ನವದೆಹಲಿ: ಪಾಕಿಸ್ತಾನದ ಪ್ರಮುಖ ನಗರ ಲಾಹೋರ್ನಲ್ಲಿ ಗುರುವಾರ (ಇಂದು) ಬೆಳಿಗ್ಗೆ ಭಾರಿ ಸ್ಫೋಟ ಸದ್ದು ಕೇಳಿಸಿದೆ ಎಂದು 'ಜಿಯೊ ಟಿವಿ' ಹಾಗೂ 'ರಾಯಿಟರ್ಸ್' ವರದಿ ಮಾಡಿವೆ.

ಸದ್ಯಕ್ಕೆ ಸ್ಫೋಟಕ್ಕೆ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದನಾ ನೆಲೆಗಳನ್ನು ಗರಿಯಾಗಿಸಿ ಬುಧವಾರ ಮುಂಜಾನೆ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ ಮರುದಿನವೇ ಈ ಸುದ್ದಿ ಪ್ರಕಟವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಉಗ್ರರು ಇತ್ತೀಚೆಗೆ ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ, ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಭಾರತದ ಕಾರ್ಯಾಚರಣೆ ಬೆನ್ನಲ್ಲೇ, ಪಾಕ್ ಸೇನೆ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಅಪ್ರಚೋದಿತ ದಾಳಿ ನಡೆಸುತ್ತಿದೆ. ಅದಕ್ಕೆ, ಭಾರತ ಸೇನೆ ತಕ್ಕ ಪ್ರತ್ಯುತ್ತರ ಮುಂದುವರಿಸಿದೆ.
.Operation Sindoor: ಇಂದು ಸರ್ವಪಕ್ಷ ಸಭೆ; ಮೋದಿ ಉಪಸ್ಥಿತಿಗೆ ಕಾಂಗ್ರೆಸ್ ಒತ್ತಾಯ.Operation Sindoor: ಉಗ್ರರ ನೆಲೆಗಳಿಗೆ ‘ಸಿಂಧೂರ’ ಪ್ರಹಾರ .Operation Sindoor: ಉಗ್ರರ ನೆಲೆ ‘ಸಿಂಧೂರ’ಕ್ಕೆ ತರಗೆಲೆ.Operation Sindoor ದಾಳಿಗೆ ಬಳಸಿದ ಅಸ್ತ್ರಗಳಿವು....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.