ಬೆಂಗಳೂರು: ರಾಜ್ಯವೂ ಸೇರಿ ದೇಶದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದಲ್ಲಿ ಶೋಧ ನಡೆಸಿದ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು, ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿ ಸೇರಿ ಮೂವರನ್ನು ಬಂಧಿಸಿದ್ದಾರೆ.

ಮನೋವೈದ್ಯ ನಾಗರಾಜ್, ಎಎಸ್ಐ ಚಾಂದ್ ಪಾಷಾ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹಮ್ಮದ್ ತಾಯಿ ಅನೀಸ್ ಫಾತೀಮಾ ಬಂಧಿತರು.

ರಾಜ್ಯದ ಬೆಂಗಳೂರು, ಕೋಲಾರ ಸೇರಿ ಐದು ಸ್ಥಳಗಳಲ್ಲಿನ ಆರೋಪಿಗಳ ನಿವಾಸಿಗಳಲ್ಲಿ ಎನ್ಐಎ ತನಿಖಾಧಿಕಾರಿಗಳು ಶೋಧ ನಡೆಸಿದಾಗ ಪತ್ತೆಯಾದ ಡಿಜಿಟಲ್ ಸಾಕ್ಷ್ಯಗಳು, ನಗದು, ಚಿನ್ನ ಸೇರಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ವೈದ್ಯ ನಾಗರಾಜ್ರ ಮನೆ, ಸಿಎಆರ್ ಉತ್ತರ ವಿಭಾಗದಲ್ಲಿರುವ ಚಾಂದ್ ಪಾಷಾ ಅವರ ಸಿಎಆರ್ ವಸತಿ ಗೃಹ ಹಾಗೂ ಕೋಲಾರ, ಆರ್.ಟಿ.ನಗರದಲ್ಲಿರುವ ಜುನೈದ್ ಅಹಮದ್ನ ಮನೆ, ವೈದ್ಯ ನಾಗರಾಜ್ಗೆ ಸಹಾಯಕಿಯಾಗಿದ್ದ ಪವಿತ್ರಾ ಮನೆಯಲ್ಲಿ ಎನ್ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ನಾಗರಾಜ್ ಅವರು ನಾಲ್ಕು ವರ್ಷದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಲಷ್ಕರ್ ಎ ತಯಬಾ ಸಂಘಟನೆಯ ದಕ್ಷಿಣ ಭಾರತದ ಮುಖ್ಯಸ್ಥ ಟಿ.ನಾಸೀರ್, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹಮದ್ ಹಾಗೂ ಇತರೆ ಕೈದಿಗಳಿಗೆ ಮೊಬೈಲ್ಗಳನ್ನು ಪೂರೈಸುತ್ತಿದ್ದರು. ಅವರಿಗೆ ಸಹಾಯಕಿ ಪವಿತ್ರಾ ಸಹಾಯ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು.

‘ಜುನೈದ್ ಅಹಮದ್ ತಾಯಿ ಅನೀಸ್ ಫಾತೀಮಾ, ಜೈಲಿನಲ್ಲಿರುವ ಟಿ.ನಾಸೀರ್ ಎಲ್ಇಟಿಗೆ ಸಂಘಟನೆ ಮಾಡಲು ನಿಧಿ ಸಂಗ್ರಹ ಹಾಗೂ ಇತರೆ ವಿಚಾರಗಳ ಬಗ್ಗೆ ನೀಡುತ್ತಿದ್ದ ಮಾಹಿತಿಯನ್ನು ವಿದೇಶದಲ್ಲಿರುವ ತನ್ನ ಮಗನಿಗೆ ಅನೀಸ್ ನೀಡುತ್ತಿದ್ದರು. ಆತ ಅಲ್ಲಿಂದಲೇ ವಿಧ್ವಂಸಕ ಕೃತ್ಯಗಳಿಗೆ ಸಂಚು ಹಾಗೂ ಸಂಘಟನೆಗಾಗಿ ನಿಧಿ ಸಂಗ್ರಹಿಸುವ ಕೆಲಸದಲ್ಲಿ ಭಾಗಿಯಾಗುತ್ತಿದ್ದ’ ಎಂದು ಎನ್ಐಎ ಮೂಲಗಳು ತಿಳಿಸಿವೆ.

‘ಎಎಸ್ಐ ಚಾಂದ್ ಪಾಷಾ ಅವರು 2022ರಿಂದ ಟಿ.ನಾಸೀರ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಆರೋಪಿಯನ್ನು ಬೆಂಗಳೂರು, ಕೇರಳ ಹಾಗೂ ಇತರೆ ರಾಜ್ಯಗಳ ಕೋರ್ಟ್ಗೆ ಕರೆದೊಯ್ಯುವ ಮಾಹಿತಿಯನ್ನು ಸಂಘಟನೆಯ ಕೆಲವು ವ್ಯಕ್ತಿಗಳು ಹಾಗೂ ಮುಂಗಡವಾಗಿ ಟಿ.ನಾಸೀರ್ಗೂ ನೀಡುತ್ತಿದ್ದರು. ಅದಕ್ಕಾಗಿ ಸಂಘಟನೆಯಿಂದ ಹಣ ಪಡೆಯುತ್ತಿದ್ದರು’ ಎಂದು ಎನ್ಐಎ ಮೂಲಗಳು ತಿಳಿಸಿವೆ.

ಶೋಧದಿಂದ ರಹಸ್ಯ ಬಯಲು

ಡಾ.ನಾಗರಾಜ್, ನಾಗರಾಜ್ಗೆ ಸಹಾಯ ನೀಡಿದ್ದ ಪವಿತ್ರಾ, ಎಎಸ್ಐ ಚಾಂದ್ ಪಾಷಾ ಮತ್ತು ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೇದ್ ಅಹಮದ್ನ ತಾಯಿ ಅನೀಸ್ ಫಾತಿಮಾ ಮನೆಯಲ್ಲಿ ಶೋಧ

ಡಿಜಿಟಲ್ ಉಪಕರಣಗಳು, ಪ್ರಚೋದನಕಾರಿ ಬರಹ ಇರುವ ಪುಸ್ತಕ ಮತ್ತು ಪತ್ರಗಳು, ಸಿ.ಡಿಗಳು ವಶ

ಭಯೋತ್ಪಾದನೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಲ್ಲಿರುವ ಟಿ.ನಾಸೀರ್ಗೆ ಮೊಬೈಲ್ ಒದಗಿಸಿದ್ದ ಆರೋಪಿಗಳು

ನಾಸೀರ್ನನ್ನು ಯಾವ–ಯಾವ ನ್ಯಾಯಾಲಯಕ್ಕೆ, ಯಾವ ಮಾರ್ಗದಲ್ಲಿ ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿ ರವಾನಿಸುತ್ತಿದ್ದ ಎಎಸ್ಐ

ಭಯೋತ್ಪಾದನಾ ಚಟುವಟಿಕೆಗಳಿಗೆ ಹಣವನ್ನು ಹೇಗೆ ಸಂಗ್ರಹಿಸಬೇಕು ಎಂದು ನಾಸೀರ್ ರೂಪಿಸಿದ ಸಂಚನ್ನು ಜುನೇದ್ಗೆ ತಲುಪಿಸುತ್ತಿದ್ದ ನಾಗರಾಜ್ ಮತ್ತುಪವಿತ್ರಾ

ತಲೆಮರೆಸಿಕೊಂಡಿರುವ ಜುನೈದ್ ಅಹಮದ್ ಸೇರಿ 9 ಮಂದಿ ಶಂಕಿತರ ವಿರುದ್ಧ ಎನ್ಐಎ ಅಧಿಕಾರಿಗಳು ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ

ಜೈಲಿನ ಒಳಗೇ ಉಗ್ರ ಚಟುವಟಿಕೆ ತರಬೇತಿ

ರಾಜಧಾನಿ ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯ ನಡೆಸಿ, ಭಾರಿ ಅನಾಹುತ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು 2023ರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಆರ್.ಟಿ.ನಗರ, ಸುಲ್ತಾನ್ಪಾಳ್ಯ, ಡಿ.ಜೆ.ಹಳ್ಳಿ,ಕೊಡಿಗೇಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಸ್, ಸೈಯದ್ ಮುದಾಸೀರ್ ಪಾಷಾ, ಮಹಮದ್ ಫೈಸಲ್, ಮಹಮದ್ ಉಮರ್ ಎಂಬ ಶಂಕಿತರನ್ನು ಬಂಧಿಸಿದ್ದರು. ಜೈಲಿನಲ್ಲಿದ್ದ ಐವರಿಗೆ ಟಿ. ನಾಸೀರ್ ಉಗ್ರ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುತ್ತಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.

ಆಗ ಶಂಕಿತರಿಂದ 7 ನಾಡ ಬಂದೂಕು, 45 ಗುಂಡುಗಳು, ಸ್ಯಾಟ್ಲೈಟ್ ಫೋನ್ ಮಾದರಿಯ ವಾಕಿಟಾಕಿಗಳು, 12 ಮೊಬೈಲ್, ಡ್ರಾಗರ್ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಪ್ರಕರಣದ ಸೂತ್ರಧಾರ ಜುನೈದ್ ಅಹಮದ್ ದುಬೈಗೆ ಪರಾರಿಯಾಗಿದ್ದಾನೆ.

ಕೆಲವು ದಿನಗಳ ಬಳಿಕ ಸೈಯದ್ ಕೊಡಿಗೇಹಳ್ಳಿ ಜಾಹೀದ್ ತಬ್ರೇಜ್ ಮನೆಯಲ್ಲಿ ನಾಲ್ಕು ಗ್ರೆನೇಡ್ ಪತ್ತೆ ಆಗಿದ್ದವು. ಈ ಸಂಬಂಧ ಎನ್ಐಎ ತನಿಖೆ ಆರಂಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.