ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸಿದ್ದು, ದೇಶದಲ್ಲೇ ಮೊದಲ ಬಾರಿ ಮನೆಗಳ ವಿದ್ಯುತ್ ಸಂಪರ್ಕದ ಮಾಹಿತಿಯನ್ನು (ಆರ್ಆರ್ ಸಂಖ್ಯೆ) ಸಮೀಕ್ಷೆಗೆ ಬಳಸಿಕೊಳ್ಳುತ್ತಿದೆ.

ಅತಿ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ. ವಿದ್ಯುತ್ ಬಳಕೆಯ ಶುಲ್ಕದ ರಸೀದಿ ನೀಡಲು ಪ್ರತಿ ಮೀಟರ್ಗೂ ಆರ್ಆರ್ ಸಂಖ್ಯೆ ನೀಡಲಾಗಿರುತ್ತದೆ. ಈ ಸಂಖ್ಯೆಯ ಆಧಾರದ ಮೇಲೆ ಪ್ರತಿ ಮನೆಗಳನ್ನೂ ಗುರುತಿಸಿ, ಆ ಮನೆಗಳಲ್ಲಿ ವಾಸಿಸುವ ಕುಟುಂಬದ ವಿವರಗಳನ್ನು ಖಚಿತವಾಗಿ ಸಂಗ್ರಹಿಸಬಹುದು ಎನ್ನುವುದು ಆಯೋಗದ ಲೆಕ್ಕಾಚಾರ.

ಸಮೀಕ್ಷೆಯ ಈ ವಿಶಿಷ್ಟ ವಿನ್ಯಾಸ, ಪ್ರಕ್ರಿಯೆಯನ್ನು ಇ–ಆಡಳಿತ, ಇಂಧನ ಇಲಾಖೆ, ಹಿಂದುಳಿದ ವರ್ಗಗಳ ಆಯೋಗದ ಸಹಯೋಗದಲ್ಲಿ ರೂಪಿಸಲಾಗಿದೆ. ಅದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು, ಸಮೀಕ್ಷಾ ವ್ಯಾಪ್ತಿಯಿಂದ ಯಾವುದೇ ಮನೆಗಳು ಬಿಟ್ಟುಹೋಗದಂತೆ ಮುನ್ನೆಚ್ಚರಿಕೆ ವಹಿಸಲು ವಿಧಾನ ಸಹಕಾರಿಯಾಗಿದೆ.

‘ಸೆ. 22ರಿಂದ ಅ.7ರವರೆಗೆ ನಡೆಸುವ ಎರಡನೇ ಹಂತದ ಸಮೀಕ್ಷಾ ಕಾರ್ಯದಲ್ಲಿ ವಿದ್ಯುತ್ ಮೀಟರ್ಗಳ ಮಾಹಿತಿ ಆಧಾರದ ಸಮೀಕ್ಷಾ ಕಾರ್ಯ ನಡೆಯಲಿದೆ. ದಸರಾ ರಜೆಯ ಅವಧಿಯ ಕಾರಣ ಮಕ್ಕಳ ಗಣತಿಗೂ ಅನುಕೂಲವಾಗುತ್ತದೆ’ ಎಂದು ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯ್ಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.