ರಿಯಾದ್: ನಾಲ್ಕು ದಿನ ಮಧ್ಯ ಪ್ರಾಚ್ಯ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಸೌದಿ ಅರೇಬಿಯಾಕ್ಕೆ ಬಂದಿಳಿದರು. ಟ್ರಂಪ್ ಅವರಿಗೆ ವೈಭವೋಪೇತ ಸ್ವಾಗತ ಕೋರಲಾಯಿತು.

ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಟ್ರಂಪ್ ಅವರನ್ನು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಬರಮಾಡಿಕೊಂಡರು. ಸೌದಿ ಅರೇಬಿಯಾದ ವಾಯುಗಡಿ ಪ್ರವೇಶಿಸಿದ ಟ್ರಂಪ್ ಅವರ ಅಧಿಕೃತ ‘ಏರ್ ಫೋರ್ಸ್ ಒನ್’ ವಿಮಾನದ ಬೆಂಗಾವಲಿಗೆ ರಾಜಮನೆತನದವರು ಬಳಸುವ ಏರ್ ಫೋರ್ಸ್ ಎಫ್–15 ವಿಮಾನವನ್ನು ನಿಯೋಜಿಸಲಾಗಿತ್ತು.

ದೊಡ್ಡ ಪ್ರಮಾಣದ ಹಣಕಾಸಿನ ಒಪ್ಪಂದ ಮಾಡಿಕೊಳ್ಳುವುದು ಟ್ರಂಪ್ ಅವರ ಭೇಟಿಯ ಮುಖ್ಯ ಉದ್ದೇಶವಾಗಿದೆ. ಇರಾನ್ ನಡೆಸುತ್ತಿರುವ ಅಣ್ವಸ್ತ್ರ ಯೋಜನೆ ಮತ್ತು ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದ ವಿಚಾರಗಳೂ ಈ ಭೇಟಿಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿವೆ ಎನ್ನಲಾಗಿದೆ.

ದೊಡ್ಡ ಮಟ್ಟದಲ್ಲಿ ‘ಅಮೆರಿಕ–ಸೌದಿ ಹೂಡಿಕೆ ಸಮಾವೇಶ’ವನ್ನು ಆಯೋಜಿಸಲಾಗಿದೆ. ಟೆಸ್ಲಾ ಸಂಸ್ಥೆ ಸಿಇಒ ಇಲಾನ್ ಮಸ್ಕ್ ಸೇರಿದಂತೆ ಅಮೆರಿಕದ ದೊಡ್ಡ ದೊಡ್ಡ ಉದ್ಯಮಿಗಳನ್ನು ಟ್ರಂಪ್ ಅವರು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ. ಸಮಾವೇಶದಲ್ಲಿ ಟ್ರಂಪ್ ಅವರೂ ಭಾಗವಹಿಸಲಿದ್ದಾರೆ.

ಟ್ರಂಪ್ ಮಕ್ಕಳ ರಿಯಲ್ ಎಸ್ಟೇಟ್ ಯೋಜನೆ

ಎರಡನೇ ಬಾರಿಗೆ ಅಧ್ಯಕ್ಷರಾದ ಬಳಿಕ ಟ್ರಂಪ್ ಅವರು ಇದೇ ಮೊದಲ ಬಾರಿಗೆ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ನಾಲ್ಕು ದಿನಗಳ ತಮ್ಮ ಭೇಟಿಯಲ್ಲಿ ಟ್ರಂಪ್ ಅವರು ಸೌದಿ ಅರೇಬಿಯಾ ಕತಾರ್ ಮತ್ತು ಯುಎಇಗೆ ಭೇಟಿ ನೀಡಲಿದ್ದಾರೆ. ಜಿದ್ದಾದಲ್ಲಿ ಉದ್ದದ ಟವರ್ ನಿರ್ಮಾಣ ದುಬೈನಲ್ಲಿ ಐಷಾರಾಮಿ ಹೋಟೆಲ್ ಮತ್ತು ಕತಾರ್ನಲ್ಲಿ ಗಾಲ್ಫ್ ಸಂಕೀರ್ಣ ನಿರ್ಮಿಸುವ ಯೋಜನೆಯನ್ನು ‘ಟ್ರಂಪ್ ಸಂಸ್ಥೆ’ಯನ್ನು ಮುನ್ನಡೆಸುವ ಟ್ರಂಪ್ ಅವರ ಇಬ್ಬರು ಮಕ್ಕಳು ಹಾಕಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.