ಭಾರತ–ಪಾಕಿಸ್ತಾನದ ಮಧ್ಯೆ ಕದನವಿರಾಮ ಘೋಷಣೆಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕೆಲವು ದಿನಗಳ ಹಿಂದೆ ನಾವು ತಿಳಿದುಕೊಂಡೆವು. ‘ವ್ಯಾಪರ ಒಪ್ಪಂದ ಮಾಡಿಕೊಳ್ಳಿ ಎನ್ನುವ ಆಮಿಷ ಮತ್ತು ನಿರ್ಬಂಧ ಎದುರಿಸಿ ಎನ್ನುವ ಬೆದರಿಕೆ ಒಡ್ಡಿ ಬಲವಂತವಾಗಿ ಮತ್ತು ಬ್ಲ್ಯಾಕ್‌ಮೇಲ್ ಮಾಡಿ ಕದನ ವಿರಾಮಕ್ಕೆ ಒಪ್ಪಿಸಿದ್ದೇನೆ’ ಎಂದು ಈಗ ಸೌದಿ ಅರೇಬಿಯಾದಲ್ಲಿ ಟ್ರಂಪ್ ಹೇಳಿದ್ದಾರೆ. ಯಾವಾಗಲೂ ಮಾತನಾಡುತ್ತಲೇ ಇರುವ ನಮ್ಮ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರು ಟ್ರಂಪ್ ಅವರ ಈ ಹೇಳಿಕೆ ಬಗ್ಗೆ ಏನು ಹೇಳುತ್ತಾರೆ? ಅಮೆರಿಕದ ಒತ್ತಡಕ್ಕೆ ಮಣಿದು ಇಬರಿಬ್ಬರು ಭಾರತದ ಭದ್ರತೆಯನ್ನು ಅಡವಿಟ್ಟರೇ? ಅಮೆರಿಕಿ ಪಾಪಾ (ಅಮೆರಿಕದ ಅಪ್ಪ) ಯುದ್ಧ ನಿಲ್ಲಿಸಿದರೇ?