ಹುಬ್ಬಳ್ಳಿ: ಜೆಡಿಎಸ್ ನಾಯಕಎಚ್.ಡಿ.ಕುಮಾರಸ್ವಾಮಿ ಅವರನ್ನು ಜಾಗ ನೀಡಿ ಸಾಕಿದ್ದೇನೆ ಎಂದುಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ತಿರುಗೇಟು ಹೇಳಿದ್ದಾರೆ.‘ಜಮೀರ್ ಅಹ್ಮದ್ ಬಸ್ ಚಾಲಕನಾಗಿದ್ದ’ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.

‘ಹೌದು, ನಾನು ಬಸ್ ಚಾಲಕನಾಗಿ, ಮಾಲೀಕನೂ ಆಗಿದ್ದೆ. ಆದರೆ, ಅವರ ಹಾಗೆ ಕಸ ಹೊಡೆಯುತ್ತಿರಲಿಲ್ಲ. ಆಗ ಕುಮಾರಸ್ವಾಮಿ ಟ್ರಾನ್ಸ್‌ಪೋರ್ಟ್ ಲೆಕ್ಕ ನೀಡಲು ನಮ್ಮ ಕಚೇರಿಗೆ ಅಲೆದಾಡುತ್ತಿದ್ದರು. ಅವರಿಗೆ ಕುಳಿತುಕೊಳ್ಳಲು ಜಾಗವಿಲ್ಲದ ಸಂದರ್ಭದಲ್ಲಿ ಜಾಗ ನೀಡಿ ನಾನು ಸಾಕಿದ್ದೇನೆ. ನನ್ನಿಂದಲೇ ಅನುಕೂಲ ಪಡೆದು, ಈಗ ದೊಡ್ಡವರಾಗಿದ್ದಾರೆ. ನಿಮ್ಮನ್ನು ಆನೆ ಮಾಡಿದ್ದು ಯಾರು’ ಎಂದು ಜಮೀರ್ ಪ್ರಶ್ನಿಸಿದ್ದಾರೆ.

ಓದಿ:ಎಚ್.ಡಿ. ಕುಮಾರಸ್ವಾಮಿಯದ್ದು ಸೂಟ್ಕೇಸ್ ರಾಜಕಾರಣ: ಜಮೀರ್ ಅಹ್ಮದ್ ಆರೋಪ

ಮುಖ್ಯಮಂತ್ರಿಯಾಗಿದ್ದವರು ಕೀಳಾಗಿ ಮಾತನಾಡಬಾರದು. ನನ್ನ ಪಾಡಿಗೆ ನಾನು ಇದ್ದೇನೆ. ನಿಮ್ಮ ಪಾಡಿಗೆ ನೀವು ಇರಿ. ನನ್ನ ಕೆಣಕಿದರೆ ಸುಮ್ಮನಿರುವುದಿಲ್ಲ ಎಂದು ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.