ಬೀಜಿಂಗ್: ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಅಮೆರಿಕಕ್ಕೆ ತೆರಳಿರುವ ಚೀನಾ ಉಪಾಧ್ಯಕ್ಷ ಹಾನ್ ಝೆಂಗ್, ಉದ್ಯಮಿ ಎಲಾನ್ ಮಸ್ಕ್ ಹಾಗೂ ಇತರೆ ಉದ್ಯಮಿಗಳನ್ನು ಭಾನುವಾರ ಭೇಟಿ ಮಾಡಿದ್ದಾರೆ.

ಈ ವೇಳೆ ಅವರು, ಚೀನಾದೊಂದಿಗೆ ಆರ್ಥಿಕ ಸಂಬಂಧ ಗಟ್ಟಿಗೊಳಿಸಲು ಇರುವ ಅವಕಾಶಗಳನ್ನು ಬಳಸಿಕೊಳ್ಳಲು ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಕ್ಸಿನುವಾ ವರದಿ ಮಾಡಿದೆ.
.ಹೆಸರು, ಚಿತ್ರ ಬದಲಾಯಿಸಿಕೊಂಡ ಉದ್ಯಮಿ ಎಲಾನ್ ಮಸ್ಕ್.
ಮಸ್ಕ್ ಹಾಗೂ ಇತರ ಉದ್ಯಮಪತಿಗಳೊಂದಿಗೆ ಮಾತುಕತೆ ನಡೆಸಿದ್ದು, ‘ಚೀನಾದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು, ಚೀನಾದ ಅಭಿವೃದ್ಧಿಯ ಫಲ ಅನುಭವಿಸಿ. ಇದು ಚೀನಾ – ಅಮೆರಿಕದ ಆರ್ಥಿಕ ಹಾಗೂ ವ್ಯಾಪಾರ ಸಂಬಂಧ ದೊಡ್ಡ ಕೊಡುಗೆ ನೀಡಲಿದೆ’ ಎಂದು ಝೆಂಗ್ ಹೇಳಿದ್ದಾರೆ.

‘ಚೀನಾದೊಂದಿಗೆ ಬಂಡವಾಳ ಸಹಕಾರ ಗಟ್ಟಿಗೊಳಿಸುವ ಇರಾದೆ ಇದೆ. ಉಭಯ ದೇಶಗಳ ನಡುವೆ ವ್ಯಾಪಾರ ಸಂಬಂಧ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸುವುದಾಗಿ’ ಮಸ್ಕ್ ಕೂಡ ಹೇಳಿದ್ದಾರೆ.
.AI ಲೋಪ ಕುರಿತು ಮಾತನಾಡುತ್ತಿದ್ದ ಭಾರತೀಯ ಟೆಕ್ಕಿ ಸಾವು ಆತ್ಮಹತ್ಯೆಯಲ್ಲ: ಮಸ್ಕ್.
ಚುನಾವಣೆ ಪ್ರಚಾರದ ವೇಳೆ ಚೀನಾ ಉತ್ಪನ್ನಗಳಿಗೆ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಟ್ರಂಪ್ ಮಾಡಿದ್ದರು. ಇದರ ಜೊತೆಗೆ ಚೀನಾದೊಂದಿಗೆ ಮಾತುಕತೆಗೂ ಸಿದ್ದ ಎಂದು ಹೇಳಿದ್ದರು. ಶುಕ್ರವಾರ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಷಿ ಜಿಂಪಿಂಗ್ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದರು.

ಎಲಾನ್ ಮಸ್ಕ್ ಅವರು ಟ್ರಂಪ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
.ಜರ್ಮನಿ ಚಾನ್ಸಲರ್ ಸ್ಕೋಲ್ಜ್ ‘ಅಸಮರ್ಥ ಮೂರ್ಖ’, ತಕ್ಷಣ ರಾಜೀನಾಮೆ ನೀಡಬೇಕು: ಮಸ್ಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.