ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಜನಸಂದಣಿ ನಿಯಂತ್ರಿಸಲು ಸಹಾಯಕವಾಗಿರುವ ಮೆಟ್ರೊ ಸೇವೆ, ಸದ್ಯ ಮಹಾನಗರಗಳ ಜನರ ಜೀವನಾಡಿಯಾಗಿದೆ. ವಿಶಾಲವಾದ ಬೆಂಗಳೂರಿನ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕಿಸುವ ಜಾಲವಾಗಿದೆ. ಈಗಾಗಾಲೇ ನಮ್ಮ ಮೆಟ್ರೊದಲ್ಲಿ ಹಸಿರು, ಹಳದಿ ಹಾಗೂ ನೇರಳೆ ಮಾರ್ಗದಲ್ಲಿ ರೈಲು ಸಂಚಾರವಿದೆ. ಗುಲಾಬಿ ಹಾಗೂ ನೀಲಿ ಮಾರ್ಗಗಳು ಕಾಮಗಾರಿ ಹಂತದಲ್ಲಿವೆ.

ಪ್ರತಿದಿನ ಮೆಟ್ರೊ ಸೇವೆ ಮೂಲಕ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಆದರೆ, ನಮ್ಮ ಮೆಟ್ರೊ ಸೇವೆ ಕೇವಲ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾರಿಯಾಗಿರದೆ, ಆತ್ಮಹತ್ಯೆ ಮಾಡಿಕೊಳ್ಳುವವರ ನೆಚ್ಚಿನ ತಾಣವಾಗಿಯೂ ರೂಪುಗೊಳ್ಳುತ್ತಿರುವುದು ಕಳವಳಕಾರಿ.
.Bengaluru | ನಮ್ಮ ಮೆಟ್ರೊ ನೀಲಿ ಮಾರ್ಗ: ಮುಗಿಯದ ಕಾಮಗಾರಿ: ತಪ್ಪದ ಕಿರಿಕಿರಿ.ನಮ್ಮ ಮೆಟ್ರೊ: ಪಿಂಕ್ ರೈಲಿನ ಮಾದರಿ ಅನಾವರಣ; ಚಿತ್ರಗಳು ಇಲ್ಲಿವೆ.
ನಮ್ಮ ಮೆಟ್ರೊದ ಆರಂಭದ ದಿನಗಳಲ್ಲಿ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಕೋವಿಡ್ ಬಳಿಕ ಮೆಟ್ರೊ ರೈಲಿಗೆ ಹಾರಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.

ಸದ್ಯ ನಮ್ಮ ಮೆಟ್ರೊದ ಕೆಲ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್ಡಿ) ಅಥವಾ ಪ್ಲಾಟ್ಫಾರ್ಮ್ ಸ್ಕ್ರೀನ್ ಗೇಟ್ (ಪಿಎಸ್ಜಿ) ಅಳವಡಿಸಲಾಗಿದೆ. ಆದರೆ ಎಲ್ಲಾ ನಿಲ್ದಾಣಗಳಲ್ಲಿ ಇವುಗಳ ಅಳವಡಿಕೆಯಾಗಿಲ್ಲದಿರುವುದು ಆತ್ಮಹತ್ಯೆಗೆ ಯತ್ನಿಸಲು ಕಾರಣಗಳಲ್ಲಿ ಒಂದಾಗಿದೆ.

ಹಾಗಾದರೆ 2024– 2025ರಲ್ಲಿ ನಮ್ಮ ಮೆಟ್ರೊ ಹಳಿಗೆ ಹಾರಿದವರೆಷ್ಟು, ಅದರಲ್ಲಿ ಮೃತಪಟ್ಟವರೆಷ್ಟು ಎಂಬುದನ್ನು ತಿಳಿಯೋಣ.

ಈ ಎರಡು ವರ್ಷದಲ್ಲಿ ಕೆಲವರು ಆಯತಪ್ಪಿ ಹಳಿಗಳ ಮೇಲೆ ಬಿದ್ದರೆ, ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಹಳಿಗೆ ಹಾರಿದ್ದಾರೆ. ಒಟ್ಟಾರೆ 15 ಮಂದಿ ಹಳಿಯ ಮೇಲೆ ಬಿದ್ದ ಪ್ರಕರಣಗಳು ವರದಿಯಾಗಿವೆ. ಆ ಪೈಕಿ 4 ಮಂದಿ ಆಯತಪ್ಪಿ ಬಿದ್ದವರಾಗಿದ್ದಾರೆ. 3 ಮಂದಿ ಮೃತಪಟ್ಟಿದ್ದಾರೆ.

ಯಾವ ನಿಲ್ದಾಣಗಳಲ್ಲಿ ಘಟನೆಗಳು ಸಂಭವಿಸಿವೆ ಎಂಬ ಪಟ್ಟಿ ಇಲ್ಲಿದೆ.
.Bengaluru Metro: ಉಬರ್ನಲ್ಲಿ ‘ನಮ್ಮ ಮೆಟ್ರೊ’ ಟಿಕೆಟ್.
2024ರಲ್ಲಿ ದಾಖಲಾದ ಪ್ರಕರಣಗಳು:

ಜನವರಿ: ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಹಳಿಯ ಮೇಲೆ ನಿಂತಿದ್ದ ಮಹಿಳೆಯ ಮೊಬೈಲ್ ಜಾರಿ ಹಳಿ ಬಿದ್ದಾಗ ಅದನ್ನು ತೆಗೆದುಕೊಳ್ಳಲು ಮಹಿಳೆ ಹಳಿಗೆ ಹಾರಿದ್ದರು. ಇದೇ ತಿಂಗಳು ನಡೆದ ಇನ್ನೊಂದು ಪ್ರಕರಣದಲ್ಲಿ ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕೇರಳದ ಯುವಕ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದನು.

ಮಾರ್ಚ್: ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ಕಾನೂನು ವಿದ್ಯಾರ್ಥಿ ಹಳಿಗೆ ಹಾರಿ ಜೀವ ಕಳೆದುಕೊಂಡಿದ್ದರು. ಇದೇ ತಿಂಗಳು ಜ್ಞಾನಭಾರತಿ ಹಾಗೂ ಪಟ್ಟಣಗೆರೆ ನಿಲ್ದಾಣದ ನಡುವೆ ಯುವಕನೊಬ್ಬ ಹಳಿ ಮೇಲೆ ಓಡಾಡಿದ್ದರು.

ಜೂನ್: ಹೊಸಹಳ್ಳಿ ನಿಲ್ದಾಣದಲ್ಲಿ ಯುವಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದ.

ಆಗಸ್ಟ್: ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಆಯತಪ್ಪಿ ಹಳಿಗೆ ಬಿದ್ದಿದ್ದ 4 ವರ್ಷದ ಬಾಲಕನನ್ನು ರಕ್ಷಿಸಲಾಗಿತ್ತು. ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ 57 ವರ್ಷದ ವ್ಯಕ್ತಿ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೆಜೆಸ್ಟಿಕ್ನಲ್ಲಿಯೂ ಅಂಧ ಪ್ರಯಾಣಿಕರೊಬ್ಬರು ಆಯ ತಪ್ಪಿ ಹಳಿಗೆ ಬಿದ್ದಿದ್ದರು.

ಸೆಪ್ಟೆಂಬರ್: ಬಿಹಾರದ ಯುವಕನೊಬ್ಬ ಜ್ಞಾನಭಾರತಿ ಮೆಟ್ರೊ ನಿಲ್ದಾಣದಲ್ಲಿ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.

2025ರಲ್ಲಿ ದಾಖಲಾದ ಪ್ರಕರಣಗಳು:

ಜನವರಿ: ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಿವೃತ ಸೇನಾಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು.

ಆಗಸ್ಟ್: ಮೆಜೆಸ್ಟಿಕ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಹಳಿಗೆ ಬಿದ್ದಿದ್ದರು. ಹಾಗೂ ರಾಗಿಗುಡ್ಡ ಮೆಟ್ರೊ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಆಕಸ್ಮಿಕವಾಗಿ ಹಳಿಗೆ ಬಿದ್ದಿದ್ದರು.

ಸೆಪ್ಟೆಂಬರ್: ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಡಿಸೆಂಬರ್: ಇದೇ ತಿಂಗಳಿನಲ್ಲಿ ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ವಿಜಯಪುರದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.