ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ಗಡಿಭಾಗದ ಹಿಂದುಳಿದಿರುವ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು.
– ಗಣೇಶ ಹುಕ್ಕೇರಿ, ಕಾಂಗ್ರೆಸ್
‘ಕಲಾಪಕ್ಕೆ ಹಾಜರಾಗದ ಸತೀಶ’ ಸಚಿವ ಸತೀಶ ಜಾರಕಿಹೊಳಿ ಒಂದು ದಿನವೂ ಸದನಕ್ಕೆ ಬಂದಿಲ್ಲ. ಬೆಳಗಾವಿಯವರೇ ಆಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೆಳಗಾವಿಯಲ್ಲಿ ಇದ್ದರೂ ಸದನಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಆಕಾಂಕ್ಷಿ ಆಗಿರುವ ಅವರು ಈ ರೀತಿ ನಡೆದುಕೊಳ್ಳುವುದು ಸರಿಯೇ? ಮಂತ್ರಿಗಳ ರೋಸ್ಟರ್ ಪಟ್ಟಿಯ ಪ್ರಕಾರ ಯಾವ ಸಚಿವರೂ ವಿಧಾನಸಭೆಗೆ ಬರುತ್ತಿಲ್ಲ.
– ಅರವಿಂದ ಬೆಲ್ಲದ, ಬಿಜೆಪಿ
‘ಅಭಿವೃದ್ಧಿ ಕುರಿತು ಆತ್ಮವಿಮರ್ಶೆ ಆಗಲಿ’ ಸರ್ಕಾರ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಹೆಚ್ಚು ಕಡಿಮೆ ಸಮಾನವಾಗಿ ಅನುದಾನ ನೀಡುತ್ತದೆ. ಆದರೆ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಹಾಗಿದ್ದರೆ ಅನುದಾನ ಎಲ್ಲಿ ಸೋರಿ ಹೋಗುತ್ತಿದೆ. ಈ ಕುರಿತು ಮುಖ್ಯಮಂತ್ರಿಯವರು ಮತ್ತು ಈ ಭಾಗದ ರಾಜಕಾರಣಿಗಳು ಚಿಂತನೆ ನಡೆಸಬೇಕು.
– ಸಿ.ಬಿ. ಸುರೇಶ್‌ಬಾಬು, ಜೆಡಿಎಸ್
‘ತಲಾ ಆದಾಯದಲ್ಲಿ ಹಿಂದೆ’ ತಲಾ ಆದಾಯದಲ್ಲಿ ಕಲ್ಯಾಣ ಕರ್ನಾಟಕ ತುಂಬಾ ಹಿಂದೆ. ಇಡೀ ದೇಶದಲ್ಲಿ ಕರ್ನಾಟಕದ ತಲಾ ಆದಾಯದಲ್ಲಿ ನಂಬರ್ 1 ಇದೆ. ಆದರೆ ರಾಜ್ಯದಲ್ಲಿ ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ತಲಾ ಆದಾಯ ತುಂಬಾ ಹಿಂದಿದೆ. ಬೆಂಗಳೂರಿನ ತಲಾ ಆದಾಯ ₹6 ಲಕ್ಷ ಆದಾಯ ಇದ್ದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ₹1.30 ಲಕ್ಷ ಇದೆ.