ಜಿನೀವಾ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪನೆಗಾಗಿ ಅಮೆರಿಕ ರೂಪಿಸಿರುವ ಯೋಜನೆ ಕುರಿತು ಭಾನುವಾರ ಇಲ್ಲಿ ಆರಂಭವಾಗಿರುವ ಸಭೆಯಲ್ಲಿ ಉಕ್ರೇನ್ ಹಾಗೂ ಅದರ ಮಿತ್ರ ರಾಷ್ಟ್ರಗಳು ಸಮಾಲೋಚನೆಗೆ ಚಾಲನೆ ನೀಡಿವೆ.

‘ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಮೊದಲ ಸಭೆ ನಡೆಸಲಾಯಿತು. ರಷ್ಯಾ ಜೊತೆಗಿನ ಶಾಂತಿ ಒಪ್ಪಂದವನ್ನು ಪರಿಷ್ಕರಿಸುವಂತೆ ಈ ಮಿತ್ರ ರಾಷ್ಟ್ರಗಳು ಉಕ್ರೇನ್ಗೆ ಸಲಹೆ ನೀಡಿದವು’ ಎಂದು ಉಕ್ರೇನ್ ನಿಯೋಗದ ಮುಖ್ಯಸ್ಥ ಆ್ಯಂಡ್ರಿ ಯೆರ್ಮಾಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

‘ಅಮೆರಿಕ ನಿಯೋಗದ ಜೊತೆ ಮುಂದಿನ ಸಭೆ ನಡೆಯಲಿದ್ದು, ಈ ಸಮಾಲೋಚನೆಯು ಸಾಕಷ್ಟು ರಚನಾತ್ಮಕವಾಗಿರಲಿದೆ ಎಂಬ ವಿಶ್ವಾಸ ಹೊಂದಿದ್ದೇವೆ. ಉಕ್ರೇನ್ನಲ್ಲಿ ಶಾಶ್ವತವಾಗಿ ಶಾಂತಿ ನೆಲಸುವಂತಾಗುವ ನಿಟ್ಟಿನಲ್ಲಿ ಎಲ್ಲ ಮಿತ್ರ ರಾಷ್ಟ್ರಗಳೊಂದಿಗೆ ಕಾರ್ಯನಿರ್ವಹಿಸಲಾಗುವುದು’ ಎಂದು ಯೆರ್ಮಾಕ್ ಹೇಳಿದ್ದಾರೆ.

ಮಿತ್ರ ರಾಷ್ಟ್ರಗಳು ಪ್ರತಿಪಾದಿಸುತ್ತಿರುವ ಶಾಂತಿ ಒಪ್ಪಂದದ ಪರಿಷ್ಕರಣೆಯು ರಷ್ಯಾಕ್ಕೆ ಹೆಚ್ಚು ಅನುಕೂಲವಾಗುವಂತಿದೆ ಎಂದು ಹೇಳಲಾಗುತ್ತಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ನಾಲ್ಕು ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಇದನ್ನು ಕೊನೆಗಾಣಿಸುವ ಸಲುವಾಗಿ ಅಮೆರಿಕವು 28 ಅಂಶಗಳನ್ನು ಒಳಗೊಂಡ ಶಾಂತಿ ಒಪ್ಪಂದವೊಂದನ್ನು ರೂಪಿಸಿದೆ.

ರುಬಿಯೊ ಸಭೆ

ರಷ್ಯಾ–ಉಕ್ರೇನ್ ನಡುವಿನ ಶಾಂತಿ ಒಪ್ಪಂದ ಕುರಿತಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಉಕ್ರೇನ್ ಹಾಗೂ ಯುರೋಪ್ನ ಮಿತ್ರ ರಾಷ್ಟ್ರಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಆ್ಯಂಡ್ರಿ ಯೆರ್ಮಾಕ್ ಅಮೆರಿಕ ಸೇನೆಯ ಕಾರ್ಯದರ್ಶಿ ಡ್ಯಾನ್ ಡ್ರಿಸ್ಕಾಲ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಹಾಗೂ ಫ್ರಾನ್ಸ್ ಜರ್ಮನಿ ಮತ್ತು ಬ್ರಿಟನ್ ಪ್ರತಿನಿಧಿಗಳು ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.