ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಾಧಕರು 2023 | ಸಾಕುಪ್ರಾಣಿಗಳ ನಿಗಾಕ್ಕೆ ‘ಸ್ಮಾರ್ಟ್ ಬೆಲ್ಟ್’

Last Updated 1 ಜನವರಿ 2023, 4:28 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು: ಬಿ.ಎನ್. ವಿಸ್ಮಯಾ, ಪಲ್ಲವಿ ಗೋಪಿನಾಥ್ ಹಾಗೂ ಪ್ರಾರ್ಥನಾ ಭಟ್

ವೃತ್ತಿ: ವಿದ್ಯಾರ್ಥಿಗಳು

ಸಾಧನೆ: ಫಾಂಡ್ ಹೆಸರಿನಲ್ಲಿ ನವೋದ್ಯಮ ಸ್ಥಾಪನೆ

ಸಾಕುಪ್ರಾಣಿಗಳ ಆರೋಗ್ಯ ಹಾಗೂ ಚಲನವಲನದ ಮೇಲೆ ನಿಗಾ ಇಡಲು ಪಿಇಎಸ್ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿನಿಯರು ಸ್ಮಾರ್ಟ್ ಬೆಲ್ಟ್ ಅಭಿವೃದ್ಧಿಪಡಿಸಿದ್ದಾರೆ.

ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಬಿ.ಎನ್. ವಿಸ್ಮಯಾ, ಪಲ್ಲವಿ ಗೋಪಿನಾಥ್ ಹಾಗೂ ಪ್ರಾರ್ಥನಾ ಭಟ್ ಅವರು ‘ಫಾಂಡ್ ಫ್ಲೂಪಿಟ್ ಸ್ಮಾರ್ಟ್ ಬೆಲ್ಟ್’ ನಿರ್ಮಾಣದ ರೂವಾರಿಗಳು. ಇವರು ‘ಫಾಂಡ್’ ಹೆಸರಿನಲ್ಲಿ ನವೋದ್ಯಮ ಸ್ಥಾಪಿಸಿದ್ದು, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸುರೇಶ್ ಎನ್. ಅವರ ಮಾರ್ಗದರ್ಶನದಲ್ಲಿ ತಮ್ಮ ಯೋಜನೆಯನ್ನು ಕಾರ್ಯಗತ ಮಾಡಿದ್ದಾರೆ.

ಈ ಬೆಲ್ಟ್ ಸ್ಮಾರ್ಟ್ ಬ್ಯಾಂಡ್ ಮಾದರಿ ಕಾರ್ಯನಿರ್ವಹಿಸಲಿದೆ. ನಾಯಿ, ಬೆಕ್ಕು ಸೇರಿದಂತೆ ವಿವಿಧ ಸಾಕು ಪ್ರಾಣಿಗಳಿಗೆ ಈ ಬೆಲ್ಟ್ ಅಳವಡಿಸಬಹುದಾಗಿದೆ. ಬೆಲ್ಟ್‌ನಲ್ಲಿ ಅಳವಡಿಸಿರುವ ಸ್ಮಾರ್ಟ್ ಸಾಧನಕ್ಕೆ ಮೊಬೈಲ್ ಆ್ಯಪ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ.

ಬೆಲ್ಟ್‌ನಲ್ಲಿರುವ ಸಾಧನಕ್ಕೆ ಒಮ್ಮೆ ಚಾರ್ಜ್ ಮಾಡಿದರೆ 57 ಗಂಟೆಗಳು ಕಾರ್ಯನಿರ್ವಹಿಸಲಿದೆ. ಬೆಲ್ಟ್ ಹೊಂದಿದ ಪ್ರಾಣಿಯ ದೇಹದ ತಾಪಮಾನ, ಸೇವಿಸಿದ ಆಹಾರದ ಪ್ರಮಾಣ ಸೇರಿದಂತೆ ವಿವಿಧ ಮಾಹಿತಿಗಳು ಆ್ಯಪ್‌ ಮೂಲಕ ಲಭ್ಯವಾಗಲಿವೆ. ಆಹಾರ ಒದಗಿಸುವ ಸಮಯ ಬಂದಾಗ ಮೊಬೈಲ್‌ಗೆ ಎಚ್ಚರಿಕೆಯ ಸಂದೇಶ ಬರಲಿದೆ. ಸಾಕು ಪ್ರಾಣಿಗಳ ಆರೋಗ್ಯ ವೃದ್ಧಿಗೆ ಈ ಬೆಲ್ಟ್ ಸಹಕಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT