ಬೆಂಗಳೂರು: ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಕಾಳಿಂಗ ಸರ್ಪಗಳನ್ನು ಅಕ್ರಮವಾಗಿ ಬಂಧಿಸಿಟ್ಟು, ಫೋಟೋ ಶೂಟ್ ಮಾಡಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿರುವ ಅಂತರರಾಜ್ಯ ಜಾಲ ಪತ್ತೆಯಾಗಿದೆ. ನೆರೆಯ ಮಹಾರಾಷ್ಟ್ರದ ಸ್ವಯಂ ಸೇವಾ ಸಂಸ್ಥೆ ಕೊಡಗಿನ ಸಂಸ್ಥೆಗಳ ಜತೆಯಲ್ಲಿ ನಂಟು ಬೆಳೆಸಿ ಈ ಚಟುವಟಿಕೆ ನಡೆಸುತ್ತಿದ್ದುದನ್ನು ಅರಣ್ಯ ಇಲಾಖೆಯ ಜಾಗೃತ ದಳ ಬಯಲು ಮಾಡಿದೆ.

ಅರಣ್ಯ ಇಲಾಖೆಯ ಜಾಗೃತದಳದ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಮಡಿಕೇರಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿದೆ.

ಮಹಾರಾಷ್ಟ್ರದ ಸ್ವಯಂ ಸೇವಾ ಸಂಘಟನೆಯ ಇಬ್ಬರು ಹಾಗೂ ಕೊಡಗಿನ ಇಬ್ಬರು ಉರಗ ರಕ್ಷಕರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 35ರ ಅಡಿ ಪ್ರಕರಣ ದಾಖಲಿಸಿ, ತನಿಖೆ ಚುರುಕುಗೊಳಿಸಲಾಗಿದೆ.

ಪ್ರಕರಣದ ಕುರಿತು ಪೊನ್ನಂಪೇಟೆ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯವು ಸೆಪ್ಟಂಬರ್ 30ರ ಒಳಗೆ ವಿಸ್ತೃತ ತನಿಖಾ ವರದಿಯನ್ನು ಸಲ್ಲಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ.

‘ಕೊಡಗಿನ ಪೊನ್ನಂಪೇಟೆ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಕಾಳಿಂಗ ಸರ್ಪಗಳನ್ನು ಸೆರೆ ಹಿಡಿದು ಅಮಾನವೀಯ ರೀತಿಯಲ್ಲಿ ಫೋಟೋಶೂಟ್ ಮತ್ತು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ದೂರು ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ’ ಎಂದು ಅರಣ್ಯ ಜಾಗೃತದಳದ ಮುಖ್ಯಸ್ಥರಾದ ಶಾಶ್ವತಿ ಮಿಶ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ನಾಟಕದಲ್ಲಿ ನೋಂದಣಿಯಾಗದ, ಮಹಾರಾಷ್ಟ್ರದ ಎನ್.ಎಸ್.ಎಫ್ ಎಂಬ ಸಂಸ್ಥೆಯು ಕೊಡಗಿನಲ್ಲಿ ಉರಗ ರಕ್ಷಣೆ ಹೆಸರಿನ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರ ಸಂಪರ್ಕಿಸಿ, ಕಾಳಿಂಗ ಸರ್ಪಗಳ ಫೋಟೋ ಶೂಟ್ ಹಾಗೂ ವಿಡಿಯೊ ಚಿತ್ರೀಕರಣವನ್ನು ಮೂರು ವರ್ಷದಿಂದ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.

ಫೋಟೋ ಹಾಗೂ ವಿಡಿಯೊ ದುರುಪಯೋಗ, ಕಾಳಿಂಗ ಸರ್ಪ ಚರ್ಮದ ವಹಿವಾಟು ಮಾಡಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಸಿಲುಕಿರುವ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದು, ಒಬ್ಬರು ತಲೆ ಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾಗೃತದಳ ದಾಳಿ ಮಾಡುತ್ತಿದಂತೆ ಮೊಬೈಲ್ಗಳಲ್ಲಿ ಸಂಗ್ರಹಿಸಿದ್ದ ಕಾಳಿಂಗ ಸರ್ಪದ ಫೋಟೋ ಹಾಗೂ ವಿಡಿಯೊವನ್ನು ತೆಗೆದು ಹಾಕಿ ಸಾಕ್ಷ್ಯ ನಾಶ ಮಾಡಲಾಗಿದೆ. ಅದನ್ನು ವಾಪಸ್ ಪಡೆದುಕೊಳ್ಳಲು ತಂತ್ರಜ್ಞರ ಮೊರೆ ಹೋಗಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಉರಗ ರಕ್ಷಣೆ ನೆಪದಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಒಂದು ಕಡೆ ಇಟ್ಟುಕೊಂಡು ಮಹಾರಾಷ್ಟ್ರದವರನ್ನು ಆಹ್ವಾನಿಸಲಾಗುತ್ತಿತ್ತು. ಅಲ್ಲಿಂದ ಬಂದವರು ಗಂಟೆಗಟ್ಟಲೇ ವಿಡಿಯೊ ಶೂಟ್ ಮಾಡುತ್ತಿದ್ದರು. ಇದಕ್ಕೆ ಇಂತಿಷ್ಟು ಎಂದು ಹಣ ಪಡೆಯಲಾಗುತ್ತಿತ್ತು. ಸಂಸ್ಥೆಯವರು ಇದನ್ನು ಬೇರೆಯವರಿಗೆ ಮಾರಾಟ ಮಾಡಿರುವ ಮಾಹಿತಿಯಿದ್ದು ಎಲ್ಲಾ ಆಯಾಮದಲ್ಲೂ ತನಿಖೆ ನಡೆದಿದೆ ಎಂದು ಹೇಳಿವೆ.

ಮಹಾರಾಷ್ಟ್ರದವರು ಕೊಡಗಿಗೆ ಬಂದಾಗ, ಅವರಿಗೆ ನೆರವಾಗುತ್ತಿದ್ದ ಆಟೋರಿಕ್ಷಾ ಚಾಲಕರನ್ನು ವಿಮಾನದಲ್ಲಿ ಮುಂಬೈಗೆ ಕರೆದೊಯ್ದಿರುವುದು ತನಿಖೆ ವೇಳೆ ಗೊತ್ತಾಗಿದೆ.

ಉರಗ ರಕ್ಷಕರಿಗೆ ಸೂಚನೆ

‘ಹಾವುಗಳನ್ನು ಅನಧಿಕೃತವಾಗಿ ಸೆರೆ ಹಿಡಿಯುವುದು ಇರಿಸಿಕೊಳ್ಳುವುದು ಪ್ರದರ್ಶನದ ವಸ್ತುವಾಗಿ ಬಳಸಿಕೊಳ್ಳುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಗಂಭೀರ ಅಪರಾಧ. ಇದಕ್ಕೆ 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಆಗಬಹುದು’ ಎಂದು ಜಾಗೃತ ದಳದ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಕೆ.ವಿ.ಗಾನಶ್ರೀ ಹೇಳಿದರು. ‘ಜನವಸತಿ ಪ್ರದೇಶದಲ್ಲಿ ಯಾವುದೇ ಜಾತಿಯ ಹಾವುಗಳು ಕಂಡುಬಂದಾಗ ಜೀವಹಾನಿ ತಪ್ಪಿಸಲು ಹಾವುಗಳನ್ನು ರಕ್ಷಿಸಿ ಸೂಕ್ತ ಜಾಗದಲ್ಲಿ ಬಿಡಲು ಅರಣ್ಯ ಇಲಾಖೆ ಅನುಮತಿ ಬೇಡ. ಆದರೆ ಉರಗ ರಕ್ಷಕರು ಹಾವನ್ನು ಸೆರೆಹಿಡಿಯುವ ಮತ್ತು ಬಿಟ್ಟಿರುವ ಕುರಿತು 24 ಗಂಟೆ ಒಳಗೆ ಸ್ಥಳೀಯ ಅರಣ್ಯ ಕಚೇರಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಕೊಡಗಿನ ಇಬ್ಬರು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಸಂಬಂಧಿಕರು ಎನ್ನುವ ಮಾಹಿತಿ ಇದೆ. ಈ ಕುರಿತು ತನಿಖೆ ನಡೆಸಲಾಗುವುದು.
-ಶಾಶ್ವತಿ ಮಿಶ್ರ, ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಾಗೃತದಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.