ಕುಸುಮಾ ಸೋದರನ ಮನೆಯಲ್ಲಿ ಶೋಧ
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರ ಸೋದರ ಅನಿಲ್ ಗೌಡ ಮನೆಯಲ್ಲೂ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ‘ವೀರೇಂದ್ರ ಅವರ ಕಂಪನಿಗಳ ಪ್ರಕರಣದಲ್ಲೇ ಅನಿಲ್ ಗೌಡ ಅವರ ಮನೆಯಲ್ಲಿ ಶೋಧ ನಡೆಸಲಾಗಿದೆ. ರಾಜರಾಜೇಶ್ವರಿನಗರ ನಾಗರಭಾವಿ ಮತ್ತು ಪಾಪರೆಡ್ಡಿ ಪಾಳ್ಯದಲ್ಲಿನ ಮೂರು ಮನೆಗಳು ಮತ್ತು ಒಂದು ಕಚೇರಿಯಲ್ಲೂ ಶೋಧ ನಡೆಸಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.