ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮದಲ್ಲಿ ಮಂಗಳವಾರ ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಅಗ್ರಾಣಿ ಹಳ್ಳವನ್ನು ಎತ್ತಿನ ಬಂಡಿಯಲ್ಲಿ ದಾಟುವಾಗ, ನಾಗನೂರ ಪಿಎ ಗ್ರಾಮದ ಸಹೋದರರಾದ ದೀಪಕ ಕಾಂಬಳೆ (9), ಗಣೇಶ ಕಾಂಬಳೆ (7) ಮತ್ತು ಒಂದು ಎತ್ತು ಸಾವನ್ನಪ್ಪಿದೆ. ಇನ್ನೊಬ್ಬ ಸಹೋದರ ವೇದಾಂತ ಕಾಂಬಳೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

‘ತಂದೆ ಸಂಜಯ ಕಾಂಬಳೆ ಚಕ್ಕಡಿ ಓಡಿಸುತ್ತಿದ್ದರು. ಮರಳು ತೆಗೆದ ಗುಂಡಿಯಲ್ಲಿ ಎತ್ತು ಆಯ ತಪ್ಪಿ ಬಿದ್ದ ಕೂಡಲೇ, ಚಕ್ಕಡಿ ಸಹಿತ ನಾಲ್ವರು ನೀರಿನಲ್ಲಿ ಬಿದ್ದರು. ಒಬ್ಬನನ್ನು ಮಾತ್ರ ರಕ್ಷಿಸಿಕೊಳ್ಳಲು ತಂದೆಗೆ ಸಾಧ್ಯವಾಯಿತು. ನೀರಿನಲ್ಲಿ ಮುಳುಗಿದ್ದ ಇಬ್ಬರು ಮಕ್ಕಳನ್ನು ಗ್ರಾಮಸ್ಥರ ನೆರವಿನಿಂದ ಹೊರತೆಗೆಯಲಾಯಿತು’ ಎಂದು ಅಥಣಿ ಪೊಲೀಸರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲದ ಜನತಾ ಕಾಲೊನಿಯಲ್ಲಿ ಮರ ಬಿದ್ದು
ಪಿ.ಸಿ.ವಿಷ್ಣು ಬೆಳ್ಳಿಯಪ್ಪ(65) ಎಂಬುವರು ಮೃತಪಟ್ಟರು.

ಕೊಳ್ಳೇಗಾಲ ವರದಿ (ಚಾಮರಾಜನಗರ):

ಈಜಲು ಹೋದ ಬೆಂಗಳೂರಿನ ದಯಾನಂದ ಸಾಗರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ನಂದನ್ (19) ಮಂಗಳವಾರ ಶಿವನಸಮುದ್ರದ ದರ್ಗಾ ಹಿಂಭಾಗದ ಕಾವೇರಿ ನದಿಯಲ್ಲಿ ಕೊಚ್ಚಿ ಹೋದರು. ಅವರೊಂದಿಗೆ ಇದ್ದ ಸಹಪಾಠಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ಅರುಣ್ಕುಮಾರ್ ನೇತೃತ್ವದ ತಂಡ ಧಾವಿಸಿದ್ದು ಶೋಧ ಕಾರ್ಯ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.