ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ: ರಷ್ಯಾ ರಾಯಭಾರಿಗೆ ಸಮನ್ಸ್

Published 21 ಜೂನ್ 2024, 14:09 IST
Last Updated 21 ಜೂನ್ 2024, 14:09 IST
ಅಕ್ಷರ ಗಾತ್ರ

ಸೋಲ್: ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದನ್ನು ಪ್ರತಿಭಟಿಸುವುದರ ಭಾಗವಾಗಿ, ದಕ್ಷಿಣ ಕೊರಿಯಾವು ಶುಕ್ರವಾರ ರಷ್ಯಾದ ರಾಯಭಾರಿಗೆ ಸಮನ್ಸ್‌ ನೀಡಿತು.

ಗಡಿಯಲ್ಲಿ ಉದ್ವಿಗ್ನತೆ, ಅನಿಶ್ಚಿತ ಬೆದರಿಕೆ ಹಾಗೂ ಉತ್ತರ ಕೊರಿಯಾದ ಸೇನಾ ಪಡೆಗಳಿಂದ ಆಗಾಗ್ಗೆ ನಡೆಯುತ್ತಿರುವ ಆಕ್ರಮಣಗಳು ಹೆಚ್ಚುತ್ತಿರುವುದರಿಂದ ದಕ್ಷಿಣ ಕೊರಿಯಾವು ಈ ಕ್ರಮ ಕೈಗೊಂಡಿದೆ.

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್‌ ಉನ್‌ ಅವರ ಕಾರ್ಯಕರ್ತರು ಗಡಿಯುದ್ದಕ್ಕೂ ಶುಕ್ರವಾರ ದಕ್ಷಿಣ ಕೊರಿಯಾ ವಿರೋಧಿಸಿ ಪ್ರಚಾರ ಕರಪತ್ರಗಳನ್ನೊಳಗೊಂಡ ಆಕಾಶಬುಟ್ಟಿಗಳನ್ನು ಹಾರಿಸಿದರು.

ಈ ತಿಂಗಳಲ್ಲಿ ಮೂರನೇ ಬಾರಿಗೆ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ ಉತ್ತರ ಕೊರಿಯಾದ ಸೈನಿಕರನ್ನು ಹಿಮ್ಮೆಟ್ಟಿಸಲು ಎಚ್ಚರಿಕೆಯ ದಾಳಿ ನಡೆಸಲಾಗಿದೆ ಎಂದು ದಕ್ಷಿಣ ಕೊರಿಯಾದ ಸೇನೆಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT