ಟಿಯಾನ್ ಜಿನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಉಭಯ ರಾಷ್ಟ್ರಗಳ ನಡುವಣ ಗಡಿ ಬಿಕ್ಕಟ್ಟನ್ನು 'ನ್ಯಾಯಯುತ, ಸೂಕ್ತ ಹಾಗೂ ಪರಸ್ಪರ ಒಪ್ಪಿಗೆಯಾಗುವಂತೆ' ಬಗೆಹರಿಸಿಕೊಳ್ಳುವ ಹಾಗೂ ಜಾಗತಿಕ ವ್ಯಾಪಾರವನ್ನು ಸ್ಥಿರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಪ್ರತಿಜ್ಞೆ ಮಾಡಿದ್ದಾರೆ.

ಟಿಯಾನ್ ಜಿನ್ ನಗರದಲ್ಲಿ ಇಂದಿನಿಂದ (ಭಾನುವಾರದಿಂದ) ಆರಂಭವಾಗಿರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಶೃಂಗಸಭೆ ವೇಳೆ ಮಾತುಕತೆ ನಡೆಸಿರುವ ಮೋದಿ ಹಾಗು ಷಿ, ಎರಡೂ ರಾಷ್ಟ್ರಗಳು ಅಭಿವೃದ್ಧಿಯ ಪಾಲುದಾರರು ಮತ್ತು ಪ್ರತಿಸ್ಪರ್ಧಿಗಳಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ಭಾರತ, ಚೀನಾ ನಡುವಣ ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಬಾರದು ಎಂದು ಒತ್ತಿಹೇಳಿರುವ ಮೋದಿ ಹಾಗೂ ಷಿ, ಅಮೆರಿಕದ ಸುಂಕ ಸಂಘರ್ಷದಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗಿರುವ ತಲ್ಲಣದ ಕುರಿತೂ ಮಾತುಕತೆ ನಡೆಸಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳಲ್ಲಿ ಸಾಮಾನ್ಯ ನೆಲೆ ವಿಸ್ತರಿಸುವ ಅಗತ್ಯವಿದೆ ಎಂದು ಇಬ್ಬರೂ ಪ್ರತಿಪಾದಿಸಿದ್ದಾರೆ.

ಗಡಿಯಲ್ಲಿ ಶಾಂತಿ ಮತ್ತು ಪ್ರಶಾಂತತೆ ನೆಲೆಸುವುದು ದ್ವಿಪಕ್ಷೀಯ ಸಂಬಂಧದ ವೃದ್ಧಿಗೆ ಮಹತ್ವದ ಅಂಶವಾಗಿದೆ ಎಂಬುದನ್ನು ಮೋದಿ ಒತ್ತಿ ಹೇಳಿದ್ದಾರೆ.

ಪೂರ್ವ ಲಡಾಖ್ನಲ್ಲಿ ಗಡಿಯುದ್ದಕ್ಕೂ ಉಭಯ ದೇಶಗಳು ನಿಯೋಜಿಸಿದ್ದ ಸೇನೆಯನ್ನು ಕಳೆದ ವರ್ಷ ಹಿಂಪಡೆದ ಬಳಿಕ, ಗಡಿಯಲ್ಲಿ ಶಾಂತಿ ನೆಲೆಸಿರುವುದು ತೃಪ್ತಿದಾಯಕ ಬೆಳವಣಿಗೆ ಎಂಬದುನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.
.BRICS ಸದಸ್ಯ ರಾಷ್ಟ್ರಗಳ ಮೇಲಿನ ನಿರ್ಬಂಧಕ್ಕೆ ರಷ್ಯಾ, ಚೀನಾ ವಿರೋಧ: ಪುಟಿನ್.India–China: ಪೂರ್ವ ಲಡಾಖ್ನಲ್ಲಿ ಭಾರತ, ಚೀನಾ ಸೇನಾ ವಾಪಸಾತಿ ಪ್ರಕ್ರಿಯೆ ಪೂರ್ಣ.
ಎಸ್ಸಿಒಗೆ ಚೀನಾ ಅಧ್ಯಕ್ಷತೆ ಮತ್ತು ಟಿಯಾನ್ ಜಿನ್ ಶೃಂಗಸಭೆಯನ್ನು ಬೆಂಬಲಿಸುವುದಾಗಿ ಹೇಳಿರುವ ಮೋದಿ, 2026ರಲ್ಲಿ ಭಾರತದಲ್ಲಿ ಆಯೋಜನೆಗೊಳ್ಳಲಿರುವ ಬ್ರಿಕ್ಸ್ ಶೃಂಗಸಭೆಗೆ ಷಿ ಅವರನ್ನು ಆಹ್ವಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿಗೆ ಧನ್ಯವಾದ ಹೇಳಿರುವ ಷಿ, ಬ್ರಿಕ್ಸ್ಗೆ ಭಾರತದ ಅಧ್ಯಕ್ಷತೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.