ಬೆಂಗಳೂರು: ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಕುಟುಂಬಗಳ ಪಡಿತರ ಫಲಾನುಭವಿಗಳಿಗೆ ಇನ್ನುಮುಂದೆ ‘ಅನ್ನ ಭಾಗ್ಯ’ದ ಐದು ಕೆ.ಜಿ ಅಕ್ಕಿ ಜತೆಗೆ ‘ಇಂದಿರಾ ಆಹಾರ ಕಿಟ್’ ನೀಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ‘ಇಂದಿರಾ ಆಹಾರ ಕಿಟ್’ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಇರಲಿವೆ’ ಎಂದು ವಿವರಿಸಿದರು.

ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್ (ಪಿಎಚ್ಎಚ್) ಕುಟುಂಬಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ಫಲಾನುಭವಿಗೆ 5 ಕೆ.ಜಿ. ಅಕ್ಕಿ ಜತೆಗೆ, ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ಅಥವಾ ಗೋಧಿ, ರಾಗಿ, ಜೋಳ ಸೇರಿಸಿ ಒಟ್ಟು 10 ಕೆ.ಜಿ ಆಹಾರ ಧಾನ್ಯ ವಿತರಿಸಲಾಗುತ್ತಿತ್ತು. ರಾಜ್ಯದ ಪಾಲಿನ ಅಕ್ಕಿ ಬದಲು ದ್ವಿದಳ ಧಾನ್ಯ, ಅಡುಗೆ ಎಣ್ಣೆ ಮತ್ತಿತರ ವಸ್ತುಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿ ವಿತರಿಸುತ್ತಿದೆ. ಇದರಿಂದ ಕೆಲವು ಕುಟುಂಬಗಳು ತಿಂಗಳಿಗೆ 40 ರಿಂದ 50 ಕೆ.ಜಿ ಅಕ್ಕಿ ಪಡೆಯುತ್ತಿವೆ. ಇದು ಕುಟುಂಬದ ಅಗತ್ಯಕ್ಕಿಂತಲೂ ಹೆಚ್ಚಾಗಿದೆ. ಈ ರೀತಿ ಹೆಚ್ಚುವರಿಯಾದ ಅಕ್ಕಿಯು ಬೇರೆ ಉದ್ದೇಶಗಳಿಗೆ ದುರುಪಯೋಗವಾಗುತ್ತಿದೆ. ಆದ್ದರಿಂದ ಇಂದಿರಾ ಆಹಾರ ಕಿಟ್ ಒದಗಿಸಲು ತೀರ್ಮಾನಿಸಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ, ಹೆಚ್ಚುವರಿ ಅಕ್ಕಿ ನೀಡುವುದರ ಬದಲಿಗೆ ಸಮತೋಲಿತ ಆರೋಗ್ಯ ನೀಡುವ ಆಹಾರದ ಕಿಟ್ ನೀಡುವುದು ಸೂಕ್ತ. ಇದರಿಂದ ಅಕ್ಕಿಯ ದುರುಪಯೋಗ ತಡೆಯಲು ಸಾಧ್ಯ ಎಂಬ ಅಭಿಪ್ರಾಯ ಸಚಿವ ಸಂಪುಟ ಸಭೆಯಲ್ಲಿ ವ್ಯಕ್ತವಾಯಿತು ಎಂದು ಹೇಳಿದರು.

‘ಅನ್ನಭಾಗ್ಯ’ ಯೋಜನೆಯಲ್ಲಿ ವಿತರಿಸಲಾಗುವ ಅಕ್ಕಿಯಿಂದ ಕೇವಲ ಕಾರ್ಬೊಹೈಡ್ರೇಟ್ ಮಾತ್ರ ದೊರೆಯುತ್ತಿದೆ. ಆದರೆ ವ್ಯಕ್ತಿಯ ಆರೋಗ್ಯಕ್ಕೆ ಅಗತ್ಯವಿರುವ ಕೊಬ್ಬಿನಾಂಶ, ಪ್ರೋಟೀನ್ ಸಿಗುತ್ತಿಲ್ಲ. ಉತ್ತಮ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಪೌಷ್ಟಿಕಾಂಶಗಳನ್ನು ಒಳಗೊಂಡ ಸಮತೋಲಿತ ಆಹಾರ ಒದಗಿಸುವ ಧಾನ್ಯಗಳನ್ನು ಕಿಟ್ ಮೂಲಕ ಒದಗಿಸುವುದು ಸರ್ಕಾರದ ಉದ್ದೇಶ ಎಂದರು.

ಪಡಿತರದಾರರು ಅಕ್ಕಿ, ಗೋಧಿ ಬಿಟ್ಟು ಇತರೆ ಆಹಾರ ಧಾನ್ಯಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ಖರೀದಿಸುತ್ತಿದ್ದಾರೆ. ಒಂದು ಕುಟುಂಬಕ್ಕೆ ಸರಿ ಸುಮಾರು ₹500 ರಿಂದ ₹1,000ದ ವರೆಗೆ ವೆಚ್ಚವಾಗುತ್ತಿದೆ. ಸರ್ಕಾರ ಆಹಾರ ಕಿಟ್ ವಿತರಿಸುವುದರಿಂದ ಸುಮಾರು 1.26 ಕೋಟಿ ಕಾರ್ಡುದಾರರಿಂದ ತಿಂಗಳಿಗೆ ₹630 ಕೋಟಿ ಉಳಿತಾಯವಾಗಲಿದೆ ಎಂದು ಪಾಟೀಲ ಹೇಳಿದರು.

ಎಷ್ಟು ಸದಸ್ಯರಿರುವ ಕುಟುಂಬಕ್ಕೆ ಎಷ್ಟರ ಪ್ರಮಾಣದಲ್ಲಿ ತೊಗರಿ, ಅಡುಗೆ ಎಣ್ಣೆ, ಸಕ್ಕರೆ ಸಿಗಲಿದೆ ಎಂಬುದು ಸರ್ಕಾರದ ಅಧಿಕೃತ ಆದೇಶ ಹೊರಡಿಸಿದ ಬಳಿಕವಷ್ಟೇ ಖಚಿತ ಮಾಹಿತಿ ಸಿಗಲಿದೆ.

ಕಿಟ್ನಲ್ಲಿರುವುದೆಷ್ಟು?

* ಪದಾರ್ಥ;ಪ್ರಮಾಣ ತೊಗರಿಬೇಳೆ;2 ಕೆ.ಜಿ ಅಡುಗೆ ಎಣ್ಣೆ;1 ಲೀಟರ್ ಸಕ್ಕರೆ; 1ಕೆ.ಜಿ ಉಪ್ಪು;1ಕೆ.ಜಿ

*ಒಂದು ಕುಟುಂಬವನ್ನು ಒಂದು ಯುನಿಟ್ ಎಂದು ಪರಿಗಣಿಸಿ ಇಷ್ಟು ಪ್ರಮಾಣ ನಿಗದಿ ಮಾಡಲಾಗಿದೆ. ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಇದು ವ್ಯತ್ಯಾಸವಾಗಲಿದೆ.

ಕುಟುಂಬದ ಸದಸ್ಯವಾರು ಕಿಟ್: ಮುನಿಯಪ್ಪ

ಒಂದು ಕುಟುಂಬದಲ್ಲಿ ಒಬ್ಬರು ಅಥವಾ ಇಬ್ಬರಿದ್ದರೆ ತಲಾ ಅರ್ಧ ಕೆ.ಜಿ ಆಹಾರ ಪದಾರ್ಥಗಳ ಕಿಟ್ ಮೂರು–ನಾಲ್ಕು ಸದಸ್ಯರಿದ್ದರೆ ತಲಾ ಒಂದೊಂದು ಕೆ.ಜಿ ಕಿಟ್ ಐದಕ್ಕಿಂತ ಹೆಚ್ಚು ಸದಸ್ಯರಿದ್ದರೆ ತಲಾ ಒಂದೂವರೆ ಕೆ.ಜಿ ಕಿಟ್ ವಿತರಿಸಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಯೋಜನೆ ಕುರಿತು ವಿವರ ನೀಡಿದ ಅವರು ರಾಜ್ಯದಲ್ಲಿ 12615815 ಪಡಿತರ ಕಾರ್ಡ್ಗಳು ಇವೆ. ಇದರಿಂದ 44862192 ಫಲಾನುಭವಿಗಳಿಗೆ ಅನುಕೂಲ ಆಗಲಿದೆ ಎಂದರು.

1 ದಿನ ವೇತನ ಸಹಿತ ಮುಟ್ಟಿನ ರಜೆ

ಸರ್ಕಾರಿ ಕಚೇರಿಗಳು ಗಾರ್ಮೆಂಟ್ಸ್ ಬಹುರಾಷ್ಟ್ರೀಯ ಕಂಪನಿಗಳು ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತು ಇತರ ಎಲ್ಲ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಮಹತ್ವದ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ. ಈ ಉದ್ದೇಶಕ್ಕಾಗಿ ‘ಋತುಚಕ್ರ ರಜೆ ನೀತಿ–2025’ ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಟ್ಟಿನ ಆರೋಗ್ಯವನ್ನು ಮಹಿಳೆಯರ ಹಕ್ಕುಗಳು ಮತ್ತು ಕೆಲಸದ ಸ್ಥಳದ ಕಲ್ಯಾಣದ ಮೂಲಭೂತ ಅಂಶವೆಂದು ಪರಿಗಣಿಸಿ ಅದರ ಮಹತ್ವವನ್ನು ಗುರುತಿಸಿದೆ. ಋತುಚಕ್ರ ರಜೆ ನೀತಿಯು ಮಹಿಳೆಯರು ಯಾವುದೇ ಕಳಂಕ ಅಥವಾ ಪರಿಣಾಮಗಳ ಭಯವಿಲ್ಲದೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬಹುದಾದ ಸಹಾಯಕ ವಾತಾವರಣವನ್ನು ಸೃಷ್ಟಿಸಲು ಸಕ್ರಿಯ ಹೆಜ್ಜೆಯಾಗಿದೆ ಎಂದರು. ಮುಟ್ಟಿನ ರಜೆಗೆ ದೇಶದಲ್ಲಿ ನಿರ್ದಿಷ್ಟವಾಗಿ ಯಾವುದೇ ಕಾನೂನು ಇಲ್ಲದಿದ್ದರೂ ಹಲವಾರು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡುವ ನೀತಿಗಳನ್ನು ಅಳವಡಿಸಿಕೊಂಡಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.