ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತ ಭವನದಲ್ಲಿರುವಾಗಲೇ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು ಟ್ರಂಪ್: ಸಲಹೆಗಾರ

Last Updated 2 ಮಾರ್ಚ್ 2021, 2:55 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ಪತ್ನಿ ಮೆಲಾನಿಯಾ ಜನವರಿಯಲ್ಲಿಯೇ ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಲಸಿಕೆ ಹಾಕಿಸಿಕೊಂಡಿದ್ದರು ಎಂದು ಟ್ರಂಪ್‌ ಸಲಹಾಗಾರರೊಬ್ಬರು ಸೋಮವಾರ ಬಹಿರಂಗ ಪಡಿಸಿದ್ದಾರೆ.

'ಅಧ್ಯಕ್ಷ ಟ್ರಂಪ್‌ ಮತ್ತು ಪ್ರಥಮ ಮಹಿಳೆ (ಮೆಲಾನಿಯಾ) ಶ್ವೇತ ಭವನದಲ್ಲಿ ಜನವರಿಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದರು' ಎಂದು ಸಲಹಾಗಾರ ಹೇಳಿದ್ದಾರೆ.

ಜನವರಿ 20ರಂದು ಜೋ ಬೈಡನ್‌ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿದರು, ಅದಕ್ಕೂ ಮುನ್ನ ಡಿಸೆಂಬರ್‌ 21ರಂದು ಅವರು ಸಾರ್ವಜನಿಕವಾಗಿ ಕೋವಿಡ್‌–19 ಲಸಿಕೆ ಹಾಕಿಸಿಕೊಂಡರು. ಆದರೆ, ಟ್ರಂಪ್‌ ಕೋವಿಡ್‌ ಲಸಿಕೆ ಹಾಕಿಸಿಕೊಂಡಿರುವ ವಿಷಯ ಈ ಹಿಂದೆ ಬಹಿರಂಗವಾಗಿರಲಿಲ್ಲ.

ಶ್ವೇತ ಭವನದಿಂದ ಹೊರನಡೆದ ಬಳಿಕ ಮೊದಲ ಭಾರಿಗೆ ಭಾನುವಾರ ಸಾರ್ವಜನಿಕವಾಗಿ ಕಾಣಿಸಿಕೊಂಡು ಮಾತನಾಡಿದ ಟ್ರಂಪ್‌, ಅಮೆರಿಕದಲ್ಲಿ 5,00,000ಕ್ಕೂ ಹೆಚ್ಚು ಜನರನ್ನು ಸಾವಿಗೆ ದೂಡಿರುವ ಕೋವಿಡ್‌–19 ವಿರುದ್ಧ ಹೋರಾಟಕ್ಕೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದ ಟ್ರಂಪ್‌, ಹಲವು ದಿನ ಆಸ್ಪತ್ರೆಗೆ ದಾಖಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT