ಬೆಂಗಳೂರು: ಅಂತರ ಕಾಯ್ದುಕೊಳ್ಳದಿರುವುದು ಹಾಗೂ ಮಾಸ್ಕ್ ಧರಿಸದವರ ವಿರುದ್ಧಏ.1ರಿಂದ ಮೇ 4ರವರೆಗೆ ನಗರ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಒಟ್ಟು ₹2.85 ಕೋಟಿ ದಂಡ ಸಂಗ್ರಹವಾಗಿದೆ.

ಈ ಅವಧಿಯಲ್ಲಿ ಮಾಸ್ಕ್ ಧರಿಸದವರ ವಿರುದ್ಧ ಒಟ್ಟು 1,07,272 ಪ್ರಕರಣಗಳು ಹಾಗೂ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘಿಸಿದವರ ವಿರುದ್ಧ 11,107 ಪ್ರಕರಣ ಸೇರಿದಂತೆ ಒಟ್ಟು 1,18,379 ಪ್ರಕರಣಗಳು ದಾಖಲಾಗಿವೆ.

ಮಾಸ್ಕ್ ಧರಿಸದವರಿಂದ ₹2,59,50,013 ಹಾಗೂ ಅಂತರ ಕಾಯ್ದುಕೊಳ್ಳದವರಿಂದ ₹25,75,283 ಸೇರಿದಂತೆ ಒಟ್ಟು ₹2,85,25,297 ದಂಡ ಸಂಗ್ರಹಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

577 ವಾಹನ ಜಪ್ತಿ: ಕೊರೊನಾ ಕರ್ಫ್ಯೂ ವೇಳೆ ಅನಗತ್ಯವಾಗಿ ಸಂಚರಿಸುತ್ತಿದ್ದ 577 ವಾಹನಗಳನ್ನು ಪೊಲೀಸರು ಬುಧವಾರ ಜಪ್ತಿ ಮಾಡಿದ್ದಾರೆ. 546 ದ್ವಿಚಕ್ರ ವಾಹನ, 16 ತ್ರಿಚಕ್ರ ವಾಹನ, 15 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎನ್‌ಡಿಎಂಎ ಕಾಯ್ದೆಯಡಿ ಏಳು ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.