ಬೆಂಗಳೂರು: ಆರ್ಎಸ್ಎಸ್ ರಾಷ್ಟ್ರಧ್ವಜಕ್ಕೆ ಅಗೌರವ ತೋರಿ 100 ವರ್ಷಗಳಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಇಂದು (ಸೋಮವಾರ) ದಾಖಲೆ ಸಮೇತ ಆರೋಪ ಮಾಡಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್, '1948ರ ಫೆಬ್ರುವರಿ 24ರಂದು ಆರ್ಎಸ್ಎಸ್ ರಾಷ್ಟ್ರಧ್ವಜಕ್ಕೆ ಹೇಗೆ ಅವಮಾನಿಸಿತ್ತು ಎಂಬುದನ್ನು ತೋರಿಸುವ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಪಂಜಾಬ್ನ ಕಾರ್ಯದರ್ಶಿಗೆ ಬರೆದ ಪತ್ರ ಇಲ್ಲಿದೆ' ಎಂದು ದಾಖಲೆ ಹಂಚಿಕೊಂಡಿದ್ದಾರೆ.

'ಆರ್ಎಸ್ಎಸ್ ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿ 100 ವರ್ಷ, ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದು 100 ವರ್ಷ, ಭಾರತದ ಸಂವಿಧಾನವನ್ನು ವಿರೋಧಿಸಿ 100 ವರ್ಷ, ದೇಶ ವಿರೋಧಿತ್ವಕ್ಕೆ 100 ವರ್ಷಗಳು' ಎಂದು ಅವರು ಟೀಕಿಸಿದ್ದಾರೆ.

'ಇತಿಹಾಸವು ಆರ್ಎಸ್ಎಸ್ ದೇಶಕ್ಕೆ ಬಗೆದ ದ್ರೋಹದ ಉದಾಹರಣೆಗಳಿಂದ ತುಂಬಿಕೊಂಡಿದೆ. ಇಡೀ ಬಿಜೆಪಿ ವ್ಯವಸ್ಥೆ ಎಷ್ಟೇ ಪ್ರಯತ್ನಿಸಿದ್ದರೂ ಆರ್ಎಸ್ಎಸ್ನ ಸಂವಿಧಾನ ವಿರೋಧಿ ಚರಿತ್ರೆಯನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ಹಾಗೂ ಸ್ವಯಂಸೇವಕರು ನಿಜವಾದ ಆರ್ಎಸ್ಎಸ್ ಇತಿಹಾಸವನ್ನು ತಿಳಿದುಕೊಳ್ಳುವ ಸಮಯ ಇದು' ಎಂದು ಹೇಳಿದ್ದಾರೆ.
.ಸರ್ಕಾರದವರೇನು ಆಳು ಮಕ್ಕಳಾ?: RSS ಪಥಸಂಚಲನ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆ.ತಾಕತ್ತಿದ್ದರೆ RSS ನಿಷೇಧ ಮಾಡಿ ನೋಡೋಣ: ಅಶೋಕ ಸವಾಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.