ಬೆಂಗಳೂರು: ‘ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಸಮಿತಿ ಅರ್ಹರನ್ನು ಆಯ್ಕೆ ಮಾಡಿದೆ. ಯಾವುದೇ ಅಪಸ್ವರ ಬಾರದಿರುವುದು ನನಗೆ ಸಂತೋಷ ಉಂಟು ಮಾಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸು ಮಾಡಿಲ್ಲ. ಆಯ್ಕೆ ಸಮಿತಿಯೇ ಸಾಧಕರನ್ನು ಅಂತಿಮವಾಗಿ ಆಯ್ಕೆ ಮಾಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬಂದಿದೆ. ಪ್ರಶಸ್ತಿ ಪಡೆದವರಿಗೆ ಜವಾಬ್ದಾರಿ ಹೆಚ್ಚಿದ್ದು, ಅವರವರ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಬೇಕು. ಸಾಧಕರು ಸಾಧನೆ ಮಾಡುವ ಮೂಲಕ ಅವರ ಬದುಕನ್ನು ಸಾರ್ಥಕತೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

‘ಅರ್ಜಿ ಹಾಕದೆ ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದೇವೆ. ಪ್ರಶಸ್ತಿ ಸಿಗದವರು ನಿರಾಸೆಯಾಗಬಾರದು. ಮುಂದಿನ ಬಾರಿ ಅಂಥವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು’ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಗಳಿಸಿದ ಸಂಪತ್ತು ಕ್ಷಣಿಕ. ಆದರೆ, ಪಡೆದ ಜ್ಞಾನ, ಮಾಡಿದ ಸಾಧನೆ ಶಾಶ್ವತ. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅವಮಾನ. ಅವಕಾಶ ಪಡೆದವನು ಅದೃಷ್ಟವಂತ, ಅವಕಾಶ ಸೃಷ್ಟಿಸಿಕೊಳ್ಳುವವನು ಬುದ್ಧಿವಂತ. ಹೀಗೆ ಹಲವಾರು ನುಡಿಗಟ್ಟುಗಳನ್ನು ಹೇಳುವ ಮೂಲಕ ಪ್ರಶಸ್ತಿ ಪುರಸ್ಕೃತರ ಸಾಧನೆಯನ್ನು ಬಣ್ಣಿಸಿದರು.

‘ನಮ್ಮ ನಡುವೆ ಇನ್ನೂ ಅನೇಕ ಸಾಧಕರಿದ್ದಾರೆ. ಆದರೆ, ಆಯಾ ಆಚರಣೆ ವರ್ಷಕ್ಕೆ ತಕ್ಕಂತೆ ಪ್ರಶಸ್ತಿ ನೀಡಬೇಕು ಎನ್ನುವ ನಿಯಮವನ್ನು ಮಾಡಿಕೊಂಡಿರುವ ಕಾರಣಕ್ಕೆ ಈ ಬಾರಿ 70 ಸಾಧಕರನ್ನು ಗುರುತಿಸಲಾಗಿದೆ’ ಎಂದರು.

ಸಂಕೀರ್ಣ ವಿಭಾಗದಲ್ಲಿ ಆಯ್ಕೆಯಾಗಿರುವ ಪೆನ್ನ ಒಬಳಯ್ಯ ಅವರ ಪರವಾಗಿ ಪುತ್ರಿ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿಯು ₹5 ಲಕ್ಷ ನಗದು, 25 ಗ್ರಾಂ ಚಿನ್ನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಇಲಾಖೆ ಕಾರ್ಯದರ್ಶಿ ಟಿಎಚ್ಎಂ ಕುಮಾರ್, ನಿರ್ದೇಶಕಿ ಗಾಯತ್ರಿ, ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ ಇದ್ದರು.

ವಿಶ್ವ ಮಾನವರಾಗೋಣ: ಪ್ರಕಾಶ್ ರಾಜ್

‘ದೇಶದಲ್ಲಿ ನಡೆಯುತ್ತಿರುವ ವಿದ್ರೋಹ ಕೃತ್ಯ ತಡೆಗೆ ಈ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತಿದೆ. ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾವೆಲ್ಲರೂ ವಿಶ್ವ ಮಾನವರಾಗಬೇಕು’ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಅವರು, ‘ರಾಜ್ಯೋತ್ಸವ ಅಂದರೆ ಭಾಷಾಭಿಮಾನ ಅಲ್ಲ. ಭಾಷೆಯ ಗರ್ಭ, ಭಾವವೆಂದರೆ ಬಸವಣ್ಣ. ಕನ್ನಡದ ಭಾಷೆಯ ಭಾವ ಸರ್ವ ಜನಾಂಗದ ಶಾಂತಿಯ ತೋಟ. ಇದು ಕುವೆಂಪು ಅವರ ಸಂದೇಶ. ಎಲ್ಲ ಧರ್ಮದರನ್ನು ಅಪ್ಪಿಕೊಂಡು ಬದುಕು ನಡೆಸುವುದೇ ರಾಜ್ಯೋತ್ಸವ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.