಾಷ್ಟ್ರಗಳು ತಮ್ಮ ನಡುವಿನ ವ್ಯಾಪಾರ ಒಪ್ಪಂದ ದೃಢಪಡಿಸಲು ಮಾತುಕತೆಯಲ್ಲಿ ಸಕ್ರಿಯವಾಗಿ ತೊಡಗುತ್ತಿವೆ’ ಎಂದು ಭಾರತದ ನಿಯೋಜಿತ ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ತಿಳಿಸಿದ್ದಾರೆ.
.ಟ್ರಂಪ್–ಮೋದಿ ಉತ್ತಮ ಸ್ನೇಹಿತರು, ಅದಕ್ಕೆ ನಾನೇ ಸಾಕ್ಷಿ: ಸರ್ಗಿಯೊ ಗೋರ್.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಕೊನೆ ಕ್ಷಣದ ಚುನಾವಣ ಪ್ರಚಾರದ ವೇಳೆ ವಾಗ್ವಾದಗಳು ಜೋರಾಗಿಯೇ ನಡೆಯುತ್ತಿವೆ. ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರನ್ನು ‘ರಸಮಲೈ’ ಎಂದು ಅಣಕಿಸಿರುವುದು ವಿವಾದಕ್ಕೆ ಕಾರಣವಾಗಿದೆ.
.ನಾನು ರೈತನ ಮಗ, ಬೆದರಿಕೆಗೆ ಹೆದರಲ್ಲ..ರಸಮಲೈ ಎಂದ ಠಾಕ್ರೆಗೆ ಅಣ್ಣಾಮಲೈ ತಿರುಗೇಟು.
ಲ್ಯಾಣ ಕರ್ನಾಟಕ ಭಾಗಕ್ಕೆ ಹರಿದು ಬರುತ್ತಿರುವ ಅನುದಾನದ ಕುರಿತು ಉಲ್ಲೇಖಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟಾಂಗ್ ನೀಡಿದ ಪ್ರಸಂಗ ಜಿಲ್ಲೆಯ ಯಡ್ರಾಮಿಯಲ್ಲಿ ಸೋಮವಾರ ನಡೆಯಿತು.
.ನಮಗೆ ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್.
ಅಮೆರಿಕದಲ್ಲಿ ನೆಲಸಿರುವ ಭಾರತ ಮೂಲದ ಖಗೋಳ ವಿಜ್ಞಾನಿ ಪ್ರೊಫೆಸರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಇಂಗ್ಲೆಂಡ್ನ ರಾಯಲ್ ಅಸ್ಟ್ರೊನಾಮಿಕಲ್ ಸೊಸೈಟಿಯ (ಆರ್ಎಎಸ್) ಚಿನ್ನದ ಪದಕ ಲಭಿಸಿದೆ.
.ಭಾರತ ಮೂಲದ ಖಗೋಳ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿಗೆ ರಾಯಲ್ ಸೊಸೈಟಿ ಪದಕ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020 ಹಾಗೂ 2021 ನೇ ಕ್ಯಾಲೆಂಡರ್ ವರ್ಷಗಳ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಿರಿಯ ಪತ್ರಕರ್ತ ರಘುನಾಥ ಚ.ಹ.ಅವರು ಆಯ್ದ 20 ಸಿನೆಮಾಗಳ ಕುರಿತು ಬರೆದ ಲೇಖನಗಳ ಸಂಗ್ರಹ 'ನಮೋ ವೆಂಕಟೇಶ' ಕೃತಿ ಹಾಗೂ ಲೇಖಕ ಹಾಗೂ ಚಲನಚಿತ್ರ ನಿರ್ದೇಶಕ ಪ್ರಕಾಶರಾಜ್ ಮೇಹು ಅವರು ಬರೆದ ಡಾ.ರಾಜಕುಮಾರ್ ಬದುಕಿನ ಕುರಿತ 'ಅಂತರಂಗದ ಅಣ್ಣ' ಕೃತಿ ಆಯ್ಕೆಯಾಗಿವೆ.
.ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ: ರಘುನಾಥ, ಪ್ರಕಾಶರಾಜ್ ಕೃತಿಗಳ ಆಯ್ಕೆ.
ಶಕ್ಸ್ಗಾಮ್ ಕಣಿವೆಯು ತನ್ನ ಭೂಭಾಗವಾಗಿದೆ ಎಂದು ಚೀನಾ ಪುನರುಚ್ಚರಿಸಿದ್ದು, ಅಲ್ಲಿ ಕೈಗೊಂಡಿರುವ ಮೂಲಸೌಕರ್ಯ ಯೋಜನೆಗಳು ಆಕ್ಷೇಪಕ್ಕೆ ಹೊರತಾಗಿವೆ ಎಂದು ಪ್ರತಿಪಾದಿಸಿದೆ. ಶಕ್ಸ್ಗಾಮ್ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಭಾರತ ಕಳೆದ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿತ್ತು.
.ಶಕ್ಸ್ಗಾಮ್ ಕಣಿವೆ ತನ್ನ ಭೂಭಾಗ: ಚೀನಾ ಪುನರುಚ್ಚಾರ.
ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಅವರನ್ನು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಎಐಐಎಂಎಸ್) ಸೋಮವಾರ ದಾಖಲಿಸಲಾಗಿದೆ.
.ದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಏಮ್ಸ್ಗೆ ದಾಖಲು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆಯನ್ನು ಜೂನ್ ಅಂತ್ಯದ ಒಳಗೆ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
.GBA ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ ಜೂನ್ನಲ್ಲಿ ಚುನಾವಣೆ: ಸುಪ್ರಿಂಕೋರ್ಟ್ ಆದೇಶ.
ಕನ್ನಡದ ಜನಪ್ರಿಯ ‘ಬಿಗ್ ಬಾಸ್’ ರಿಯಾಲಿಟಿ ಷೋದಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ಷೋ ನಿರೂಪಕ ಕಿಚ್ಚ ಸುದೀಪ್ ತಪ್ಪಾದ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಖಂಡಿಸಿರುವ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್, ಸುದೀಪ್ ಅವರು ತಮ್ಮ ಮಾತಿನ ಕುರಿತು ಸರಿಯಾದ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದೆ.
.‘ಬಿಗ್ ಬಾಸ್’ನಲ್ಲಿ ರಣಹದ್ದುಗಳ ಬಗ್ಗೆ ತಪ್ಪು ಮಾಹಿತಿ ನೀಡಿದ ನಟ ಸುದೀಪ್: ಖಂಡನೆ.
ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಮಳೆ ಬಂದಿದ್ದರಿಂದ ವಿಜೆಡಿ ನಿಯಮದ ಅನ್ವಯ ಕರ್ನಾಟಕ ತಂಡವು ಮುಂಬೈ ವಿರುದ್ಧ 55 ರನ್ಗಳ ಗೆಲುವು ದಾಖಲಿಸಿದೆ.
.ವಿಜಯ್ ಹಜಾರೆ ಟ್ರೋಫಿ: ಸೆಮಿಫೈನಲ್ಗೆ ಕರ್ನಾಟಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.